22.6 C
Hubli
ಅಕ್ಟೋಬರ್ 1, 2023
eNews Land
ಸುದ್ದಿ

ಧಾರವಾಡದ ಕೋವಿಡ್ ಪಾಸಿಟಿವಿಟಿ ರೇಟ್ ಎಷ್ಟಿದೆ ಗೊತ್ತಾ?! !!

ಇಎನ್ ಎಲ್ ಧಾರವಾಡ::ಧಾರವಾಡ ಜಿಲ್ಲೆಯ ಕೋವಿಡ್ ಸೋಂಕಿತರ ಸರಾಸರಿ ಶೇ. 17.99 ಪಾಸಿಟಿವಿಟಿ ದರ ದಾಖಲಾಗಿದೆ.

ಜಿಲ್ಲೆಯಲ್ಲಿ ಪ್ರಸ್ತುತ (ಜ.18) 3,558 ಸಕ್ರಿಯ ಪ್ರಕರಣಗಳಿವೆ. ಹುಬ್ಬಳ್ಳಿ ನಗರದಲ್ಲಿ ಅತ್ಯಧಿಕ 1,740, ಧಾರವಾಡ ನಗರದಲ್ಲಿ 823 ಪ್ರಕರಣಗಳಿವೆ. ಕಳೆದ ಏಳು ದಿನಗಳಲ್ಲಿ 39,959 ಸ್ಯಾಂಪಲ್ ಗಳನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದೆ.
4,419 ಪಾಸಿಟಿವ್ ದೃಢ ಪಟ್ಟಿವೆ. ಒಂದು ವಾರದಲ್ಲಿ ಸರಾಸರಿ ಶೇ. 11.06 ಪಾಸಿಟಿವಿಟಿ ದರ ದಾಖಲಾಗಿದೆ. ಗ್ರಾಮೀಣ ಭಾಗದಲ್ಲಿ ಕಡಿಮೆಯಿದೆ. ಕಿಮ್ಸ್ ನಲ್ಲಿ 27, ಜಿಲ್ಲಾ ಆಸ್ಪತ್ರೆಯಲ್ಲಿ 18, ರೈಲ್ವೆ ಆಸ್ಪತ್ರೆಯಲ್ಲಿ 39 ಸೇರಿದಂತೆ ಒಟ್ಟು 152 ಸೋಂಕಿತರು ಮಾತ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ‌. ಜಿಲ್ಲೆಯಲ್ಲಿ ಒಟ್ಟು 3137 ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡಲಾಗಿದೆ.
ವೈದ್ಯಕೀಯ ಆಕ್ಸಿಜನ್, ಔಷಧಿ ಸೇರಿದಂತೆ ಯಾವುದೇ ಕೊರತೆಗಳು ಇಲ್ಲ. ಹೋಮ್ ಐಸೋಲೇಷನ್ ನಲ್ಲಿ ಇರುವವರಿಗೆ ಫಿಸಿಕಲ್ ಟ್ರಯೇಜಿಂಗ್ ನಡೆಸಲು 30 ತಂಡಗಳನ್ನು ನಿಯೋಜಿಸಲಾಗಿದೆ. ಇದಕ್ಕಾಗಿ 30 ವಾಹನಗಳನ್ನು ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತದಿಂದ ಬಾಡಿಗೆ ಪಡೆಯಲಾಗಿದೆ. ಕೋವಿಡ್ ತಪಾಸಣೆಗೆ 15 ಸಂಚಾರಿ ವಾಹನಗಳು ಕಾರ್ಯ ನಿರ್ವಹಿಸುತ್ತಿವೆ.
ಸೋಂಕು ನಿಯಂತ್ರಿಸಲು ಕೋವಿಡ್ ತಪಾಸಣೆಗೆ ಬಂದ ಸಮಯದಲ್ಲಿಯೇ ಔಷಧಿ ಕಿಟ್ ನೀಡಿ ಕಳುಹಿಸಲಾಗುತ್ತಿದೆ. ಪ್ರಯೋಗಾಲಯದ ವರದಿ ಬಂದ ಕೂಡಲೇ ಸೋಂಕಿತರ ಚಿಕಿತ್ಸೆ ಪ್ರಾರಂಭವಾಗುತ್ತದೆ. ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ. ಹುಬ್ಬಳ್ಳಿ ಶಹರ, ಗ್ರಾಮೀಣ ಹಾಗೂ ಧಾರವಾಡ ತಾಲ್ಲೂಕಿನಲ್ಲಿ 1ರಿಂದ 8ನೇ ತರಗತಿಗಳಿಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಸಾರ್ವಜನಿಕ ಹಾಗೂ ಖಾಸಗಿ ಸಂಸ್ಥೆಗಳ ಕಟ್ಟಡಗಳಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. ಸದ್ಯ 46 ಜನರು ಮಾತ್ರ ಈ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ತಿಳಿಸಿದ್ದಾರೆ.

Related posts

CANCELLATION / PARTIAL CANCELLATION / DIVERSION OF TRAINS

eNewsLand Team

ಧಮ್ ಮಾರೋ ಧಮ್!! ಗಾಂಜಾ ಸಾಗಿಸುತ್ತಿದ್ದವ ಮುದುಕ ಅಂದರ್!!

eNewsLand Team

ಡ್ರಗ್ಸ್ ತಡೆಗೆ ಸರ್ಕಾರದ ಜೊತೆ ಕೈ ಜೋಡಿಸಿ: ಸಿಎಂ

eNewsLand Team