27 C
Hubli
ಡಿಸೆಂಬರ್ 7, 2023
eNews Land
ಸುದ್ದಿ

ಕೋವಿಡ್ ಸೋಂಕಿತರ ಟೆಲಿಮೆಡಿಸಿನ್ ಸೇವೆಗಾಗಿ ಈ ನಂಬರ್ ಸಂಪರ್ಕಿಸಿ…

ಇಎನ್ಎಲ್ ಧಾರವಾಡ : ಆರೋಗ್ಯ ಇಲಾಖೆಯಿಂದ ಕೋವಿಡ್ ಸೋಂಕಿತರಿಗೆ ಇ-ಸಂಜೀವಿನಿ-ಟೆಲಿಮೆಡಿಸಿನ್ ಸೇವೆ ಎಲ್ಲಾ ಕೋವಿಡ್-19 ಸೊಂಕಿತರು ಮನೆಯಲ್ಲಿ ಹಾಗೂ ಕ್ವಾರೆಂಟೈನ್ ಅಲ್ಲಿ ಇರುವಂತವರು, ಇ-ಸಂಜೀವಿನಿ ಹೊರರೋಗಿ ಚಿಕಿತ್ಸೆ (OPD) ಮೂಲಕ ಟೆಲಿಕನ್ಸಲ್ಟೇಷನ್ ಸೇವೆಗಳ ಲಾಭ ಪಡೆದುಕೊಳ್ಳಬಹುದು. ಅದಕ್ಕಾಗಿ ತ್ವರಿತ ಮಾರ್ಗದರ್ಶಿ ಹಾಗೂ ಎಲ್ಲಾ ಸೇವೆಗಳ ಪಟ್ಟಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದೆ.

ಟೆಲಿಮೆಡಿಸನ್ ಕಾರ್ಯನಿರ್ವಹಿಸುವ ವಿಧಾನ ಗೂಗಲ್ ಪ್ಲೇ ಅಥವಾ ಆಪ್ ಸ್ಟೋರ್‍ನಿಂದ ಇ-ಸಂಜೀವಿನಿ ಓಪಿಡಿ ಅಪ್ಲಿಕೇಶನ್ ಡೌನ್‍ಲೋಡ್ ಮಾಡಿಕೊಳ್ಳಬೇಕು. ನಂತರ ನೋಂದಣಿ ಮತ್ತು ಟೋಕನ್ ಜನರೇಷನ್ ಮಾಡಬೇಕು. ಮತ್ತು ಓಟಿಪಿ ಬಳಸಿಕೊಂಡು ನಿಮ್ಮ (ಸೋಂಕಿತರು) ಬೊಬೈಲ್ ಸಂಖ್ಯೆಯನ್ನು ಪರಿಶೀಲಿಸಬೇಕು. ಇ-ಸಂಜೀವಿನಿಯಲ್ಲಿ ರೋಗಿಯ ನೋಂದಣಿಯ ಫಾರ್ಮ್‍ಅನ್ನು ಭರ್ತಿ ಮಾಡಿ, ಆರೋಗ್ಯ ಸಂಬಂಧಿತ ದಾಖಲೆಗಳಿದ್ದಲ್ಲಿ ಅಪ್‍ಲೊಡ್ ಮಾಡಬೇಕು. ನಂತರ ಬರುವ ಎಸ್‍ಎಂಎಸ್ ನಲ್ಲಿ ರೋಗಿ ಐಡಿ ಮತ್ತು ಟೋಕನ್ ಅನ್ನು ಸ್ವೀಕರಿಸಬೇಕು.

ಲಾಗಿನ್ ಮಾಡುವುದು : ರೋಗಿಯ ಐಡಿಯೊಂದಿಗೆ ಲಾಗಿನ್ ಆಗಬೇಕು. ವರ್ಚುವಲ್ ಕರೆ ಬಟನ್ ಒತ್ತಿದಾಗ, ಸಕ್ರೀಯಗೊಳಿಸಲಾಗುತ್ತದೆ. ಆಗ ರೋಗಿಯು ವಿಡಿಯೋ ಕರೆಯನ್ನು ಪ್ರಾರಂಭಿಸಿಬಹುದು.

ವಿಡಿಯೋ ಕರೆ : ವಿಡಿಯೋ ಕರೆ ಮಾಡಿದಾಗ ರೋಗಿಯು ವೈದ್ಯರನ್ನು ಸಂಪರ್ಕಿಸಿ, ಅವರಿಂದ ತಕ್ಷಣ ಇ-ಪ್ರಿಸ್ಕ್ರಿಪ್ಷನ್, ಆನ್‍ಲೈನ್ ಓಪಿಡಿ, ರಿಯಲ್ ಟೈಮ್ ಟೆಲಿಮೆಡಿಸನ್ ಹಾಗೂ ರಾಜ್ಯ ಸೇವೆಗಳ ವೈದ್ಯರಿಂದ ಅಗತ್ಯ ಮಾಹಿತಿ ಪಡೆಯಬಹುದು. ಹಾಗೂ ವಿಡಿಯೋ ಸಮಾಲೋಚನೆಗಳು, ಚಾಟ್‍ಮಾಡಿ ಆರೋಗ್ಯ ಕುರಿತ ಆಪ್ತಸಮಾಲೋಚನೆ ಜರುಗಿಸಬಹುದು.

ಇ-ಸಂಜೀವಿಗಾಗಿ ಸಹಾಯವಾಣಿ ಸಂಖ್ಯೆ + 91-11-23978046, ಟೋಲ್ ಫ್ರೀ : 1075, ಸಹಾಯವಾಣಿ ಇ-ಮೇಲ್: ncov2019@gov.in, ವೆಬ್‍ಸೈಟ್: https://esanjeevaniopd.in/ ಸಂಪರ್ಕಿಸಬಹುದೆಂದು ಜಿಲ್ಲಾ ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

 

Related posts

ವಿಪ ಚುನಾವಣೆ: ಸಿಎಂ, ಜೋಶಿ, ಶೆಟ್ಟರ್ ಮತದಾನ

eNewsLand Team

ವಾಜಪೇಯಿ ಜನ್ಮದಿನ; ರುದ್ರಭೂಮಿ ಶುಚಿಗೊಳಿಸಿ ಬಣ್ಣ ಬಳಿದ ಸಚಿವ ಜೋಶಿ

eNewsLand Team

SOUTH WESTERN RAILWAY SERVICE CANCELLATION

eNEWS LAND Team