24.3 C
Hubli
ಮೇ 26, 2024
eNews Land
ಜಿಲ್ಲೆ ಸುದ್ದಿ

ಪಕ್ಷಾತೀತ, ಧರ್ಮಾತೀತ, ಕಾನೂನಾತ್ಮಕವಾಗಿ ಕರ್ತವ್ಯ ನಿರ್ವಹಿಸಿ: ಡಿಸಿ ಗುರುದತ್ತ ಹೆಗಡೆ

ಲೋಕಸಭೆ ಚುನಾವಣೆಗೆ ಪೂರಕವಾಗಿ ರಾಜ್ಯದಲ್ಲಿ ಬಿಜೆಪಿಗೆ ಜನಾದೇಶ: ಡಾ.ಕೆ.ಸುಧಾಕರ್

For news, articles and advertisement.
For more information: enewsland@gmail.com

ಇಎನ್ ಎಲ್ ಧಾರವಾಡ: ಚುನಾವಣೆಗಳನ್ನು ನ್ಯಾಯಸಮ್ಮತವಾಗಿ ಮತ್ತು ನಿಯಮಾನುಸಾರ ಜರುಗಿಸಲು ಚುನಾವಣಾ ಕರ್ತವ್ಯಕ್ಕೆ ನೇಮಕವಾದ ಅಧಿಕಾರಿ ಸಿಬ್ಬಂದಿಗಳು ಪಕ್ಷಾತೀತವಾಗಿ, ಧರ್ಮಾತೀತವಾಗಿ ಮತ್ತು ಕಾನೂನಾತ್ಮಕವಾಗಿ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

ಇದನ್ನೂ ಓದಿ:ಬಿಜೆಪಿ 13 ಆಕಾಂಕ್ಷಿಗಳಿಂದ ಬಂಡಾಯದ ಬಾಂಬ್ ಸ್ಫೋಟ: ಯಾರಿಗೆ ಎಫೆಕ್ಟ್; ?
ಅವರು ಇಂದು ಬೆಳಿಗ್ಗೆ ನಗರದ ಆಲೂರು ವೆಂಕಟರಾವ ಸಾಂಸ್ಕೃತಿಕ ಸಭಾಭವನದಲ್ಲಿ ಜಿಲ್ಲಾಡಳಿತ ಕರ್ನಾಟಕ ಸಾರ್ವತ್ರಿಕ ಚುನಾವಣೆ-23ರ ಚುನಾವಣೆಗೆ ನೇಮಕವಾದ ಚುನಾವಣಾಧಿಗಳು, ಸಹಾಯಕ ಚುನಾವಣಾಧಿಕಾರಿಗಳು ಮತ್ತು ಸೆಕ್ಟರ್ ಆಫೀಸರ್, ಎಪ್. ಎಸ್.ಟಿ., ಎಸ್. ಎಸ್.ಟಿ., ವಿ.ಎಸ್.ಟಿ, ವಿ.ವಿ.ಟಿ ಹಾಗೂ ಸಹಾಯಕ ವೆಚ್ಚ ವೀಕ್ಷಕರು, ಅಕೌಂಟ್ಸ್ ತಂಡಗಳ ಸದಸ್ಯರಿಗೆ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ, ಮಾತನಾಡಿದರು.

ಇದನ್ನೂ ಓದಿ:ಅವಿರೋಧ ಆಯ್ಕೆ ಬೇಡ: ಕುಸ್ತಿನೇ ಬೇಕು: ಕಾಂಗ್ರೆಸ್ ನಾಯಕರಿಗೆ  ಸಿಎಂ ಬಹಿರಂಗ ಸವಾಲು
ಚುನಾವಣೆಗಳನ್ನು ಮುಕ್ತ ಮತ್ತು ಪಾರದರ್ಶಕವಾಗಿ ನಡೆಸಲು ಸೇವೆಗೆ ಸಮರ್ಪಿತ (ಡೆಡಿಕೆಟೆಡ್) ಸಿಬ್ಬಂದಿಗಳ ಅಗತ್ಯವಿದೆ. ಚುನಾವಣಾ ಕರ್ತವ್ಯ ಪವಿತ್ರ ಕಾರ್ಯ. ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ಪ್ರತಿಯೊಬ್ಬರು ತಮ್ಮ ವಯಕ್ತಿಕ ಗುರುತುಗಳನ್ನು ಬಿಟ್ಟು ನಿಷ್ಪಕ್ಷಪಾತವಾಗಿರಬೇಕು.

ಇದನ್ನೂ ಓದಿ:₹1ಕೋಟಿ ಮೌಲ್ಯದ 400ಮೊಬೈಲ್ ಪತ್ತೆ ಮಾಡಿ ಸಾರ್ವಜನಿಕರಿಗೆ ತಲುಪಿಸಿದ ಹುಬ್ಬಳ್ಳಿ-ಧಾರವಾಡ ಪೊಲೀಸರು!!!
ಎಲ್ಲ ಇಲಾಖೆ ಅಧಿಕಾರಿಗಳು ಒಂದು ತಂಡವಾಗಿ ಕಾರ್ಯ ಮಾಡಬೇಕು. ಚುನಾವಣಾ ಅಧಿಕಾರಿಗಳ ನೇತೃತ್ವದಲ್ಲಿ ಕರ್ತವ್ಯನಿರತ ಎಲ್ಲ ತಂಡಗಳು ಪರಸ್ಪರ ಸಂಪರ್ಕದಲ್ಲಿದ್ದು, ಸಮನ್ವಯತೆಯಿಂದ ಕಾರ್ಯ ನಿರ್ವಹಸಿಬೇಕೆಂದು ಅವರು ಹೇಳಿದರು.

ಇದನ್ನೂ ಓದಿ:SOUTH WESTERN RAILWAY: CHANGE IN TRAIN SERVICES
ಯಾವುದೇ ರೀತಿಯ ಚುನಾವಣಾ ಅಕ್ರಮಗಳು ನಡೆಯದಂತೆ ತೀವ್ರ ನಿಗಾವಹಿಸಿ, ತರಬೇತಿಯಲ್ಲಿ ನೀಡುವ ಮಾಹಿತಿ ಹಾಗೂ ಚುನಾವಣಾ ಆಯೋಗದ ಹ್ಯಾಂಡ್ ಬುಕ್ಕ್ ಗಳನ್ನು ಓದಿ, ಅನುಸರಿಸಬೇಕು ಎಂದರು.

ಇದನ್ನೂ ಓದಿ:ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕನ್ನಡ ಕಲಿಕೆ ಕುರಿತು ತಪ್ಪು ಮಾಹಿತಿ:ನಾಡೋಜ ಡಾ.ಮಹೇಶ ಜೋಶಿ ಅಸಮಾಧಾನ
ಜಿಲ್ಲಾ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಅವರು ಮಾತನಾಡಿ, ಚುನಾವಣಾ ಕರ್ತವ್ಯ ನಿರ್ವಹಣೆಯಲ್ಲಿ ಪ್ರತಿ ಸಿಬ್ಬಂದಿ ತಮಗೆ ವಹಿಸಿದ ಕರ್ತವ್ಯವನ್ನು ಪ್ರಾಮಾಣಿಕತೆ ಮತ್ತು ಚುನಾವಣಾ ನಿಯಮಗಳಿಗೆ ಅನುಸಾರವಾಗಿ ನುರ್ವಹಿಸಬೇಕು. ಪೊಲೀಸ್ ಸಿಬ್ಬಂದಿ ಚುನಾವಣಾ ತಂಡಗಳಲ್ಲಿದ್ದು, ಅಗತ್ಯ ಕಾರ್ಯ ಮಾಡುತ್ತಿದೆ. ನಿಯೋಜಿತ ಸಿಬ್ಬಂದಿಗಳು ಒಟ್ಟಾಗಿ ನಿಯಮಾನುಸಾರ ಕೆಲಸ ಮಾಡುವದರಿಂದ ಮುಕ್ತ, ನ್ಯಾಯಸಮ್ಮತ ಚುನಾವಣೆ ಸಾಧ್ಯವಾಗುತ್ತವೆ ಎಂದು ಅವರು ಹೇಳಿದರು.

ಇದನ್ನೂ ಓದಿ:ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಆತಂಕ ಇಲ್ಲ: ಸಿಎಂ ಬೊಮ್ಮಾಯಿ
ಕಾರ್ಯಾಗಾರದಲ್ಲಿ ವಾಣಿಜ್ಯ ಮತ್ತು ತೆರಿಗೆ ಇಲಾಖೆ ಜಂಟಿ ಆಯುಕ್ತ ನಾಗರಾಜರಾವ್ ಬಿ., ರಾಜ್ಯ ತರಬೇತಿದಾರ ಪ್ರೊ ಎನ್.ವಿ. ಶಿರಗಾಂವಕರ ಚುನಾವಣೆ ಕಾರ್ಯದ ಕುರಿತು ವಿಶೇಷ ಉಪನ್ಯಾಸ ಮತ್ತು ತರಬೇತಿ ನೀಡಿದರು.

ಇದನ್ನೂ ಓದಿ:ಗೋ ಸಾಗಾಣೆ ವೇಳೆ ವ್ಯಕ್ತಿ ಅನುಮಾನಸ್ಪದ ಸಾವು ಪ್ರಕರಣ
ಜಿಲ್ಲೆಯ ವಿವಿಧ ವಿಧಾನಸಭಾ ಮತಕ್ಷೇತ್ರಗಳ ಚುನಾವಣಾಧಿಕಾರಿಗಳಾದ ಡಾ.ಗೋಪಾಲ ಕೃಷ್ಣ. ಬಿ., ಭರತ ಎಸ್.,ಎಸ್.ಎಸ್.ಸಂಪಗಾಂವಿ, ವಿನೋದಕುಮಾರ ಹೆಗ್ಗಳಗಿ, ಶ್ರವಣಕುಮಾರ ನಾಯಕ್, ಬಸವರಾಜ ಹೆಗ್ಗನಾಯಕ್ ಎಂ.ಸಿ.ಸಿ ಜಿಲ್ಲಾ ನೊಡಲ್ ಅಧಿಕಾರಿ ಯಶಪಾಲ ಕ್ಷೀರಸಾಗರ, ಜಿಲ್ಲಾ ಮತದಾರಪಟ್ಟಿ ನೊಡಲ್ ಅಧಿಕಾರಿ ಡಾ.ಸಂತೋಷಕುಮಾರ ಬಿರಾದಾರ ವೇದಿಕೆಯಲ್ಲಿದ್ದರು.

ಇದನ್ನೂ ಓದಿ:80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತ ಚಲಾಯಿಸಲು ಅವಕಾಶ: ಚುನಾವಣಾಧಿಕಾರಿ ವಿನೋದ ಹೆಗ್ಗಳಗಿ
ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಚುನಾವಣಾಧಿಕಾರಿ ಡಾ.ಮೋಹನ ಭಸ್ಮೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಇದನ್ನೂ ಓದಿ:80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತ ಚಲಾಯಿಸಲು ಅವಕಾಶ: ಚುನಾವಣಾಧಿಕಾರಿ ವಿನೋದ ಹೆಗ್ಗಳಗಿ
ಕಾರ್ಯಾಗಾರದಲ್ಲಿ ಜಿಲ್ಲೆಯ ಏಳು ವಿಧಾನ ಸಭಾ ಮತಕ್ಷೇತ್ರದ ಚುನಾವಣಾ ಕಾರ್ಯಕ್ಕೆ ನಿಯೋಜಿತಗೊಂಡ ವಿವಿಧ ತಂಡಗಳ ಸದಸ್ಯರು, ಪೊಲೀಸ್ ಸೆಕ್ಟರ್ ಆಫೀಸರ್, ಎಂ.ಸಿ.ಸಿ ನೊಡಲ್ ಅಧಿಕಾರಿಗಳು ಭೌತಿಕವಾಗಿ ಮತ್ತು ಕರ್ತವ್ಯನಿರತ ಸಿಬ್ಬಂದಿಗಳು ವೇಬೇಕ್ಸ್ ಮೂಲಕ ಹಾಜರಾಗಿದ್ದರು.

Related posts

SWR: CONTINUATION OF PARTIAL CANCELLATION OF TRAIN

eNEWS LAND Team

ಮುಂದಿನ ವರ್ಷದಿಂದ ಜಿಲ್ಲಾ ಕೇಂದ್ರಗಳಲ್ಲಿ ಸರ್.ಎಮ್.ವಿ ಜನ್ಮ ದಿನಾಚರಣೆ: ಸಿಎಂ ಬೊಮ್ಮಾಯಿ

eNEWS LAND Team

ರಾಣೇಬೆನ್ನೂರು: ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ 5 ಎಕರೆ ಭೂಮಿ ಮಂಜೂರು

eNewsLand Team