22.3 C
Hubli
ಜೂನ್ 13, 2024
eNews Land
ಸುದ್ದಿ

 ರಾವತ್  ‘ಸಿಡಿಎಸ್’ ಹುದ್ದೆ ಎಂತದ್ದಾಗಿತ್ತು? ಅತ್ಯುನ್ನತ ಸೈನ್ಯಾಧಿಕಾರದ ಕಲ್ಪನೆ ಇದ್ಯಾ?

ಇಎನ್ಎಲ್ ಇನ್ಫಾರ್ಮೇಶನ್ ಸೆಂಟರ್

ಭಾರತೀಯ ಸೇನೆಯಲ್ಲಿ ಹೊಸ ಬೆಳವಣಿಗೆಗಳ ಸಾಲಿನಲ್ಲಿ ಸದ್ಯಕ್ಕೆ ಮುನ್ನಲೆಗೆ ಬಂದಿರುವುದು ಚೀಫ್ ಆಫ್ ದಿ ಡಿಫೆನ್ಸ್ ಸ್ಟಾಫ್ ಹುದ್ದೆಯ ಸೃಷ್ಟಿ. ಮೂರೂ ಸೇನೆಗಳ ನಡುವೆ ಸಮನ್ವಯ ಸಾಧಿಸುವುದಕ್ಕಾಗಿ ಈ ಹುದ್ದೆಯನ್ನು ಹುಟ್ಟುಹಾಕಲಾಗಿದೆ.

 ಏನಿದು ಸಿಡಿಎಸ್?

ದೇಶದ ರಕ್ಷಣೆಗಾಗಿ ಭೂಸೇನೆ, ವಾಯುಸೇನೆ ಹಾಗೂ ನೌಕಾಸೇನೆ ಎಂಬ ಮೂರು ಸೇನೆಗಳ ಮಹಾದಂಡನಾಯಕರಾಗಿ ರಾಷ್ಟ್ರಪತಿ ಕಾರ್ಯನಿರ್ವಹಿಸುತ್ತಾರೆ. ಮಹಾದಂಡನಾಯಕರ ಹೊರತಾಗಿ ಸೇನೆಗಳ ನಡುವೆ ಉತ್ತಮ ಸಂವಹನ, ಸಮನ್ವಯ ಸಾಧಿಸಿ ಅವನ್ನು ಮುನ್ನಡೆಸಲು ಓರ್ವ ಮುಖ್ಯ ದಂಡನಾಯಕರ ಅಗತ್ಯವಿದೆ .ಎಂಬುದಾಗಿ ಕಾರ್ಗಿಲ್ ಪುನರ್ ಪರಿಶೀಲನಾ ಸಮಿತಿ ಶಿಫಾರಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಭೂಸೇನಾ ಮುಖ್ಯಸ್ಥರಾಗಿದ್ದು, ಡಿ.31ಕ್ಕೆ ನಿವೃತ್ತರಾಗಲಿರುವ ಜನರಲ್ ಬಿಪಿನ್ ರಾವತ್ ಅವರನ್ನು ಮೊದಲ ಸಿಡಿಎಸ್ ಆಗಿ ಕೇಂದ್ರ ಸರ್ಕಾರ ನೇಮಕ ಮಾಡಿತ್ತು.

ಸಿಡಿಎಸ್ ಯಾಕೆ ಬೇಕಾಗಿತ್ತು?

ಭಾರತದ ಭದ್ರತೆ ಮತ್ತು ರಕ್ಷಣಾ ಪರಿಸ್ಥಿತಿಗೆ ಮೂರೂ ರಕ್ಷಣಾ ಪಡೆಗಳ ಪ್ರತ್ಯೇಕತೆ ಸೂಕ್ತವಾದುದಲ್ಲ. ಮೂರೂ ಸೇನಾ ದಳಗಳ ನಡುವೆ ಏಕತೆ ತರುವುದು ಅಗತ್ಯ. ಮೂರೂ ಸೇನಾಪಡೆಗಳು ಒಂದೇ ಸಮಯದಲ್ಲಿ, ಒಂದೇ ಸ್ಥಳದಲ್ಲಿ ಕಾರ್ಯಪ್ರವೃತ್ತರಾಗುವಂತೆ ಮಾಡುವ ಅಗತ್ಯವಿದೆ. ಇದಕ್ಕಾಗಿ ಮೂರೂ ದಳಗಳನ್ನು ನಿರ್ವಹಿಸಲಬಲ್ಲ ಉನ್ನತ ಅಧಿಕಾರಿ ಬೇಕು
ಯುದ್ಧ ಸ್ವರೂಪ ಮತ್ತು ರಕ್ಷಣಾ ಪರಿಸರದಲ್ಲಿ ಬದಲಾವಣೆ ತರಬೇಕಿದೆ.
ಸರ್ಕಾರವು ರಾಷ್ಟ್ರೀಯ ಭದ್ರತೆಗಿರುವ ಸವಾಲುಗಳ ಕುರಿತು ಗಮನಹರಿಸುತ್ತಿದೆ
ಸೇನಾ ಪರಿಣತರು ಆಯಾ ಸೇನಾ ವಿಭಾಗಗಳ ನಿರ್ಧಾರ ಕೈಗೊಳ್ಳುವಂತೆ ಮಾಡುವುದು.

ಯಾವ್ಯಾವ ದೇಶಗಳಲ್ಲಿ ಸಿಡಿಎಸ್ ಇದೆ?

ಯುನೈಟೆಡ್ ಕಿಂಗ್‌ಡಮ್, ಕೆನಡಾ, ಫ್ರಾನ್ಸ್‌, ಇಟಲಿ ಇತ್ಯಾದಿ ದೇಶಗಳಲ್ಲಿ ಸಿಡಿಎಸ್ ಇದೆ. ಕೆಲವೆಡೆ ಹೆಸರು ಬೇರೆಯಾದರೂ ಕಾರ್ಯ ಒಂದೇ. ಇಟಲಿ, ಸ್ಪೇನ್, ಯುಕೆ, ಕೆನಡಾದಲ್ಲಿ ಚೀಫ್ ಆಫ್‌ ದಿ ಡಿಫೆನ್ಸ್ ಸ್ಟಾಫ್, ಫ್ರಾನ್ಸ್‌ನಲ್ಲಿ ಚೀಫ್‌ ಆಫ್‌ದಿ ಆರ್ಮೀಸ್‌, ಚೀನಾದಲ್ಲಿ ಚೀಫ್ ಆಫ್‌ ದಿ ಜನರಲ್ ಸ್ಟಾಫ್, ಜಪಾನ್‌ನಲ್ಲಿ ಚೀಫ್‌ ಆಫ್‌ ಸ್ಟಾಫ್ ಎಂದು ಸಿಡಿಎಸ್ ಹುದ್ದೆಯನ್ನು ಕರೆಯಲಾಗುತ್ತದೆ. ಪಾಕಿಸ್ತಾನದಲ್ಲೂ ಈ ಹುದ್ದೆ ಇದೆ.

ಸಿಡಿಎಸ್ ಅಧಿಕಾರ ಹಾಗೂ ಜವಾಬ್ದಾರಿ

ದೇಶದ ರಕ್ಷಣಾ ಮಂತ್ರಿ ಹಾಗೂ ಮೂರೂ ಸಶಸ್ತ್ರಪಡೆಗಳ ದಂಡನಾಯಕರಿಗೆ ಮುಖ್ಯ ಸೇನಾ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಾರೆ. ಮೂರೂ ಸಶಸ್ತ್ರಪಡೆಗಳ ದಂಡನಾಯಕರು ಕೂಡ ರಕ್ಷಣಾ ಮಂತ್ರಿಗಳಿ ಆಯಾ ಪಡೆಗಳ ಕುರಿತು ನೇರವಾಗಿ ಸಲಹೆ ನೀಡಬಹುದಾಗಿದೆ.
ಸಿಡಿಎಸ್‌ ಯಾವುದೇ ಸಮರಾಭ್ಯಾಸಗಳಲ್ಲಿ ತೊಡಗುವುದಿಲ್ಲ. ಸಿಡಿಎಸ್‌ ಮೂರೂ ಸಶಸ್ತ್ರಪಡೆಗಳ ಆಡಳಿತಾಧಿಕಾರ ಹೊಂದಿರಲಿದ್ದಾರೆ. ಇದಲ್ಲದೆ ಬಾಹ್ಯಾಕಾಶ ಮತ್ತು ಸೈಬರ್‌ಸ್ಪೇಸ್‌ ಕ್ಷೇತ್ರಗಳೂ ಸಿಡಿಎಸ್‌ ಅಧಿಕಾರ ವ್ಯಾಪ್ತಿಗೆ ಬರಲಿವೆ.

 ‘ರಕ್ಷಣಾ ಶಸ್ತ್ರಾಸ್ತ್ರಗಳ ಖರೀದಿ ಮಂಡಳಿ’ ಹಾಗೂ ‘ರಕ್ಷಣಾ ಯೋಜನಾ ಸಮಿತಿ ಯ ಸದಸ್ಯರಾಗಿ ಇರಲಿದ್ದಾರೆ. ಮೂರೂ ಸಶ್ತ್ರಪಡೆಗಳ ನಡುವೆ ಕಾರ್ಯನಿರ್ವಹಣೆ, ತರಬೇತಿ, ಸಾರಿಗೆ, ಸೇವೆ, ಸಂಪರ್ಕ, ನಿರ್ವಹಣೆ ಮೊದಲಾದಂತೆ ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು.
ಲಭ್ಯವಿರುವ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಕೆ ಆಗುವಂತೆ ಮಾಡುವುದು.
ದೇಶೀಯ ಶಸ್ತ್ರಾಸ್ತ್ರಗಳ ಪ್ರಮಾಣ ಹೆಚ್ಚಾಗುವಂತೆ ಮಾಡುವುದು.
ಪಂಚವಾರ್ಷಿಕ ರಕ್ಷಣಾ ಬಂಡವಾಳ ಸ್ವಾಧೀನ ಯೋಜನೆ ಹಾಗೂ ವಾರ್ಷಿಕ ಖರೀದಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದು.
 ಅಂತಾರಾಷ್ಟ್ರೀಯ ರಕ್ಷಣಾ ಸಹಕಾರ ಯೋಜನೆಗಳನ್ನು ದೇಶಕ್ಕೆ ಅನುಕೂಲವಾಗುವಂತೆ ನೋಡಿಕೊಳ್ಳುವುದು ಇವರ ಜವಾಬ್ದಾರಿ.

Related posts

ಅಪ್ರಾಪ್ತೆ ಮೇಲೆ ಅತ್ಯಾಚಾರ: ಬೆಚ್ಚಿಬಿದ್ದ ಧಾರವಾಡ

eNewsLand Team

ಹು-ಧಾ ಮೇಯರ್, ಉಪಮೇಯರ್ ಯಾರು? ಇಲ್ಲಿದೆ ನೋಡಿ, ಅಂಚಟಗೇರಿ ಬಹುತೇಕ ಖಚಿತ

eNEWS LAND Team

ಧಾರವಾಡ ಗ್ರಾಮೀಣ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಮತ್ತು ಕಾನೂನು, ಸುವ್ಯವಸ್ಥೆ ಕಾಪಾಡಲು 2,785 ಪೊಲೀಸ್ ಸಿಬ್ಬಂದಿ: ಎಸ್ಪಿ ಲೋಕೇಶ ಜಗಲಾಸರ್

eNEWS LAND Team