34 C
Hubli
ಮಾರ್ಚ್ 23, 2023
eNews Land
ಸುದ್ದಿ

‘ ಏಕ ಲವ್ ಯಾ’ ಚಿತ್ರದ ‘ಅನಿತಾ ಅನಿತಾ’ ಸಾಂಗ್ ಹುಬ್ಬಳ್ಳಿಯಲ್ಲಿ ರಿಲೀಸ್

Listen to this article

‘ ಒಂದು ಊರಲಿ ಕೊನೆ ಬೀದಿಲಿ ಇದ್ಲು ಒಬ್ಬಳು ಮುದ್ದು ದೇವತೆ ‘ ಎಂಬ ಹಾಡಿನ ಸಾಲಿಗೆ ಸಾಹಿತ್ಯ ರಚಿಸಿದ್ದು ಗದಗಿನ ‘ಶರಣಕುಮಾರ ಗಜೇಂದ್ರಗಡ’

ಇಎನ್ಎಲ್ ಫಿಲ್ಮ್ ಡೆಸ್ಕ್

ಹುಬ್ಬಳ್ಳಿ: ಜೋಗಿ ಪ್ರೇಮ್ ನಿರ್ದೇಶನ, ರಕ್ಷಿತಾ ನಿರ್ಮಾಣದ ಏಕ ಲವ್ ಯಾ ಸಿನಿಮಾದ ನಾಲ್ಕನೇ ಹಾಡು ‘ ಅನಿತಾ ಅನಿತಾ’ ಬಿಡುಗಡೆ ಹುಬ್ಬಳ್ಳಿಯಲ್ಲಿ ಶನಿವಾರ ಬಿಡುಗಡೆ ಆಯ್ತು.

ಈಗಾಗಲೇ ಹುಡುಗಿಯರೂ ಲವ್ ಬ್ರೇಕ್ ಅಪ್ ಸೆಲೆಬ್ರೆಟ್ ಮಾಡಲಿ ಎಂದು ಬಿಡುಗಡೆ ಮಾಡಲಾದ ‘ಎಣ್ಣೆಗೂ ಹೆಣ್ಣಿಗೂ’ ಸಾಂಗ್ ಹಿಟ್ ಆದ ಬಳಿಕ ಹುಡುಗರಿಗಾಗಿ ಬ್ರೇಕ್ ಅಪ್ ಪ್ಯಾಥೋ ಸಾಂಗ್ ‘ ಅನಿತಾ ಅನಿತಾ’ ಹಾಡು ರಿಲೀಸ್ ಆಗಿದೆ.

ರಕ್ಷಿತಾ ತಮ್ಮ ರಾಣಾ ಅಭಿನಯದ ‘ಏಕ್ ಲವ್ ಯಾ ಚಿತ್ರದ ಈ ಹಾಡು ಎ2 ಮ್ಯೂಸಿಕ್ ಯೂಟ್ಯೂಬ್‌ ಚಾನೆಲ್‌ ಚಿತ್ರತಂಡ ಬಿಡುಗಡೆ ಆಗಿದೆ‌
ಈ ಹಾಡಿಗೆ ಚಿತ್ರದ ನಾಯಕ ರಾಣಾ ತನ್ನ ಪ್ರೇಯಸಿಯ ನೆನಪಿನ ಗುಂಗಿನಲ್ಲಿ ಹಾಡಿಗೆ ಜೈಲಿನ ಕೈದಿಗಳ ಜೊತೆಗೆ ಸ್ಟೆಪ್ಸ್ ಹಾಕಿದ್ದಾರೆ. ಜೊತೆಗೆ ಚಿತ್ರದ ನಾಯಕಿಯರಾದ ರಚಿತಾ ರಾಮ್ ಹಾಗೂ ಗ್ರೀಷ್ಮಾ ನಾಣಯ್ಯ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಅನಿತಾ ಯಾರು ಎಂಬ ಪ್ರಶ್ನೆಯನ್ನು ನಿರ್ದೇಶಕ ಜೋಗಿ ಪ್ರೇಮ್ ಸಸ್ಪೆನ್ಸ್ ಆಗಿ ಇಟ್ಟಿದ್ದಾರೆ.

‘ ಒಂದು ಊರಲಿ ಕೊನೆ ಬೀದಿಲಿ ಇದ್ಲು ಒಬ್ಬಳು ಮುದ್ದು ದೇವತೆ’ ಎಂಬ ಹಾಡಿನ ಸಾಲಿಗೆ ಶರಣಕುಮಾರ್ ಗಜೇಂದ್ರಗಡ  ಸಾಹಿತ್ಯ ರಚಿಸಿದ್ದು, ಜನಪ್ರಿಯ ಗಾಯಕ ಶಂಕರ್ ಮಹಾದೇವನ್ ಈ ಹಾಡಿಗೆ ದನಿಯಾಗಿದ್ದಾರೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯಾ ಸಂಗೀತ ಸಂಯೋಜನೆಯಲ್ಲಿ ಈ ಹಾಡು ಮೂಡಿಬಂದಿದೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ನಿರ್ದೇಶಕ ಪ್ರೇಮ್, ನನಗೂ ಹುಬ್ಬಳ್ಳಿಗೂ ತುಂಬಾ ಲಿಂಕ್ ಇದೆ. ಜೋಗಿ ಚಿತ್ರದ ಹಾಡೊಂದನ್ನು ಇಲ್ಲಿ ಬಿಡುಗಡೆ ಮಾಡಲಾಗಿತ್ತು. ಪ್ರತಿ ಸಿನಿಮಾ ನಿರ್ದೇಶನ ಮಾಡುವಾಗಲೂ ನಾನು ಹೊಸಬ. ಹೊಸ ಹುಡುಗರಿಗೆ ಸಿನಿಮಾ ಮಾಡಿದ್ದೇನೆ.

ಪ್ರತಿ ಹಾಡು ಬಿಡುಗಡೆ ಆದಾಗಲೂ ಅಪ್ಪು ಕರೆ ಮಾಡುತ್ತಿದ್ದರು. ಆದರೆ, ಈಗ ಶೂನ್ಯ ಆವರಿಸಿದೆ. ನನ್ನ ಉಸಿರು ಇರುವರೆಗೂ ಅವರ ನಂಬರ್ ಇರಲಿದೆ ಎಂದು ಪವರ್ ಸ್ಟಾರ್ ನೆನಪಿಸಿಕೊಂಡರು.

ಹಿರೋ ರಾಣಾ ಮಾತನಾಡಿ, ಓದು ಮುಗಿದ ಬಳಿಕ ರಂಗಭೂಮಿಯಲ್ಲಿ ನಟನೆ ಕಲಿತೆ. ಬಳಿಕ ನ್ಯೂಯಾರ್ಕ್ ನಲ್ಲಿ ಒಂದಷ್ಟು ಸಿನಿಮಾ ಬಗ್ಗೆ ಕಲಿತೆ. ವಿಲನ್ ಸಿನಿಮಾದಲ್ಲಿ ಅಸಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ‌‌ ಆರಂಭಿಸಿದೆ. ಸುದೀಪ್ ಸರ್ ಆ್ಯಕ್ಟ್ ಮಾಡೋವಾಗ ಅವರಿಗೆ ಎಲ್ ಬೋರ್ಡ್ ರೀತಿ ಮಾನಿಟರ್ ಮಾಡಿದ್ದೆ. ಪ್ರೇಮ್ ಸರ್ ಹತ್ರ ಅಲ್ಲೇ ಸಾಕಷ್ಟು ಬೈಸಿಕೊಂಡೆ‌. ನಂತರ ಈ ಸಿನಿಮಾ ಕೂಡ ಅದೇ ಫ್ಲೋದಲ್ಲಿ ಹೋಗಿದೆ ಎಂದು ತಮ್ಮ  ಡೆಬ್ಯೂ ಅನುಭವ ಹಂಚಿಕೊಂಡರು.

ನಾಯಕಿ ರೀಷ್ಮಾ ನಾಣಯ್ಯ ಮಾತನಾಡಿ ಹುಟ್ಟಿದ್ದು ಬೆಳೆದಿದ್ದು ಬೆಂಗಳೂರಿನಲ್ಲಿ. ಚಿಕ್ಕವಳಿದ್ದಾಗ ಪ್ರೇಮ್ ಸರ್ ಜೋಗಿ ಹಾಡಿಗೆ‌ ಡ್ಯಾನ್ಸ್ ಮಾಡ್ತಿದ್ದೆ. ಈಗ ಅವರ ನಿರ್ದೇಶನದಲ್ಲಿ ನಟಿಸುತ್ತಿರೋದು ಖುಷಿ ಅಗ್ತಿದೆ. ಏಕ ಲವ್ ಯಾ ನನ್ನ ಡ್ರೀಮ್ ಪ್ರಾಜೆಕ್ಟ್. ಎಲ್ಲ ಹಾಡುಗಳು ನನಗಿಷ್ಟ ಎಂದು ಮುದ್ದಾಗಿ ಮಾತನಾಡಿದರು.

ಸಾಹಿತ್ಯ ಬರೆದ ಗಜೇಂದ್ರಗಡದ ಶರಣಕುಮಾರ, ನಾನು ಪಂಚಾಕ್ಷರಿ ಗವಾಯಿ ಮಠದ ಶಿಷ್ಯ. ತಂದೆ ಕೂಡ ಕಲಾವಿದರು. ಕಳೆದ ಹದಿನೈದು ವರ್ಷದಿಂದ ಸಿನಿಮಾದಲ್ಲಿ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದೆ. ಪ್ರೇಮ್ ಸರ್ ಗುರುತಿಸಿ ಅನಿತಾ ಓ ಅನಿತಾ‌ ಹಾಡಿನ ಸಾಹಿತ್ಯ ಬರೆದಿದ್ದಾರೆ. ಅವರು ನನ್ನ ದೇವರು ಎಂದು ಭಾವುಕರಾದರು.

ಚಿತ್ರದಲ್ಲಿ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡ ಸೂರಜ್ ಉಪಸ್ಥಿತರಿದ್ದರು.

ಚಿತ್ರತಂಡ ಬೆಳಗ್ಗೆ ಗದಗಕ್ಕೆ ತೆರಳಿ ಪಂಚಾಕ್ಷರಿ ಗವಾಯಿ ಮಠದಲ್ಲಿ ಶ್ರೀಗಳ‌ ಸಮ್ಮುಖದಲ್ಲಿ ಹಾಡನ್ನು ಬಿಡುಗಡೆ ಮಾಡಿತ್ತು.

Related posts

ದೀಪಾವಳಿ ಮುಗಿಸಿ ಹಿಂದಿರುಗುವವರಿಗೆ ಹೆಚ್ಚುವರಿ ಬಸ್ ವ್ಯವಸ್ಥೆ

eNEWS LAND Team

ಕಲಾ ತವರು ಕಲಘಟಗಿ: ಬಸವರಾಜ ಹೊರಟ್ಟಿ

eNEWS LAND Team

ಶಿಕ್ಷಕರ ಮತಕ್ಷೇತ್ರ : ಮತದಾರರ ಹೆಸರು ಸೇರಿಸಲು ಅವಕಾಶ

eNewsLand Team