22 C
Hubli
ಅಕ್ಟೋಬರ್ 1, 2023
eNews Land
ಸುದ್ದಿ

ಮಳೆ ಲೆಕ್ಕಿಸದೇ ಕೇಂದ್ರ ತಂಡ ಭೇಟಿ: ಚೆನ್ನಾಗಿ ಕೆಲಸ ಮಾಡಿದ್ದೀರಿ: ಅಂಕಿತ್ ಮಿಶ್ರಾ

ಇಎನ್ಎಲ್ ಕಲಘಟಗಿ: ಕೇಂದ್ರದಿoದ ವೀಕ್ಷಕರಾಗಿ ಬಂದ ಭಾರತ ಸರ್ಕಾರದ ನರೇಗಾ ಉಪಕಾರ್ಯದರ್ಶಿ ಅಂಕಿತ್ ಮಿಶ್ರಾ ಹಾಗೂ ತಂಡ ಕಲಘಟಗಿ ತಾಲೂಕಿನ ಬೇಗೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲ್ಲಂಬಿ ಗ್ರಾಮದ ಫಕ್ಕಿರಪ್ಪ ಸುತಗಟ್ಟಿ, ಶಂಕ್ರಪ್ಪ ಸಾದರ ಇವರ ನಿರ್ಮಾಣಗೊಂಡ ಕೃಷಿಹೊಂಡಗಳನ್ನು ಕೃಷಿ ಇಲಾಖೆಯಿಂದ ವೀಕ್ಷಿಸಿದರು. ಈ ಸಂದರ್ಭದಲ್ಲಿ ಮಾತನಾಡಿ ನೀರು ಇಂಗಿಸುವಿಕೆ ಕಾರ್ಯಗಳನ್ನು ಉತ್ತಮವಾಗಿ ಮಾಡಿದ್ದೀರಿ, ಹಿಂದಿ ಭಾಷೆಯಲ್ಲೇ ರೈತನಿಗೆ ಪ್ರಶ್ನೆ ಕೇಳಿ ಸಮರ್ಪಕವಾಗಿ ಉತ್ತರಗಳನ್ನು ಸ್ವೀಕರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ, ಧಾರವಾಡ ಆರ್.ಎಫ್.ಓ. ನದಾಫ, ಹುಬ್ಬಳ್ಳಿಯ ನರೇಗಾ ಸಹಾಯಕ ನಿರ್ದೆಶಕ ಸದಾನಂದ ಅಮರಾಪುರ, ಕೃಷಿ ವಿಸ್ತರಣಾ ಅಧಿಕಾರಿ ಎನ್.ಎಫ್. ಕಟ್ಟೆಗೌಡರ, ತಾಲೂಕ ಪಂಚಾಯತ ಇಓ ಭಾಗ್ಯಶ್ರಿ ಜಾಗಿರದಾರ, ಕಲಘಟಗಿ ತಾಪಂ ನರೇಗಾ ಸಹಾಯಕ ನಿರ್ದೇಶಕ ಚಂದ್ರು ಪೂಜಾರ, ಆಯ್ಇಸಿ ಸಂಯೋಜಕ ಎಸ್.ದಿವಾಕರ, ಬೇಗೂರ ಗ್ರಾಪಂ ಪಿಡಿಓ ಶಂಕರ ಗೌಳೇರ, ಸಹಾಯಕ ಅಭಿಯಂತರ ಅಭಿಷೇಕ ಡೊಂಬರ, ಚನ್ನಪ್ಪ ನವಣಿ, ಪ್ರಭು ಅಂಗಡಿ, ಶಿವಾನಂದ ಧನಿಗೊಂಡ, ಗ್ರಾಪಂ ಸದಸ್ಯ ರಾಚಪ್ಪ ಬಿಸರಳ್ಳಿ, ಗುರುನಾಥ ಹರಿಜನ, ಯುವ ರೈತ ಶಿವಾನಂದ ಹುಲಕೊಪ್ಪ, ದ್ಯಾಮಣ್ಣ ಹುಲಕೊಪ್ಪ, ಮಂಜು ಕಮತರ, ಕಿರಣ ರೇವಡಿಹಾಳ, ಭರಮಪ್ಪ ಸಂಗಳದ ಮುಂತಾದವರು ಉಪಸ್ಥಿತರಿದ್ದರು.

Related posts

ಏ.4 ಅಹಿಂಸೆಯ ಅಗ್ರನಾಯಕ ತೀರ್ಥಂಕರ ಮಹಾವೀರರ 2622 ನೆಯ ಜನ್ಮಕಲ್ಯಾಣ ಮಹೋತ್ಸವ

eNEWS LAND Team

ಅಧಿಕಾರಿಗಳ ನಡೆ, ಶಾಲೆ ಕಡೆ

eNEWS LAND Team

ಚಿನ್ನದ ವ್ಯಾಪಾರಿಗಳಿಗೆ ಐಟಿ ಶಾಕ್

eNEWS LAND Team