35 C
Hubli
ಮಾರ್ಚ್ 28, 2023
eNews Land
ಸುದ್ದಿ

ದಾಸೋಹಮಠದ ಅದ್ದೂರಿ ಜಾತ್ರೆಗೆ  ಬ್ರೇಕ್!!!

Listen to this article

ಇಎನ್ಎಲ್ ಅಣ್ಣಿಗೇರಿ:  ಪಟ್ಟಣದ ದಾಸೋಹಮಠದ ರುದ್ರಮುನಿ ಶ್ರೀಗಳ ಪುಣ್ಯಸ್ಮರಣೆ ಜಾತ್ರಾಮಹೋತ್ಸವ ಆಚರಣೆ ರದ್ದು ಮಾಡಲಾಗಿದೆ ಎಂದು ಪೀಠಾಧಿಕಾರಿ ಶಿವಕುಮಾರ ಶ್ರೀಗಳು ನುಡಿದರು.
ಪಟ್ಟಣದ ದಾಸೋಹಮಠದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕೋವಿಡ್ 3ನೇ ಅಲೆ ರಾಷ್ಟ್ರ,ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚು ಪಸರಿಸುತ್ತಿದ್ದು, ಸರ್ಕಾರ ಹಾಗೂ ಆರೋಗ್ಯ ಇಲಾಖೆ ಜನರ ಆರೋಗ್ಯ ಕಾಪಾಡುವಲ್ಲಿ ಕಟ್ಟುನಿಟ್ಟಿನ ಕೋವಿಡ್ ನಿಯಮಗಳನ್ನು ಪಾಲಿಸಲು ಕ್ರಮ ಕೈಗೊಂಡ ಪರಿಣಾಮ, ವೀಕೆಂಡ್ ಕರ್ಪ್ಯೂ ಜ.8.9ರಂದು ಜಾರಿಗೆ ತಂದಿದ್ದು, ಎಲ್ಲಾ ಸಭೆ ಸಮಾರಂಭ ಮದುವೆ. ಜಾತ್ರಾ ಮಹೋತ್ಸವ ರದ್ದುಗೊಳಿಸಿದ್ದಕ್ಕೆ, ಜಿಲ್ಲಾಧಿಕಾರಿ ಆದೇಶ ಪ್ರಕಾರ ದಾಸೋಹಮಠದ ಜಾತ್ರಾಹಮಹೋತ್ಸವ ಜ.8 ಮತ್ತು ಜ.9 ರಂದು ಜರಗಬೇಕಾದ ನಿಟ್ಟಿನಲ್ಲಿ ಅಡ್ಡಪಲ್ಲಕ್ಕಿ ಮಹೋತ್ಸವ, ರಥೋತ್ಸವ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ. ಎಂದರು.
ದಾಸೋಹಮಠದಲ್ಲಿ ಸದ್ಗರು ರುದ್ರಮುನಿ ಶ್ರೀಗಳು ಮತ್ತು ಶಂಕರೇದ್ರ ಶ್ರೀಗಳ ಕತೃಗದ್ದುಗೆಗೆ ಸಾಂಪ್ರಾದಾಯಕ ಮಠದ ಪರಂಪರೆಯ ಧಾರ್ಮಿಕ ವಿಧಿ-ವಿಧಾನಗಳ ಅನ್ವಯ ಮಠದಲ್ಲಿ ರುದ್ರಾಭಿಷೇಕ,ಪೂಜೆ ಪುನಸ್ಕಾರಗಳನ್ನು ಕೈಗೊಳ್ಳಲಾಗುವುದು.
ಪಟ್ಟಣ ಹಾಗೂ ಸುತ್ತಮುತ್ತಲಿನ ಸದ್ಭಕ್ತರು, ಸಾಮಾಜಿಕ ಅಂತರ, ಮಾಸ್ಕ್,ಸ್ಯಾನಿಟೇಸರ್ ಬಳಿಸಿ, ಸರ್ಕಾರ ಕಟ್ಟಿನಿಟ್ಟಿನ ಕೋವಿಡ್ ನಿಯಮಗಳನ್ನು ಉಲ್ಲಂಘಿಸದೇ, ಸದ್ಗರು ರುದ್ರಮುನಿಶ್ರೀಗಳು, ಶಂಕರೇoದ್ರ ಶ್ರೀಗಳು, ದರುಶನ ಪಡೆದು ಪುನಿತರಾಗಬೇಕೆಂದರು.
ಈ ಸಂದರ್ಭದಲ್ಲಿ ಮಠದ ಸದ್ಭಕ್ತರು ಟ್ರಸ್ಟ್ ಕಮಿಟಿ ಸದಸ್ಯರು, ಮಾಜಿ ಕ್ರೇಡಿಲ್ ಅಧ್ಯಕ್ಷ ಷಣ್ಮುಖ ಗುರಿಕಾರ, ಟ್ರಸ್ಟ್ ಅಧ್ಯಕ್ಷ ಆರ್.ಬಿ.ದೇಸಾಯಿ,ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಸದ್ಭಕ್ತರು, ಉಪಸ್ಥಿತರಿದ್ದರು.

Related posts

ಏಳು ಮಕ್ಕಳ ತಾಯಮ್ಮ ದೇವಿಗೆ ಸಂಕ್ರಾಂತಿ ಸಿಂಗಾರ

eNewsLand Team

ಅಣ್ಣಿಗೇರಿ ಜನಪ್ರತಿನಿಧಿಗಳಿಲ್ಲದೇ ಉಳಿತಾಯ ಬಜೆಟ್ ಮಂಡಸಿದ: ಪುರಸಭೆ

eNEWS LAND Team

ಪ್ರತಿಯೊಬ್ಬ ಪತ್ರಿಕಾ ವಿತರಕರು ಒಕ್ಕೂಟದ ಕೈ ಬಲಪಡಿಸಬೇಕು: ನಾಗರಾಜ ಕುಲಕರ್ಣಿ. ಪತ್ರಿಕಾ ವಿತರಕರು ನೋಡಲೇಬೇಕಾದ ಸುದ್ದಿ

eNEWS LAND Team