ಇಎನ್ಎಲ್ ಡೆಸ್ಕ್
- ಓಮಿಕ್ರಾನ್ ತಡೆಯಲು ದಿಟ್ಟ ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರ ಮತ್ತೆ ಟಫ್ ರೂಲ್ಸ್ ಜಾರಿ ಮಾಡಿದೆ. ಮದುವೆ, ಇತರೆ ಸಮಾರಂಭದಲ್ಲಿ ಪಾಲ್ಗೊಳ್ಳುವವರ ಸಂಖ್ಯೆಯನ್ನು 500ಕ್ಕೆ ಸೀಮಿತ ಮಾಡಿದೆ. ಮಾಲ್, ಸಿನಿಮಾ ಮಂದಿರ ಪ್ರವೇಶಕ್ಕೆ ಎರಡು ಡೋಸ್ ಕಡ್ಡಾಯ ಮಾಡಿದೆ. ಶಾಲಾ ಕಾಲೇಜುಗಳಲ್ಲಿ ಜ.15ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸದಂತೆ ನಿರ್ಬಂಧ ಹೇರಲಾಗಿದೆ.
- ಓಮಿಕ್ರಾನ್ ಭೀತಿ ನಡುವೆ ಬೆಳಗಾವಿ ಅಧಿವೇಶನ ರದ್ದುಗೊಳಿಸ ಸುದ್ದಿಗೆ ಸರ್ಕಾರ ತೆರೆ ಎಳೆದಿದೆ. ನಿಗದಿಯಂತೆ ಡಿ.13ರಿಂದ ಡಿ.24ರವರೆಗೆ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ.
- ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ ರೂಪಾಂತರಿ ಓಮಿಕ್ರಾನ್ 4ನೇ ಅಲೆ ಲಗ್ಗೆ ಇಟ್ಟಿದೆ. ಒಂದೇ ದಿನ 11500 ಕೋವಿಡ್ ಪ್ರಕರಣ ದೃಡಪಟ್ಟಿದೆ. ದೇಶದ 9 ಪ್ರಾಂತ್ಯಗಳ ಪೈಕಿ 7 ಪ್ರಾಂತ್ಯದಲ್ಲಿ ಓಮಿಕ್ರಾನ್ ಹರಡಿದೆ.
- ಗುರುವಾರ ಕಾಂಗ್ರೆಸ್ ಟೀಕಿಸಿದ್ದ ಮಮತಾ ಬ್ಯಾನರ್ಜಿ ಶುಕ್ರವಾರ ತಮ್ಮ ಪಕ್ಷದ ಮುಖವಾಣಿ ಜಾಗೋ ಬಾಂಗ್ಲಾ ಮೂಲಕ ತಾವು ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಸೂಚ್ಯವಾಗಿ ಘೋಷಣೆ ಮಾಡಿಕೊಂಡಿದ್ದಾರೆ. ಜತೆಗೆ ಕಾಂಗ್ರೆಸ್ ಪಕ್ಷದ ವಿರುದ್ಧ ಟೀಕಾ ಪ್ರಕಾರ ಮುಂದುವರಿಸಿದೆ.
- ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಭಾರತ ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ 2ನೇ ದಿನ ಪಂದ್ಯ ಪ್ರಸ್ತುತ 256/6 ಗಳಿಸಿ ಬ್ಯಾಟಿಂಗ್ ಮುಂದುವರಿಸಿದೆ. ಮಯಾಂಕ್ ಅಗರವಾಲ್ 132 ರನ್ ಗಳಿಸಿದ್ದರೆ, ಅಕ್ಸರ್ ಪಟೇಲ್ 18 ರನ್ ಗಳಿಸಿ ಕ್ರೀಸಿನಲ್ಲಿದ್ದಾರೆ. ದಿನದ ಪಂದ್ಯ ಆರಂಭ ಆಗುತ್ತಲೆ ಭಾರತ ವೃದ್ಧಿಮಾನ್ ಶಹಾ (27), ರವಿಚಂದ್ರನ್ ಅಶ್ವಿನ್ (0) ವಿಕೆಟ್ ಕಳೆದುಕೊಂಡಿತು.
- ಜರ್ಮನಿಗೆ ಹೊಸ ಚಾನ್ಸಲರ್ ಆಯ್ಕೆ ಮುಂದಿನವಾರ ನಡೆಯುವುದು ನಡೆಯುವುದುಬಹುತೇಕ ನಿಶ್ಚಿತವಾಗಿದೆ. 16 ವರ್ಷಗಳ ನಂತರ ಅಧಿಕಾರದಿಂದ ಕೆಳಗಿಳಿದ ಆಂಜೆಲಾ ಮಾರ್ಕೆಲ್ ಜಾಗಕ್ಕೆ ಒಲಾಫ್ ಷೋಲ್ಟ್ ಆಯ್ಕೆ ಖಚಿತವಾಗಿದೆ
- ಆಸ್ಟ್ರಿಯಾದಲ್ಲಿ ಹೊಸ ಚಾನ್ಸಲರ್ ಆಯ್ಕೆ ನಡೆಯುತ್ತಿದೆ. ಆಡಳಿತಾರೂಢ ಪೀಪಲ್ಸ್ ಪಾರ್ಟಿಯ ಆಂತರಿಕ ಸಚಿವ ಕಾರ್ಲ್ ನೆಹಮ್ಮರ್ ಹೊದ ಚಾನ್ಸಲರ್ ಆಗುವುದು ಬಹುತೇಕ ನಿಶ್ಚಿತವಾಗಿದೆ.