28.5 C
Hubli
ಏಪ್ರಿಲ್ 30, 2024
eNews Land
ಸುದ್ದಿ

CHANGE IN PATTERN OF TRAIN SERVICES ರೈಲುಗಳ ಸೇವೆಯಲ್ಲಿ ಬದಲಾವಣೆ

 

As notified by South Central Railway, the following train services will be cancelled, regulated and diverted due to engineering work related to commissioning of the 3rd line between Manubolu and Gudur of Vijayawada division, as detailed below:

a) CANCELLATION OF TRAINS:

1. Train No. 18637 Hatia-Sir M. Visvesvaraya Terminal Bengaluru Weekly Express, journey commencing on August 12, 2023 will be cancelled.

2. Train No. 18638 Sir M. Visvesvaraya Terminal Bengaluru-Hatia Weekly Express, journey commencing on August 15, 2023 will be cancelled.

b) REGULATION OF TRAINS:

1. Train No. 22818 Mysuru-Howrah Weekly Superfast Express, leaving from Mysuru on August 13, 2023 will be regulated for 90 minutes enroute.

c) DIVERSION OF TRAINS:

1. Train No. 12509 Sir M. Visvesvaraya Terminal Bengaluru-Guwahati Bi-weekly Superfast Express, leaving from SMVT Bengaluru on August 10 & 11, 2023, will be diverted to run via Katpadi Jn., Melpakkam, Renigunta Jn., Yerraguntla, Nandyal & Guntur, skipping stoppages at Arakkonam Jn., Perambur, and Ongole stations.

2. Train No. 12510 Guwahati-Sir M. Visvesvaraya Terminal Bengaluru Tri-weekly Superfast Express, leaving from Guwahati on August 13, 2023, will be diverted to run via Guntur, Nandyal, Yerraguntla, Renigunta Jn., Melpakkam & Katpadi Jn., skipping stoppages at Perambur and Arakkonam stations.

3. Train No. 22502 New Tinsukia-Sir M. Visvesvaraya Terminal Bengaluru Weekly Superfast Express, leaving from New Tinsukia on August 11, 2023, will be diverted to run via Guntur Jn., Nandyal, Yerraguntla, Renigunta Jn., Melpakkam & Katpadi, skipping stoppages at Ongole, Nellore, Perambur stations.

4. Train No. 22501 Sir M. Visvesvaraya Terminal Bengaluru-New Tinsukia Weekly Superfast Express, leaving from SMVT Bengaluru on August 15, 2023, will be diverted to run via Katpadi Jn., Melpakkam, Renigunta Jn., Yerraguntla, Nandyal & Guntur, skipping stoppages at Perambur, Nellore and Ongole stations. SWR CPRO Aneesh Hegde

ರೈಲುಗಳ ಸೇವೆಯಲ್ಲಿ ಬದಲಾವಣೆ

ವಿಜಯವಾಡ ವಿಭಾಗದ ಮನುಬೋಲು ಮತ್ತು ಗುಡೂರು ನಡುವೆ ನಡೆಯುತ್ತಿರುವ ಎಂಜಿನಿಯರಿಂಗ್ ಕಾಮಗಾರಿಯ ಸಲುವಾಗಿ ಈ ಕೆಳಗಿನ ಕೆಲವು ರೈಲುಗಳನ್ನು ರದ್ದು/ನಿಯಂತ್ರಣ ಮತ್ತು ಮಾರ್ಗ ಬದಲಾವಣೆ ಮಾಡಲಾಗುತ್ತಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ವಲಯವು ಸೂಚಿಸಿದೆ.

a) ರೈಲುಗಳು ರದ್ದು:

1. ಹಟಿಯಾ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 18637 ಹಟಿಯಾ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲನ್ನು ಆಗಸ್ಟ್ 12 ರಂದು ರದ್ದುಗೊಳಿಸಲಾಗುತ್ತಿದೆ.

2. ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 18638 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಹಟಿಯಾ ಎಕ್ಸ್‌ಪ್ರೆಸ್ ರೈಲನ್ನು ಆಗಸ್ಟ್ 15 ರಂದು ರದ್ದುಗೊಳಿಸಲಾಗುತ್ತಿದೆ.

b) ರೈಲು ನಿಯಂತ್ರಣ:

1. ಆಗಸ್ಟ್ 13 ರಂದು ಮೈಸೂರಿನಿಂದ ಹೊರಡುವ ರೈಲು ಸಂಖ್ಯೆ 22818 ಮೈಸೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯ 90 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.

c) ರೈಲುಗಳ ಮಾರ್ಗ ಬದಲಾವಣೆ:

1. ಆಗಸ್ಟ್ 10 ಮತ್ತು 11 ರಂದು ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 12509 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಗುವಾಹಟಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಕಟ್ಪಾಡಿ, ಮೇಲ್ಪಕ್ಕಂ, ರೇಣಿಗುಂಟಾ, ಯರಗುಂಟ್ಲಾ, ನಂದ್ಯಾಳ ಮತ್ತು ಗುಂಟೂರು ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಅರಕ್ಕೋಣಂ, ಪೆರಂಬೂರ ಮತ್ತು ಒಂಗೋಲ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

2. ಆಗಸ್ಟ್ 13 ರಂದು ಗುವಾಹಟಿಯಿಂದ ಹೊರಡುವ ರೈಲು ಸಂಖ್ಯೆ 12510 ಗುವಾಹಟಿ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಗುಂಟೂರು, ನಂದ್ಯಾಳ, ಯರಗುಂಟ್ಲಾ, ರೇಣಿಗುಂಟಾ, ಮೇಲ್ಪಕ್ಕಂ ಮತ್ತು ಕಟ್ಪಾಡಿ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಪೆರಂಬೂರ ಮತ್ತು ಅರಕ್ಕೋಣಂ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

3. ಆಗಸ್ಟ್ 11 ರಂದು ನ್ಯೂ ಟಿನ್ಸುಕಿಯಾದಿಂದ ಹೊರಡುವ ರೈಲು ಸಂಖ್ಯೆ 22502 ನ್ಯೂ ಟಿನ್ಸುಕಿಯಾ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಗುಂಟೂರು, ನಂದ್ಯಾಳ, ಯರಗುಂಟ್ಲಾ, ರೇಣಿಗುಂಟಾ, ಮೇಲ್ಪಕ್ಕಂ ಮತ್ತು ಕಟ್ಪಾಡಿ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಒಂಗೋಲ, ನೆಲ್ಲೂರು ಮತ್ತು ಪೆರಂಬೂರ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

4. ಆಗಸ್ಟ್ 15 ರಂದು ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 22501 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ನ್ಯೂ ಟಿನ್ಸುಕಿಯಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಕಟ್ಪಾಡಿ, ಮೇಲ್ಪಕ್ಕಂ, ರೇಣಿಗುಂಟಾ, ಯರಗುಂಟ್ಲಾ, ನಂದ್ಯಾಳ ಮತ್ತು ಗುಂಟೂರು ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಪೆರಂಬೂರ, ನೆಲ್ಲೂರು ಮತ್ತು ಒಂಗೋಲ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

Related posts

ಸನ್ನಡತೆ; ಐದು ಜೈಲು ಹಕ್ಕಿಗಳೀಗ ಫ್ರೀ ಬರ್ಡ್ಸ್!! ಯಾರವರು??

eNewsLand Team

ಕೋವಿಡ್ 19 ನಿಯಂತ್ರಣಕ್ಕೆ ಸಿಎಂ ಸೂಚಿಸಿದ್ದೇನು?

eNewsLand Team

ಯಲ್ಲಮ್ಮನ ಗುಡ್ಡಕ್ಕೆ ವಿಶೇಷ ಬಸ್ ವ್ಯವಸ್ಥೆ

eNEWS LAND Team