27 C
Hubli
ಡಿಸೆಂಬರ್ 7, 2023
eNews Land
ಸುದ್ದಿ

ತಿರುಪತಿ : ಹಿರಿಯ ಅರ್ಚಕ ಪಿ ಶೇಷಾದ್ರಿ ‘ಡಾಲರ್ ಶೇಷಾದ್ರಿ’ ಇನ್ನಿಲ್ಲ

ಇಎನ್ಎಲ್ ಡೆಸ್ಕ್ : ತಿರುಪತಿ ವೆಂಕಟೇಶ್ವರ ದೇವಸ್ಥಾನದ ಹಿರಿಯ ಅರ್ಚಕ ಪಿ ಶೇಷಾದ್ರಿ ‘ಡಾಲರ್ ಶೇಷಾದ್ರಿ’ ಎಂದೇ ಖ್ಯಾತರಾಗಿದ್ದರು ಸೋಮವಾರ ಮುಂಜಾನೆ ವಿಧಿವಶರಾಗಿದ್ದಾರೆ.
ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ವಿಶೇಷ ಕರ್ತವ್ಯ ಅಧಿಕಾರಿಯಾಗಿ (ಒಎಸ್‌ಡಿ) ಸೇವೆ ಸಲ್ಲಿಸುತ್ತಿದ್ದ ಶೇಷಾದ್ರಿ (75) ಅವರು ಕಾರ್ತಿಕ ದೀಪೋತ್ಸವದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಭಾನುವಾರ ವಿಶಾಖಪಟ್ಟಣಕ್ಕೆ ಆಗಮಿಸಿದ್ದರು.ಶೇಷಾದ್ರಿ ಅವರಿಗೆ ರಾತ್ರಿ ತೀವ್ರ ಹೃದಯಾಘಾತವಾಗಿದ್ದು, ಸೋಮವಾರ ಮುಂಜಾನೆ ಅವರು ಕೊನೆಯುಸಿರೆಳೆದಿದ್ದಾರೆ. ಜುಲೈ 31, 2006 ರಂದು ನಿವೃತ್ತಿ ಹೊಂದಿದ ಪಾಲಾ ಶೇಷಾದ್ರಿ ಅವರು ನಿವೃತ್ತಿ ಹೊಂದಿದ್ದರು, ಅಂದಿನಿಂದ ಅಧಿಕಾರ ವಿಸ್ತರಣೆಯಲ್ಲಿದ್ದರು.
ಡಾಲರ್ ಶೇಷಾದ್ರಿ ಅವರು ಕಳೆದ 50 ವರ್ಷಗಳಿಂದ ತಿರುಮಲ ವೆಂಕಟೇಶ್ವರ ದೇವರ ಸೇವೆ ಸಲ್ಲಿಸುತ್ತಿದ್ದರು.

Related posts

ಪ್ರದೀಪ್‌ ಆತ್ಮಹತ್ಯೆ: ಲಿಂಬಾವಳಿ ಬಂಧನಕ್ಕೆ ಆಮ್‌ ಆದ್ಮಿ ಪಾರ್ಟಿ ಆಗ್ರಹ

eNEWS LAND Team

ಜಮೀರ್ ಬಸ್ ಒರೆಸಿಕೊಂಡು ಇದ್ದ, ಶಾಸಕನಾಗಿ ಮಾಡಿದ್ದು ಹೆಚ್ಡಿಕೆ….

eNEWS LAND Team

ಕುರಿಗಾಹಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದವರನ್ನು ಗಲ್ಲು ಹಾಕಿ ಎಂದು ಆಗ್ರಹ

eNEWS LAND Team