ಇಎನ್ಎಲ್ ಡೆಸ್ಕ್
ನವದೆಹಲಿ: ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ರೈತರು ಒಂದು ವರ್ಷಕ್ಕೂ ಅಧಿಕ ಕಾಲದಿಂದ ನಡೆಸುತ್ತಿದ್ದ ಪ್ರತಿಭಟನೆ ಕೊನೆಗೊಂಡಿದೆ.
ಶನಿವಾರ ನಸುಕಿಂದಲೇ ರೈತರು ದೆಹಲಿ ಹೊರ ವಲಯದ ಸಿಂಘು, ಟಿಕ್ರಿ, ಘಾಜಿಪುರ ಗಡಿಯಿಂದ ತೆರಳುತ್ತಿದ್ದಾರೆ. ಅದರ ವಿಡಿಯೊ, ಫೋಟೊಗಳು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ರೈತರು ತಮ್ಮ ತಮ್ಮ ಪ್ರತಿಭಟನಾ ಟೆಂಟುಗಳನ್ನು ಬಿಚ್ಚುತ್ತಿರುವುದು, ಸಂಭ್ರಮಾಚರಣೆ ನಡೆಸುತ್ತಿರುವ ಫೋಟೋ ಗಮನ ಸೆಳೆಯುತ್ತಿವೆ.
ಪಂಜಾಬ್ ಹರಿಯಾಣದ ಶಂಭು ಗಡಿ ಭಾಗಕ್ಕೆ ರೈತರು ವಾಪಸ್ ಬರುತ್ತಿದ್ದಂತೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಗೈಯಲಾಗಿದೆ ಎಂದು ಎಎನ್ಐ ವರದಿ ಮಾಡಿದೆ.