23.9 C
Hubli
ಏಪ್ರಿಲ್ 1, 2023
eNews Land
ಸುದ್ದಿ

ಅಧಿಕಾರಿಗಳ ನಡೆ, ಶಾಲೆ ಕಡೆ

Listen to this article

ಇಎನ್ಎಲ್ ಕಲಘಟಗಿ: ಗುಣಮಟ್ಟದ  ಕಲಿಕೆ ಜೊತೆಗೆ ಮಾನಸಿಕ ದೈಹಿಕವಾಗಿ ಪೂರಕವಾಗುವ ನಿಟ್ಟಿನಲ್ಲಿ ಫಲಪ್ರದ ಶಿಕ್ಷಣವಾಗಬೇಕು ಎಂದು ತಹಶೀಲ್ದಾರ ಯಲ್ಲಪ್ಪ ಗೊಣೆನವರ ಕರೆ ನೀಡಿದರು.

                     “ಅಧಿಕಾರಿಗಳ ನಡೆ ಶಾಲೆ ಕಡೆ” ಕಾರ್ಯಕ್ರಮದ ನಿಮಿತ್ಯ ಬುಧವಾರ ಕಲಘಟಗಿ ತಾಲೂಕಿನ ಬಗಡಗೇರಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಭೇಟಿ ನೀಡಿ, ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು. ಗುಣಮಟ್ಟದ ಕಲಿಕೆ ಜೊತೆಗೆ ಮಾನಸಿಕ ದೈಹಿಕವಾಗಿ ಪೂರಕವಾಗುವ ನಿಟ್ಟಿನಲ್ಲಿ ಫಲಪ್ರದ ಶಿಕ್ಷಣವಾಗಬೇಕು. ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಯುವ ಪೀಳಿಗೆಯ ಪಾತ್ರ ಮಹತ್ವದ್ದಾಗಿದೆ. ಇಂದಿನ ಮಕ್ಕಳೆ ದೇಶದ ಭವಿಷ್ಯವಿದ್ದು ಅವರನ್ನು ಸರ್ವೋತೊಮುಖವಾಗಿ ನಿರ್ಮಾಣ ಕಾರ್ಯದ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು. ವಿದ್ಯಾರ್ಥಿ ದಿಸೆಯಿಂದಲೆ ಸ್ಪರ್ಧಾತ್ಮಕತೆ, ಆಚಾರ, ವಿಚಾರ, ನೈತಿಕ ಮೌಲ್ಯಗಳು, ಮಹಾತ್ಮರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ದೇಶದ ಭವ್ಯ ಭವಿಷ್ಯತ್ತಿನ ಯುವ ಪ್ರಜೆಗಳಾಗಿ ನಿರ್ಮಾಣ ಹೊಂದುವದು ತಮ್ಮಲ್ಲಿಯೇ ಇರುವದು.

ಬಿಇಒ ಉಮಾದೇವಿ ಬಸಾಪೂರ ಮಾತನಾಡುತ್ತಾ ಕಲಘಟಗಿ ತಾಲೂಕು ಶೈಕ್ಷಣಿಕ ರಂಗದಲ್ಲಿ ವಿಶೇಷ ಸ್ಥಾನ ಹೊಂದಿದೆ. ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಸುಗಮವಾಗಿ ಸುಲಲಿತವಾಗಿ ಜರುಗುವ ನಿಟ್ಟಿನಲ್ಲಿ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಪ್ರಯತ್ನ ಅತ್ಯಾವಶ್ಯಕವಾಗಿದೆ. ಸಕಾರಾತ್ಮಕ ಭಾವನೆಗಳೊಂದಿಗೆ ಪರೀಕ್ಷೆಗೆ ತಯಾರಾಗಿ. ಪರೀಕ್ಷಾ ಭಯ ಹಾಗೂ ಯಾವುದೇ ರೀತಿಯ ಋಣಾತ್ಮಕವಾಗಿ ಚಿಂತಿಸದೆ, ಓದಿನ ಕಡೆ ಹೆಚ್ಚು ಗಮನ ಕೊಟ್ಟು ಶಿಕ್ಷಕರು ಹಾಗೂ ಹಿರಿಯ ವಿದ್ಯಾರ್ಥಿಗಳ ಮಾರ್ಗದರ್ಶನದಂತೆ ಪರೀಕ್ಷೆಯಲ್ಲಿ ಯಶಸ್ವಿಯಾಗಬೇಕು ಎಂದು ನುಡಿದರು.ಇದೇ ಸಂದರ್ಭದಲ್ಲಿ ಶಾಲಾ ಮೈದಾನ, ಕಂಪೌಂಡ, ಶೌಚಾಲಯ, ಶಾಲಾ ಕಟ್ಟಡಗಳನ್ನು, ಮದ್ಯಾಹ್ನ ಉಪಹಾರ ವಿಕ್ಷೀಸಿ ಅಗತ್ಯ ಸಲಹೆ ಮಾರ್ಗದರ್ಶನ ನೀಡಿದರು. ಮೂಲಭೂತ ಸೌಲಭ್ಯಗಳನ್ನು ಪಂಚಾಯತ ರಾಜ್ ಇಲಾಖೆಯಿಂದ ಸಿಗುವ ಸವಲತ್ತುಗಳನ್ನು ದೊರಕಿಸಿಕೊಡುವ ಎಲ್ಲ ಪ್ರಯತ್ನ ಮಾಡಲಾಗುವುದೆಂದರು.
ಈ ಕಾರ್ಯಕ್ರಮವು ತಾಲೂಕಿನಲ್ಲಿ ಪ್ರಥಮವಾಗಿ ಹಾಗೂ ಪ್ರಾಯೋಗಿಕವಾಗಿ ಸರಕಾರಿ ಪ್ರೌಢ ಶಾಲೆ ಬಗಡಗೇರಿಯಲ್ಲಿ ಹಮ್ಮಿಕೊಂಡಿದ್ದು ಊರಿನವರು ಜನಪ್ರತಿನಿದಿಗಳು ಹಾಗೂ ಅಧಿಕಾರಿಗಳು ಭಾಗವಹಿಸಿ ಶಾಲೆಯ ಶೈಕ್ಷಣಿಕ ಹಾಗೂ ಭೌತಿಕ ಸಮಸ್ಯೆಗಳ ಬಗ್ಗೆ ಆಲಿಸಿ ಮಾರ್ಗದರ್ಶನ ಮಾಡಿರುವುದು ವಿಶೇಷವಾಗಿತ್ತು ಅದೇ ರೀತಿ ಪರಿಹಾರವನ್ನು ಕಂಡು ಹಿಡಿಯಲಾಯಿತು ಸದರಿ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಎಲ್ಲ ಸರಕಾರಿ ಪ್ರೌಢಶಾಲೆಗಳಲ್ಲಿ ಹಮ್ಮಿಕೊಳ್ಳಲಾಗುವುದು ಬರುವ ಶೈಕ್ಷಣಿಕ ವರ್ಷಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಎಸ್ ಎಸ್ ಎಲ್ ಸಿ ನೋಡಲ್ ಅಧಿಕಾರಿ ಪುಟ್ಟಪ್ಪ ಭಜಂತ್ರಿ ತಿಳಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಕುಮಾರ.ಕೆ.ಎಫ್   ಮುಖ್ಯೋಪಾಧ್ಯಾಯ ಅಶೋಕ ಶಿರಗುಪ್ಪಿ,  ಎಸ್.ಡಿ.ಎಮ್.ಸಿ ಉಪಾಧ್ಯಕ್ಷ ಗಂಗಪ್ಪ ನೀಲಣ್ಣವರ ಅಧ್ಯಕ್ಷತೆ ವಹಿಸಿದರು, ಆರ್. ಎಮ್ ಹೊಲ್ತಿಕೋಟಿ, ರುದ್ರಯ್ಯ ಪೂಜಾರ, ಗೂಳಪ್ಪ ಇಂದೂರ, ಬಸವರಾಜ ರೇವಣಕರ, ಶ‍್ರೀಕಾಂತ್‍ ದೊಡಮನಿ, ಈರಣ್ಣ ಕುಂದಗೋಳ, ಸುರೇಶ ನೀಲಣ್ಣವರ, ಸುಭಾಸ ದೊಡ್ಮನಿ, ಬಸಲಿಂಗಪ್ಪ ದೊಡಬಸಣ್ಣವರ, ಗೂಳಪ್ಪ ನೀಲಣ್ಣವರ,  ಮಲ್ಲಪ್ಪ ಬಡಿಗೇರ, ನೀಜಪ್ಪ ಹೊನ್ನಿಹಳ್ಳಿ, ರೇವಪ್ಪ ಕಳ್ಳಿಮನಿ, ಎಸ್.ಎಸ್ .ಸಂಗಣ್ಣವರ, ಎಮ್ ಆರ್ ರಾಮನಗೌಡ್ರ , ಬಿ ಸಿ ಹೊಸಮನಿ, ಹನುಮಂತಪ್ಪ ಹರಿಜನ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿದ್ದರು ಉಪಸ್ಥಿತರಿದ್ದರು. ಅಶೋಕ ಶರಗುಪ್ಪಿ  ಸ್ವಾಗತಿಸಿದರು. ಎಮ್ ಆರ್ ರಾಮನಗೌಡರ  ನಿರೂಪಿಸಿ ವಂದಿಸಿದರು.

Related posts

ಡಿ.3 ರಿಂದ ಎಸ್‌ಡಿಎಂ  ಹೊರ ಮತ್ತು ಒಳ ರೋಗಿಗಳ ವಿಭಾಗ ಸೇವೆಗಳ ಪುನರಾರಂಭಕ್ಕೆ ಷರತ್ತುಬದ್ಧ ಅನುಮತಿ: ಡಿಸಿ ನಿತೇಶ್ ಪಾಟೀಲ

eNEWS LAND Team

ಶಿವರಾತ್ರಿ: ಸಿದ್ಧಾರೂಢರ ಮಠದಲ್ಲಿ ಜಾತ್ರಾ ಮಹೋತ್ಸವಕ್ಕಾಗಿ ಸ್ವಚ್ಛತಾ ಕಾರ್ಯ

eNewsLand Team

ಹುಬ್ಬಳ್ಳಿ: ಪುನೀತ್ ರಾಜ್‍ಕುಮಾರಗೆ ಶ್ರದ್ಧಾಂಜಲಿ ಸಲ್ಲಿಸಲು 500ಕಿಮೀ ಓಡುತ್ತಿರುವ ದ್ರಾಕ್ಷಾಯಿಣಿ!

eNewsLand Team