27 C
Hubli
ಮೇ 25, 2024
eNews Land
ಸುದ್ದಿ

ಕಾಂಗ್ರೆಸ್ 40 ಸ್ಟಾರ್ ಪ್ರಚಾರಕ ಪಟ್ಟಿ ಬಿಡುಗಡೆ. ಯಾರ್ಯಾರು ಪ್ರಚಾರಕರು ನೋಡಿ!

ಇಎನ್ಎಲ್ ಬೆಂಗಳೂರು: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಇಂದು ಬುಧವಾರ 40 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದೆ.
ಪ್ರಮುಖವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸ್ಟಾರ್‌ ಪ್ರಚಾರಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಮಾಜಿ ಸಿಎಂ ಸಿದ್ರಾಮಯ್ಯ, ಕಾಂಗ್ರೆಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಎಂ.ಬಿ.ಪಾಟೀಲ, ನಟಿ ರಮ್ಯಾ, ಕನಟ ರಾಜ ಬಬ್ಬರ್‌, ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮೊಹಮ್ಮದ್‌ ಅಜರುದ್ದೀನ್‌ ಸಹ ಇದ್ದಾರೆ. ಅಷ್ಟೇ ಅಲ್ಲದೆ ಮೊನ್ನೆಯಷ್ಟೇ ಸೇರಿದ ಮಾಜಿ ಸಿಎಂ ಜಗದೀಶ ಶೆಟ್ಟರ ಅವರ ಹೆಸರೂ ಕೂಡಾ ಕಾಂಗ್ರೆಸ್‌ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿದೆ.

ಕಾಂಗ್ರೆಸ್‌ ಸ್ಟಾರ್‌ ಕ್ಯಾಂಪೇನರ್‌ಗಳ ಪಟ್ಟಿ
ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಡಿ.ಕೆ. ಶಿವಕುಮಾರ, ಸಿದ್ರಾಮಯ್ಯ, ಕೆ.ಸಿ. ವೇಣುಗೋಪಾಲ, ರಣದೀಪ್‌ ಸಿಂಗ್‌ ಸುರ್ಜೇವಾಲಾ, ಅಶೋಕ್‌ ಗೆಹ್ಲೋಟ್‌, ಭೂಪೇಶ್‌ ಬಘೇಲ್‌, ಸುಕ್ವಿಂದರ್‌ ಸಿಂಗ್‌ ಸುಕ್ಕು, ಪಿ.ಚಿದಂಬರಂ, ಪೃಥ್ವಿರಾಜ ಚವ್ಹಾಣ, ಅಶೋಕ್‌ ಚವ್ಹಾಣ, ಶಶಿ ತರೂರ್‌, ಬಿ.ಕೆ. ಹರಿಪ್ರಸಾದ, ಎಂ.ಬಿ. ಪಾಟೀಲ, ಡಾ.ಜಿ ಪರಮೇಶ್ವರ. ಕೆ.ಎಚ್‌. ಮುನಿಯಪ್ಪ, ಜೈರಾಮ ರಮೇಶ, ಎಂ ವೀರಪ್ಪ ಮೊಯ್ಲಿ, ರಾಮಲಿಂಗಾರೆಡ್ಡಿ, ಸತೀಶ ಜಾರಕಿಹೊಳಿ, ಜಗದೀಶ್‌ ಶೆಟ್ಟರ, ಡಿ.ಕೆ. ಸುರೇಶ, ಜಿ.ಸಿ. ಚಂದ್ರಶೇಖರ, ಸೈಯದ್‌ ನಾಸೀರ್‌ ಹುಸೇನ್‌, ಜಮೀರ್‌ ಅಹಮದ್‌ ಖಾನ್‌, ಎಚ್‌.ಎಂ. ರೇವಣ್ಣ, ಉಮಾಶ್ರೀ, ರೇವಂತ್‌ ರೆಡ್ಡಿ, ರಮೇಶ ಚೆನ್ನಿತಾಲಾ, ಬಿ.ವಿ. ಶ್ರೀನಿವಾಸ, ರಾಜ್‌ ಬಬ್ಬರ್‌, ಮೊಹಮದ್‌ ಅಜರುದ್ದೀನ್‌, ರಮ್ಯಾ,ಇಮ್ರಾನ್‌ ಪ್ರತಾಪ್ಗರಿ, ಕನ್ನಯ್ಯಾ ಕುಮಾರ, ರೂಪಾ ಶಶಿಧರ, ಸಾಧುಕೋಕಿಲ ಸ್ಟಾರ್‌ ಪ್ರಚಾರಕರಾಗಿದ್ದಾರೆ.

Related posts

TEMPORARY STOPPAGE OF TRAINS AT NAYANDA HALLI

eNEWS LAND Team

ಮತ ಎಣಿಕೆ: ಬಂದೋಬಸ್ತ್’ಗೆ 548 ಪೊಲೀಸರ ನೇಮಕ: ಪೊಲೀಸ್ ಕಮೀಷನರ್ ರಮಣ ಗುಪ್ತ

eNEWS LAND Team

ವಾಕರಸಾಸಂ: ಇಂಧನ ಉಳಿತಾಯದಲ್ಲಿ ಕಾರ್ಯಕ್ಷಮತೆ ತೋರಿದವರಿಗೆ ಪ್ರಶಸ್ತಿ ಪ್ರದಾನ

eNewsLand Team