22 C
Hubli
ಸೆಪ್ಟೆಂಬರ್ 11, 2024
eNews Land
ಸುದ್ದಿ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಹಾರ ದಾಸ್ತಾನು ಉಗ್ರಾಣಕ್ಕೆ ಡಿಸಿ ದಿಢೀರ್ ಭೇಟಿ

ಇಎನ್ಎಲ್ ಧಾರವಾಡ:

ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಇಂದು ಮಧ್ಯಾಹ್ನ ಧಾರವಾಡ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಹಾಗೂ ಗರ್ಭಿಣಿ, ಬಾಣಂತಿಯರಿಗೆ ವಿತರಿಸುವ ಆಹಾರ ಸಾಮಗ್ರಿ ದಾಸ್ತಾನು ಕೇಂದ್ರಕ್ಕೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದರು. ಪ್ರತಿ ಆಹಾರ ಸಾಮಗ್ರಿಗಳ ಸ್ಯಾಂಪಲ್‍ಗಳನ್ನು ಸ್ವತಃ ತೂಕ ಮಾಡಿ, ಸರಿಯಾದ ಪ್ರಮಾಣದಲ್ಲಿ ಆಹಾರ ಸಾಮಗ್ರಿಗಳು ಪ್ಯಾಕ್ ಆಗಿರುವ ಕುರಿತು ಖಾತರಿಪಡಿಸಿಕೊಂಡರು.

ಅಧಿಕಾರಿಗಳಿಗೆ ಆಹಾರ ಸಾಮಗ್ರಿಗಳ ಪ್ರಮಾಣ, ವಿತರಣೆ ಪ್ರಮಾಣ, ಆಹಾರ ಸಾಮಗ್ರಿಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ಹಾಗೂ ಜನಜಾಗೃತಿ ಮೂಡಿಸುವ ಕುರಿತು ನಿರ್ದೇಶನಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಾ.ಎಚ್.ಎಚ್. ಕುಕನೂರ, ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ಡಾ. ಕಮಲಾ ಬೈಲೂರ ಇದ್ದರು.

Related posts

ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದ ಪುನರಾಭಿವೃದ್ಧಿಗೆ ಸಂಬಂಧಿಸಿದಂತೆ ನವೀಕರಿಸಿ

eNEWS LAND Team

ಹಿರಿಯರ ಸಮಸ್ಯೆ ಪರಿಹಾರಕ್ಕೆ “ಅನ್ವಯಾ” ಚಾಯ್ ಪೇ ಚರ್ಚಾ

eNEWS LAND Team

ಚುನಾವಣಾ ಜಾಹಿರಾತು : ಪೂರ್ವಾನುಮತಿ ಕಡ್ಡಾಯ

eNEWS LAND Team