30 C
Hubli
ನವೆಂಬರ್ 30, 2022
eNews Land
ಸುದ್ದಿ

ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಆಡಳಿತಕ್ಕೆ ತರಲು ಕರೆ: ಸಚಿವ ಮುನೇನಕೊಪ್ಪ

Listen to this article
ಇಎನ್ಎಲ್ ಅಣ್ಣಿಗೇರಿ:
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತವಿದ್ದಂತೆ ಅಣ್ಣಿಗೇರಿ ಪುರಸಭೆಯಲ್ಲಿ ಬಿಜೆಪಿ ಆಡಳಿತ ಪಕ್ಷ ತರುವಲ್ಲಿ ಮತದಾರರ ಬಿಜೆಪಿ ಪಕ್ಷದ ೨೩ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿದರು. ಪುರಸಭೆ ಚುನಾವಣೆ ಡಿ.೨೭ರಂದು ಜರುಗುವ ಹಿನ್ನಲೆಯಲ್ಲಿ ಪಟ್ಟಣದ ಮಾರ್ಕೆಟ್ ಬಯಲಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣೆ ಪ್ರಚಾರ ನಿಮಿತ್ಯ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ನಂತರ ಕಳೆದ ೭೦ ವರ್ಷಗಳಿಂದ ಕಾಂಗ್ರೆಸ್ ಸರ್ಕಾರ  ದೇಶವನ್ನು ಲೂಟಿ ಮಾಡುತ್ತಾ ಬಂದಿದೆ. ಯಾವುದೇ ಜನಪರ ಅಭಿವೃದ್ಧಿ ಕಾರ್ಯ ಆಗಿಲ್ಲ. ಜಾತಿ ವಿಷಬೀಜ ಬಿತ್ತಿ ಸಮಾಜದ ಸಮುದಾಯ ಒಗ್ಗಟ್ಟನ್ನು ವಿಭಜಿಸಿ, ಮತಬ್ಯಾಂಕ ರಾಜಕಾರಣ ಮಾಡಿ ಆಡಳಿತ ನಡಿಸಿದ್ದಾರೆ. ಸರ್ವ ಜನಾಂಗದ ಸಮಬಾಳು ಕಲ್ಪಿಸುವ ಹಿನ್ನಲೆಯಲ್ಲಿ ಬಿಜೆಪಿ ಪಕ್ಷ ಜಾತಿ-ಮತ- ಅನ್ನದೇ ದೇಶದ ೧೩೫ ಕೋಟಿ ಜನಸಂಖ್ಯೆಯಲ್ಲಿ ಕೋವಿಡ್-೧೯ ರೋಗಮುಕ್ತಗೊಳಿಸಲು ದೇಶದ ಜನರ ಆರೋಗ್ಯ ರಕ್ಷಣೆಗೆ ೧೦೫ ಕೋಟಿ ಜನರಿಗೆ ಉಚಿತ ಲಸಿಕೆ ನೀಡಿದೆ.
ಅಣ್ಣಿಗೇರಿ ತಾಲೂಕ ಕೇಂದ್ರ ಆಗಲು ಯಾವುದೇ ವರದಿಯಲ್ಲಿ ಪ್ರಸ್ತಾವನೆ ಇದ್ದಿಲ್ಲ. ನಾನು ಮುಖ್ಯಮಂತ್ರಿಯಿದ್ದಾಗ ರಾಜಕೀಯ ಇಚ್ಛಾಶಕ್ತಿ ಬಳಿಸಿ, ೪೩ ತಾಲೂಕುಗಳಲ್ಲಿ ಅಣ್ಣಿಗೇರಿ, ಅಳ್ನಾವರ, ಸೇರಿಸಿ ತಾಲೂಕ ಘೋಷಣೆ ಮಾಡಿ ೨ ಕೋಟಿ ರೂಗಳು  ತಾಲೂಕ ಅಭಿವೃದ್ದಿಗೆ ಅನುದಾನ ಮಂಜೂರ ಮಾಡಿದೆ. ನಂತರ ಬಂದ ಕಾಂಗ್ರೆಸ್ ಸರ್ಕಾರ ತಾಲೂಕಿನ ಅಸ್ತಿತ್ವಕ್ಕೆ ಮನಸ್ಸು ಮಾಡದೇ ಕಾಲಹರಣ ಮಾಡುತ್ತಾ ಸಾಗಿತು. ಜನರ ಒತ್ತಾಯ ಪ್ರತಿಭಟನೆ  ಹೆಚ್ಚಿದಂತೆ ಕೊನೆಯ ಅವಧಿಯಲ್ಲಿ ೭ ತಾಲೂಕ ಸೇರಿಸಿ ೫೦ ಹೊಸ ತಾಲೂಕಗಳನ್ನು ಮಾಜಿ ಸಿಎಂ ಸಿದ್ದರಾಮಯ್ಯ ಘೋಷಿಸಿದರು. ತಾಲೂಕಿನ ಅಭಿವೃದ್ಧಿಗೆ ಒಂದು ಪೈಸೆ ಅನುದಾನ ಬಿಡುಗಡೆ ಮಾಡಲಿಲ್ಲ ಎಂದರು.
ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ ಬಿಜೆಪಿ ಸರ್ಕಾರ ರಾಜ್ಯದಲ್ಲಿ ೮ ವರ್ಷದ ಆಡಳಿತದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯ ಇನ್ನುಳಿದ ಆಡಳಿತ ಪಕ್ಷ ಮಾಡಿಲ್ಲ. ೨೩ ವಾರ್ಡಿನ ಪ್ರತಿ ಮನೆಗೆ ತೆರಳಿ ಆದಷ್ಟು ಶೀಘ್ರದಲ್ಲಿ ನಿತ್ಯ ಕುಡಿಯುವ ನೀರು ಕಲ್ಪಿಸುವ ಕಾರ್ಯ ಮಾಡುತ್ತೇವೆಂದು ಭರವಸೆ ನೀಡಿ ಮತಯಾಚಿಸಿದರು ಎಂದು ೨೩ ವಾರ್ಡಗಳಿಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಮತದಾರರಿಗೆ  ಮಾತು ಕೊಡಿ ಎಂದರು.
ಪಟ್ಟಣದ ಸಮಗ್ರ ಅಭಿವೃದ್ಧಿಗೆ, ರಾಜಕೀಯ ಇಚ್ಛಾಶಕ್ತಿಬಲ ಬೇಕಾದರೇ, ಪುರಸಭೆಯಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತರಬೇಕಾದ ಅವಶ್ಯಕತೆಯಿದೆ. ಕೇಂದ್ರ ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಠಾನ ತರುವ ಮೂಲಕ ಮೂಲಸೌಲಭ್ಯ ಜನಪರ ಅಭಿವೃದ್ಧಿ ಸೇವೆ ಕಲ್ಪಿಸಲು ಸಾಧ್ಯ. ತಾಲೂಕಿನ ಎಲ್ಲಾ ಕಛೇರಿಗಳನ್ನು ಹಂತಹoತವಾಗಿ ತೆರೆದು ಸಾರ್ವಜನಿಕ ಸೇವೆಗೆ ಕಲ್ಪಿಸುವುದು. ಪಟ್ಟಣದ ಬಹುದಿನ ಕುಡಿಯುವ ನೀರಿನ ಸಮಸ್ಯೆ ಈಡೇರಿಸಲು ೨೪/೭ ನಿತ್ಯ ಮಲಪ್ರಭಾ ನೀರು ಪ್ರತಿ ಮನೆಗೆ ಪೂರೈಸಲು ಸದ್ಯದಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು. ಪ್ರಾಸ್ತವಿಕವಾಗಿ ಮಾಜಿ ಕ್ರೇಡಿಲ್ ಅಧ್ಯಕ್ಷ ಷಣ್ಮುಖ ಗುರಿಕಾರ ಮಾತನಾಡಿ, ಬಿಜೆಪಿ ಸರ್ಕಾರವಿದ್ದಾಗ ಪಟ್ಟಣದ ಅಭಿವೃದ್ದಿಗಳು ಕಾಮಗಾರಿಗಳು ಜರುಗಿದ್ದು, ಆ ಹಿನ್ನಲೆಯಲ್ಲಿ ತಾಲೂಕಿನ ಸಮಗ್ರ ಅಭಿವೃದ್ದಿಗೆ ಬಿಜೆಪಿ ಸರ್ಕಾರ ಪುರಸಭೆ ಆಡಳಿತದಲ್ಲಿ ತರಲು ಮತಯಾಚಿಸುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಧಾ.ಜಿ.ಅಧ್ಯಕ್ಷ ಬಸವರಾಜ ಕುಂದಗೋಳಮಠ, ಚುನಾವಣೆ ಉಸ್ತವಾರಿ ಈರಣ್ಣಾ ಜಡಿ, ಶಿವಾನಂದ ಹಾಳದೋಟರ, ಬಸವರಾಜ ಯಳವತ್ತಿ, ಶಿವಾನಂದ ಹೊಸಳ್ಳಿ, ಬಿಜೆಪಿ ಪಕ್ಷದಿಂದ ಪುರಸಭೆ ಚುನಾವಣೆ ಅಖಾಡಕ್ಕೆ ನಿಂತ ಬಿಜೆಪಿ ೨೩ ಅಭ್ಯರ್ಥಿಗಳು,ಕಾರ್ಯಕರ್ತರು, ಬಿಜೆಪಿ ಮುಖಂಡರು,  ಉಪಸ್ಥಿತಿರಿದ್ದರು.

Related posts

ಹುಬ್ಬಳ್ಳಿಲೂ ಮಕ್ಕಳಿಗೆ ಕೋವಿಡ್ ಲಸಿಕಾಕರಣ

eNewsLand Team

ಮೂರು ಕೃಷಿ ಕಾಯಿದೆ ವಾಪಸ್: ಪ್ರಧಾನಿ ಮೋದಿ ಘೋಷಣೆ

eNewsLand Team

ನುಂಗಣ್ಣ ಕ್ಷೇತ್ರದ ಶಾಸಕರಾದರೆ ಹಾನಗಲ್ಲ ಉಳಿತದಾ ? ಸಿದ್ರಾಮಯ್ಯ ಪ್ರಶ್ನೆ …?

eNEWS LAND Team