28 C
Hubli
ಸೆಪ್ಟೆಂಬರ್ 21, 2023
eNews Land
ಸುದ್ದಿ

ರೆಡ್ ರೋಸ್ ಕೊಡಲು ಹೋಗಿ, ಪೊಲೀಸರ ಅತಿಥಿಯಾದ ಕಾಂಗ್ರೆಸಿಗರು

ಇಎನ್ಎಲ್ ಹುಬ್ಬಳ್ಳಿ: ಕಲಾಪ ನಡೆಸಲು‌ ಅಡ್ಡಿಯಾದ ಕಾಂಗ್ರೆಸ್ ಧೋರಣೆ ಖಂಡಿಸಿ ಬಿಜೆಪಿ ಪ್ರತಿಭಟನಾ ಸಭೆ ಕೈಬಿಟ್ಟು ಆಡಳಿತ ಪಕ್ಷವಾಗಿ ತನ್ನ ಜವಾಬ್ದಾರಿ ಅರಿತುಕೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ಇತರೆ ಮುಖಂಡರಿಗೆ ಗುಲಾಬಿ ಹೂವು ಕೊಡಲು ಮುಂದಾದ ಕಾಂಗ್ರೆಸ್ ಕಾರ್ಯಕರ್ತರನ್ನು ಉಪನಗರ ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದರು.

ಇಲ್ಲಿನ ದೇಶಪಾಂಡೆ ನಗರದ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ಶನಿವಾರ ಸಂಜೆ ಬಿಜೆಪಿಯಿಂದ ಆಯೋಜಿಸಿದ್ದ ಪ್ರತಿಭಟನಾ ಸಭೆಗೆ ಬರುತ್ತಿದ್ದ ಮುಖಂಡರನ್ನು ರಸ್ತೆಯಲ್ಲಿ ತಡೆದು ಗುಲಾಬಿ ಹೂವು ನೀಡಲು ಪ್ರವಾಸಿ ಮಂದಿರ ಹಿಂಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದರು.

ಮಾಜಿ ಮೇಯರ್ ಪಾಂಡುರಂಗ ಪಾಟೀಲ್, ಡಿ.ಕೆ.ಚೌಹಾಣ್ ಅವರಿಗೆ ಹೂವನ್ನು ಕಾಂಗ್ರೆಸ್ಸಿಗರು ನೀಡಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಸಾಂಕೇತಿಕವಾಗಿ ಹೂವು ಕೊಟ್ಟಿದ್ದೀರಿ, ಇಲ್ಲಿಗೆ ಮುಕ್ತಾಯ ಮಾಡುವಂತೆ ಮನವಿ ಮಾಡಿದರು. ಆದರೆ, ಕಾಂಗ್ರೆಸ್ಸಿನವರು ಒಪ್ಪದಿದ್ದಾಗ ವಾಗ್ವಾದ ನಡೆಯಿತು.

ಅಂತಿಮವಾಗಿ ಮನವೊಲಿಕೆ ವಿಫಲವಾದ ನಂತರ ಪೊಲೀಸ್ ಬಸ್ಸುಗಳಲ್ಲಿ ಕರೆದೊಯ್ದು ಬಿಡುಗಡೆ ಮಾಡಿದರು. ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿ, ಮಹಾಂತೇಶ ಕುಲಕರ್ಣಿ, ಆರೀಫ್ ಭದ್ರಾಪುರ, ಸಂದೀಲ್ ಕುಮಾರ್, ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ, ಶರೀಫ್ ಗರಗದ, ಗೋಪಾಲ್, ಕಾಂಗ್ರೆಸ್ ಮಹಿಳಾ ಜಿಲ್ಲಾಧ್ಯಕ್ಷೆ ದೀಪಾ ಗೌರಿ ಸೇರಿ ಹಲವರು ಭಾಗಿಯಾಗಿದ್ದರು.

Related posts

ಹುಬ್ಬಳ್ಳಿಯಲ್ಲಿ ದಿವ್ಯ ಕಾಶಿ, ಭವ್ಯ ಕಾಶಿ ನೇರಪ್ರಸಾರ: ಮೋದಿ ಬಗ್ಗೆ ಶ್ರೀಗಳು ಏನಂದ್ರು ಗೊತ್ತಾ?

eNewsLand Team

ಉರುಸು ಪ್ರಯುಕ್ತ ಸಾಮೂಹಿಕ ಪ್ರಸಾದ ಸೇವನೆ :ಗ್ರಾಮಸ್ಥರು ಅಸ್ವಸ್ಥ

eNEWS LAND Team

“ಪತ್ರಿಕೋದ್ಯಮ ರತ್ನ” ಪ್ರಭುಲಿಂಗಪ್ಪ ರಂಗಾಪೂರ

eNEWS LAND Team