28.6 C
Hubli
ಏಪ್ರಿಲ್ 20, 2024
eNews Land
ಸುದ್ದಿ

ಜಮಾಲಿಗುಡ್ಡದಲ್ಲಿ ಡಾಲಿ ಧನಂಜಯ್, ಶ್ಯಾನೆ ಟಾಪ್ ಹುಡ್ಗಿ ಅದಿತಿ..!

ಇಎನ್ಎಲ್ ಫಿಲ್ಮ್ ಕ್ಲಬ್

ರತ್ನನ್ ಪ್ರಪಂಚ ಚಿತ್ರದ ಯಶಸ್ಸಿನಲ್ಲಿರುವ ಡಾಲಿ ಧನಂಜಯ ತಮ್ಮ ಮುಂದಿನ ಸಿನಿಮಾ ಘೋಷಿಸಿದ್ದಾರೆ. ‘ ಒನ್ಸ್ ಅಪೌನ್ ಟೈಂ ಇನ್ ಜಮಾಲಿಗುಡ್ಡ ‘ ಚಿತ್ರದ ಫಸ್ಟ್ ಸ್ಟಿಲ್ ಟ್ವಿಟ್ ಮಾಡಿರುವ ಧನಂಜಯ ತಮ್ಮ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟು ಹಾಕಿದ್ದಾರೆ.

ನಿಹಾರಿಕಾ ಮೂವೀಸ್ ಬ್ಯಾನರ್ ಅಡಿಯಲ್ಲಿ, ಎಂ. ಲಕ್ಷ್ಮಯ್ಯ ಚಿತ್ರವನ್ನು ತರುತ್ತಿದ್ದು, ಶ್ರೀಹರಿ ನಿರ್ಮಾಣ ಮಾಡುತ್ತಿದ್ದಾರೆ.

ಸಸ್ಪೆನ್ಸ್ ಕಥಾಹಂದರ ಹೊಂದಿರುವ ಜಮಾಲಿಗುಡ್ಡದಲ್ಲಿ ಶ್ಯಾನೆ ಟಾಪಾಗಿರೋ ಅಧಿತಿ ಪ್ರಭುದೇವ ಧನಂಜಯ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರ ನಿರ್ದೇಶನದ ಮೂಲಕ ಭಿನ್ನವಾಗಿ ಸ್ಯಾಂಡಲ್ ವುಡ್ಡಿಗೆ ಪಾದಾರ್ಪಣೆ ಮಾಡಿದ್ದ ಕುಶಾಲ್ ಗೌಡ ಜಮಾಲಿಗುಡ್ಡದ ಕತೆ ಬರೆದು, ಚಿತ್ರಕತೆ ನಿರ್ದೇಶನ ಮಾಡುತ್ತಿದ್ದಾರೆ.

ಅರ್ಜುನ ಜನ್ಯಾ ಸಂಗೀತ ನೀಡಲಿದ್ದು, ಹರೀಶ್ ಕೊಮ್ಮೆ ಸಂಕಲನ ಮಾಡುತ್ತಿದ್ದಾರೆ. ಕಳೆದ ಎರಡು ತಿಂಗಳಿಂದ ಚಿತ್ರತಂಡ ಶೂಟಿಂಗ್ ನಡೆಸುತ್ತಿದೆ.

Related posts

ರಾಜ್ಯದ 3026 ಗ್ರಾಮ ಪಂಚಾಯಿತಿಗಳಲ್ಲಿ ಆರಂಭ

eNewsLand Team

ಧಾರವಾಡ: 28‌‌ ಹಾಗೂ‌ 29ರಂದು ಅನಧಿಕೃತ ವಿನ್ಯಾಸ ತೆರವು ಕಾರ್ಯಾಚರಣೆ

eNewsLand Team

ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಮಾಹಿತಿ ಕೊಡುತ್ತೇನೆ: ಎಸ್.ವಿಜಯಕುಮಾರ

eNEWS LAND Team