34 C
Hubli
ಏಪ್ರಿಲ್ 25, 2024
eNews Land
ಸುದ್ದಿ

ಮಾನವೀಯತೆ ಮರೆತು ಲಂಚ ಕೇಳಿದ್ದವರು ಎಸಿಬಿ ಕೆಡ್ಡಾಕ್ಕೆ ಬಿದ್ದರು! ಇಲ್ಲಿದೆ ಹುಬ್ಬಳ್ಳಿ ಭ್ರಷ್ಟಿಗಳ ಕಥೆ

ಇಎನ್ಎಲ್ ಧಾರವಾಡ:

ಅರಣ್ಯ ಇಲಾಖೆಯಲ್ಲಿ ಕರ್ತವ್ಯದಲ್ಲಿದ್ದಾಗಲೆ ಮೃತಪಟ್ಟವರ ಗ್ರ್ಯಾಚೂಟಿ ಹಾಗೂ ವೇತನ ಬಿಡುಗಡೆಗೆ ಲಂಚದ ಬೇಡಿಕೆ ಇಟ್ಟಿದ್ದ ವಲಯ ಅರಣ್ಯ ಅಧಿಕಾರಿ ಕಚೇರಿಯ ಇಬ್ಬರು ಸಿಬ್ಬಂದಿ ಎಸಿಬಿ ಬಲೆಗೆ ರೆಡ್‌ಹ್ಯಾಾಂಡಾಗಿ ಸಿಕ್ಕಿಬಿದ್ದಿದ್ದಾರೆ.
ಹೊರಗುತ್ತಿಗೆ ಕಂಪ್ಯೂಟರ್ ಆಪರೇಟರ್ ಶಿವರಾಜ ಕಲ್ಲಪ್ಪ ಕುಲಕರ್ಣಿ ಹಾಗೂ ದ್ವಿತೀಯ ದರ್ಜೆ ಸಹಾಯಕ ಅನ್ನದಾನಯ್ಯ ನೀಲಗುಂದಮಠ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದವರು.
ಇಲಾಖೆಯಲ್ಲಿ ಕ್ಷೇಮಾಭಿವೃದ್ಧಿ ನೌಕರರಾಗಿ ಕೆಲಸ ಮಾಡುತ್ತಿದ್ದ ಅಖಳಂಡಪ್ಪ ಚಕ್ರಸಾಲಿ ಕರ್ತವ್ಯದಲ್ಲಿದ್ದಾಗ ಮೃತಪಟ್ಟಿದ್ದರು. ಅವರ ಗ್ರ್ಯಾಚೂಟಿ ಹಾಗೂ ಮೂರು ತಿಂಗಳ ಬಾಕಿ ವೇತನ ಬಿಡುಗಡೆಗೆ ₹ 15ಸಾವಿರ ಬೇಡಿಕೆ ಇಟ್ಟಿದ್ದರು.
ಎಸಿಬಿ ಉತ್ತರ ವಲಯ ಪೊಲೀಸ್ ಅಧೀಕ್ಷಕ ಬಿ.ಎಸ್.ನೇಮಗೌಡ ಮಾರ್ಗದರ್ಶನದಲ್ಲಿ ಪಿಐ ವಿ.ಎನ್.ಕಡಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರಿದಿದೆ.

Related posts

Market Opening Bell

eNEWS LAND Team

ಹುಬ್ಬಳ್ಳಿ ಮತ್ತು ಗುಂತಕಲ್ ಗಳ ನಡುವೆ ಡೆಮು ರೈಲು ಸಂಚಾರ ಪ್ರಾರಂಭ

eNEWS LAND Team

 ಕಪ್ಪೆಗಳ ಉಳಿವಿಗಾಗಿ ಜಾಗೃತಿ ಮೂಡಿಸಲು ಕರ್ನಾಟಕದಲ್ಲಿ ಕಪ್ಪೆಗಳ ಹಬ್ಬ ಆಯೋಜನೆ

eNEWS LAND Team