31 C
Hubli
ನವೆಂಬರ್ 6, 2024
eNews Land
ಸುದ್ದಿ

ರಾಜ ವೈಭವ ನೆನಪಿಸಿದ ಮುಕ್ಕಲ್ಲ ಗ್ರಾಮ ವಾಸ್ತವ್ಯ ಅದ್ಧೂರಿ ಸ್ವಾಗತಕ್ಕೆ ಮನಸೋತ: ಜಿಲ್ಲಾಧಿಕಾರಿ

ಇಎನ್ಎಲ್ ಕಲಘಟಗಿ: ನೀವೆಲ್ಲರೂ ಮಾಡಿದ ಅದ್ದೂರಿ ಸ್ವಾಗತಕ್ಕೆ ಮನಸೋತಿದ್ದೇನೆ. ಇಲ್ಲಿ ಬಗೆಹರಿಸುವ ಸಮಸ್ಯೆಗಳನ್ನು ಇಂದೇ ಬಗೆಹರಿಸಿಕೊಡುತ್ತೇನೆ ಎಂದರು.

ಇದನ್ನು ಕ್ಲಿಕ್ ಮಾಡಿ ಓದಿ:ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಬಸ್ ಪ್ರಯಾಣ ಉಚಿತ

ಮುಕ್ಕಲ ಗ್ರಾಮದ ಸರಕಾರಿ ಪ್ರೌಢ ಶಾಲೆ  ಆವರಣದಲ್ಲಿ  ಜಿಲ್ಲಾಡಳಿತ ಧಾರವಾಡ, ತಾಲೂಕು ಆಡಳಿತ ಕಲಘಟಗಿ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಅಭಿಯಾನದ ಅಂಗವಾಗಿ ಗ್ರಾಮ ವಾಸ್ತವ್ಯ ಉದ್ಘಾಟಿಸಿ ಮಾತನಾಡಿ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹುಣಸಿಕಟ್ಟಿ ಗ್ರಾಮದ ಎಸ್.ಸಿ.ಎಸ್.ಟಿ ವರ್ಗದವರಿಗೆ ಸ್ಮಶಾನಕ್ಕೆ 1 ಎಕರೆ ಜಾಗವನ್ನು ಇಂದೇ ಮಂಜೂರು ಮಾಡುತ್ತೇನೆ. ಈ ಮೊದಲು 400 ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, 300 ಕ್ಕೂ ಹೆಚ್ಚು ಅರ್ಜಿಗಳನ್ನು ಈಗಾಗಲೇ ಸಂಬoಧ ಪಟ್ಟ ಅಧಿಕಾರಿಗಳು ಬಗೆಹರಿಸಿದ್ದಾರೆ. ಸರ್ಕಾರವು ಕೊಟ್ಟ ಗುರಿಯನ್ನು  ನಿಗದಿತ ಅವಧಿಗಿಂತ ,3 ಪಟ್ಟು ವೇಗದಿಂದ ಮಾಡುತ್ತಿದ್ದೇವೆ. ಸರ್ಕಾರದ ಈ ಕಾರ್ಯಕ್ರಮದಿಂದ ನಿಮ್ಮಿಂದ ನಾವೂ ಕಲಿಯುತ್ತಿದ್ದೇವೆ. ಇದರಿಂದ ಆಡಳಿತದಲ್ಲಿ ಸರಳೀಕರಣ ಆಗುತ್ತಿದೆ ಎಂದರು. ಗ್ರಾಮದುದ್ದಕ್ಕೂ ಮೆರವಣಿಗೆಯ ಸಮೇತ ಗ್ರಾಮ ಲೆಕ್ಕಾಧಿಕಾರಿಗಳ ಕೊಠಡಿ ಉದ್ಘಾಟನೆ, ಗ್ರಾಮ ಒನ್ ಕೇಂದ್ರ, ಡಿಜಿಟಲ್ ಅಂಗನವಾಡಿ, ಡಿಜಿಟಲ್ ಗ್ರಂಥಾಲಯಗಳಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅಪೂರ್ಣಗೊಂಡ ಹೊಸ ಅಂಗನವಾಡಿ ಕಟ್ಟಡ ಕುರಿತು ಸಂಬoಧ ಪಟ್ಟ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಕಂದಾಯ ಇಲಾಖೆ, ಹಾಗೂ ಎಲ್ಲ ಇಲಾಖೆಯ ಸಿಬ್ಬಂದಿಗಳ, ಗ್ರಾಮಸ್ಥರ ಸಹಕಾರದಿಂದ ಇಷ್ಟೊಂದು ಪರಿಣಾಮಕಾರಿಯಾದ ಕಾರ್ಯಕ್ರಮವಾಗಿದೆ ಎಂದರು. ಜಿಲ್ಲಾ ಪಂಚಾಯತ ಸಿಇಓ ಸುರೇಶ ಇಟ್ನಾಳ ಮಾತನಾಡಿ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳು ನೇರವಾಗಿ ತಲುಪಬೇಕು, ನರೇಗಾದಲ್ಲಿ ಅನೇಕ ಯೋಜನೆಗಳಿವೆ. ಕಡ್ಡಾಯವಾಗಿ ಬಚ್ಚಲುಗುಂಡಿಗಳನ್ನು ನಿರ್ಮಿಸಿಕೊಳ್ಳಿ, ಈ ಪಂಚಾಯತಿ ವ್ಯಾಪ್ತಿಯ ಎಲ್ಲ ಶಾಲೆಗಳಿಗೂ ಮೂಲಭೂತ ಸೌಕರ್ಯಗಳನ್ನು ರೂಪಿಸಿಕೊಳ್ಳಿ, ಎಲ್ಲರೂ ಇ- ಶ್ರಮ ಕಾರ್ಡ, ಎ.ಬಿ.ಆರ್.ಕೆ ಕಾರ್ಡುಗಳನ್ನು ಮಾಡಿಸಿಕೊಳ್ಳಿ, ಮನೆ-ಮನೆಗೆ ಗಂಗೆ ಯೋಜನೆಯು ಅಂತಿಮ ಹಂತದಲ್ಲಿದ್ದು ಏಪ್ರಿಲ್ ಒಳಗೆ ಮುಗಿಯಲು ಕ್ರಮ ಕೈಗೊಂಡಿದ್ದೇವೆ ಎಂದರು. ಗ್ರಾಮ ಪಂಚಾಯತಿ ಅಧ್ಯಕ್ಷ ಲಿಂಗರೆಡ್ಡಿ ನಡುವಿನಮನಿ ಮಾತನಾಡಿ ನಮ್ಮ ಭೂಮಿ ನಮ್ಮ ತೋಟ, ಬಿದರಗಡ್ಡಿ ಗ್ರಾಮಕ್ಕೆ ರೇಷನ್ ಪೂರೈಕೆ, ಆಶಾ ಕಾರ್ಯಕರ್ತೆಯರ ಹುದ್ದೆ ಭರ್ತಿ, ವಾಲ್ಮೀಕಿ ಭವನ, ಬಸ್ ಟ್ಯಾಂಡ ರಿಪೇರಿ, ಹಾಗೂ ಸಂತಿಹೊನ್ನಳ್ಳಿಯ ಉಪ ತಹಶೀಲ್‌ದಾರ ನಿರಂತರ ಗೈರು ಹಾಜರಿ ಮುಂತಾದವುಗಳ ಬಗ್ಗೆ ಕ್ರಮ ಕೈಗೊಳ್ಳಲು ಕೇಳಿಕೊಂಡರು. 12 ರಿಂದ 14 ವರ್ಷದ ಮಕ್ಕಳಿಗೆ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ಮಾಜಿ ಜಿಪಂ ಸದಸ್ಯ ಶಾನಪ್ಪಗೌಡ್ರ ಪಾಟೀಲ ಮಾತನಾಡಿ ಸರ್ಕಾರದ ಯೊಜನೆಗಳಿಂದ ಗ್ರಾಮಗಳು ಅಭಿವೃದ್ಧಿಯತ್ತ ಸಾಗಿವೆ ಎಂದರು. ಈ ಸಂದರ್ಭದಲ್ಲಿ ಕೋವಿಡ್ ಸಮಯದಲ್ಲಿ ಸೇವೆ ಸಲ್ಲಿಸಿದ ಎಲ್ಲ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಧನ್ಯವಾದ ಹೇಳಿದರು.

ಇದನ್ನು ಕ್ಲಿಕ್ ಮಾಡಿ ಓದಿ:ದೇಶದ್ರೋಹಿ ಶಕ್ತಿಗಳನ್ನು ಸಹಿಸಲಾಗುವುದಿಲ್ಲ: ಸಿಎಂ ಬೊಮ್ಮಾಯಿ

ಸಾಹೆಬ್ರನ್ನ ಊರಾಗ ಮೆರಸಾಕ ನಮ್ಮ ಎತ್ತು ಪುಣ್ಯ ಮಾಡ್ಯಾವ್ರಿ ಎಂದ ಎತ್ತಿನ ಮಾಲಕ ಯಲ್ಲಪ್ಪಗೌಡ ದೊಡ್ಡಗೌಡ್ರ ಹೇಳಿದರು. ಲಂಬಾಣಿ ನೃತ್ಯ, ಕರಡಿ ಮಜಲು, ಬೊಂಬೆ ಕುಣಿತ, ಮುಂತಾದ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.

ಇದನ್ನು ಕ್ಲಿಕ್ ಮಾಡಿ ಓದಿ:ಶೇ.90 ರಷ್ಟು ಷೇರು ಬಂಡವಾಳದೊಂದಿಗೆ ವಿವಿಧೋದ್ದೇಶಗಳ ಮಹಿಳಾ ಸಹಕಾರಿ ಸಂಘಗಳ ಪ್ರಾರಂಭ : ಸಿಎಂ ಬೊಮ್ಮಾಯಿ

      ತಹಶೀಲದಾರ ಯಲ್ಲಪ್ಪ ಗೊಣ್ನೆನ್ನವರ,  ತಾಲೂಕು ಪಂಚಾಯತ ಇಓ ಎಸ್.ಸಿ.ಮಠಪತಿ, ಎನ್.ಎಫ್.ಕಟ್ಟೆಗೌಡ್ರ, ಶ್ರೀಕಾಂತ ಪಾಟೀಲ, ಪ್ರಭು ಸೂರಿನ, ಮಹಾಂತೇಶ ಪಟ್ಟಣಶೆಟ್ಟಿ, ಡಾ. ಬಾಸೂರ, ಉಮಾದೇವಿ ಬಸಾಪೂರ, ಹಾಗೂ ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು, ಗ್ರಾಪಂ ಉಪಾಧ್ಯಕ್ಷ ಶ್ರೀಕಾಂತಗೌಡ ಪಾಟೀಲ, ಗ್ರಾಪಂ ಎಲ್ಲ ಸದಸ್ಯರು, ಅಂಗನವಾಡಿ ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದನ್ನು ಕ್ಲಿಕ್ ಮಾಡಿ ಓದಿ:ದಿ.ಶಿವಳ್ಳಿ ಆದರ್ಶ ರಾಜಕಾರಣಿ, ಅಧಿಕಾರ ಇರಲಿ, ಇಲ್ಲದಿರಲಿ, ಜನರ ಕಷ್ಟಗಳಿಗೆ ಸ್ಪಂದಿಸುವ ಜನನಾಯಕ: ಮಾಜಿ ಸಿಎಂ ಸಿದ್ರಾಮಯ್ಯ

ಕೃಷಿ ಯಂತ್ರೋಪಕರಣಗಳ ಮಾಹಿತಿ, ತೋಟಗಾರಿಕೆ ಮಾಹಿತಿ, ಮಾನಸಿಕ ಆರೋಗ್ಯ ತಪಾಸಣೆ ಶಿಬಿರ, ಉಚಿತ ಆರೋಗ್ಯ ತಪಾಸಣೆ, ಉಚಿತ ಜಾನುವಾರು ಶಿಬಿರ ಹಮ್ಮಿಕೊಳ್ಳಲಾಗಿತ್ತು. ಎ.ಎಚ್.ಮನಿಯಾರ ಸ್ವಾಗತಿಸಿದರು.

ಇದನ್ನು ಕ್ಲಿಕ್ ಮಾಡಿ ಓದಿ:ಸಂವಿಧಾನ ಮಹಿಳೆಯರಿಗೆ ಪೂರಕವಾಗಿದೆ: ಸಿ.ಎಂ.ನಿಂಬಣ್ಣನವರ

Related posts

ಸಿಬ್ಬಂದಿ ನೇಮಕಾತಿ ಆಯೋಗದ ಕನ್ನಡ ವಿರೋಧಿ ನೀತಿ ವಿರುದ್ಧ ನ್ಯಾಯಾಂಗ ಹೋರಾಟಕ್ಕೆ ಚಿಂತನೆ: ಕಸಾಪ

eNewsLand Team

 ರಾವತ್  ‘ಸಿಡಿಎಸ್’ ಹುದ್ದೆ ಎಂತದ್ದಾಗಿತ್ತು? ಅತ್ಯುನ್ನತ ಸೈನ್ಯಾಧಿಕಾರದ ಕಲ್ಪನೆ ಇದ್ಯಾ?

eNewsLand Team

ರಾಜ್ಯದಲ್ಲಿ ನಿವೇಶನ ಇಲ್ಲದಿರೋರು ಲಕ್ಷಾಂತರ ಜನ! ಸಚಿವ ಸೋಮಣ್ಣ ಹೇಳಿದ್ದೇನು, ಇಲ್ನೋಡಿ!

eNewsLand Team