34 C
Hubli
ಮಾರ್ಚ್ 23, 2023
eNews Land
ಸುದ್ದಿ

ಜಿಲ್ಲೆಯ ತಾಲೂಕುಗಳಲ್ಲಿ ಗ್ರಾಮ ವಾಸ್ತವ್ಯ: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ

Listen to this article

ಇಎನ್ಎಲ್ ಅ.16 :

ಧಾರವಾಡ: ಜಿಲ್ಲೆಯ ತಾಲೂಕುಗಳಲ್ಲಿ ಗ್ರಾಮ ವಾಸ್ತವ್ಯ: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದಂತೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಆಯಾ ತಹಸಿಲ್ದಾರರು ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.

  1.                ಅಕ್ಟೋಬರ್ 16 ಶನಿವಾರದಂದು ಹುಬ್ಬಳ್ಳಿ ಗ್ರಾಮೀಣ ತಹಸಿಲ್ದಾರ ಪ್ರಕಾಶ ನಾಶಿ ತಾಲೂಕಿನ ಚನ್ನಾಪೂರ ಗ್ರಾಮದಲ್ಲಿ,ಹುಬ್ಬಳ್ಳಿ ನಗರ ತಹಸಿಲ್ದಾರ ಶಶಿಧರ ಮಾಡ್ಯಾಳ ಉಣಕಲ್ ಗ್ರಾಮದಲ್ಲಿ, ಕುಂದಗೋಳ‌ ತಹಸಿಲ್ದಾರ ಅಶೋಕ ಶಿಗ್ಗಾಂವಿ ತಾಲ್ಲೂಕಿನ ರಾಮಾಪೂರ ಗ್ರಾಮದಲ್ಲಿ, ನವಲಗುಂದ ತಹಸಿಲ್ದಾರ ನವೀನ ಹುಲ್ಲೂರ ತಾಲ್ಲೂಕಿನ ಪಡೆಸೂರ ಗ್ರಾಮದಲ್ಲಿ, ಅಣ್ಣಿಗೇರಿ ತಹಸಿಲ್ದಾರ ಮಂಜುನಾಥ ಅಮಾಸಿ ತಾಲ್ಲೂಕಿನ ಭಧ್ರಾಪೂರ ಗ್ರಾಮದಲ್ಲಿ, ಕಲಘಟಗಿ ತಹಸಿಲ್ದಾರ ಯಲ್ಲಪ್ಪ ಗೊಣ್ಣನ್ನವರ ತಾಲ್ಲೂಕಿನ ಅರೇಬಸವನಕೊಪ್ಪ ಗ್ರಾಮದಲ್ಲಿ ಹಾಗೂ ಅಳ್ನಾವರ ತಹಸಿಲ್ದಾರ ಮಾಧವ ಗಿತ್ತೆ ತಾಲ್ಲೂಕಿನ ಅಂಬೋಳ್ಳಿ ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದಾರೆ.

ಗ್ರಾಮ ವಾಸ್ತವ್ಯ ದಿನದಂದು ಆಯಾ ತಾಲ್ಲೂಕಿನ ತಹಶೀಲ್ದಾರರೊಂದಿಗೆ ಎಲ್ಲ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಯೋಜನೆ ಹಾಗೂ ಅಗತ್ಯ ಮಾಹಿತಿಯೊಂದಿಗೆ ಖುದ್ದಾಗಿ ಹಾಜರಿದ್ದು ಸಾರ್ವಜನಿಕ ಅಹವಾಲು ಬೇಡಿಕೆಗಳಿಗೆ ಸ್ಥಳದಲ್ಲಿಯೇ ಕಾರ್ಯಸೂಚಿಗಳ ಅನ್ವಯ ಕ್ರಮಗಳನ್ನು ಪೂರ್ಣಗೊಳಿಸಿ ಫಲಾನುಭವಿಗಳಿಗೆ ಪರಿಹಾರ ನೀಡಲು ಕ್ರಮವಹಿಸಲು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಆದೇಶಿಸಿದ್ದಾರೆ.

Related posts

ಆಧುನಿಕ ಭಾರತದ ಪಿತಾಮಹ ಅಂಬೇಡ್ಕರ್:ಸಿಎಂ

eNEWS LAND Team

ಜಮಾಲಿಗುಡ್ಡದಲ್ಲಿ ಡಾಲಿ ಧನಂಜಯ್, ಶ್ಯಾನೆ ಟಾಪ್ ಹುಡ್ಗಿ ಅದಿತಿ..!

eNewsLand Team

ನನ್ನ ತಾಯಿಯೇ ನನಗೆ ಹೀರೋ : ಸಂತೋಷ ಲಾಡ್

eNEWS LAND Team