eNews Land
ಸುದ್ದಿ

ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆಯ ಶಿರೂರ ಸಮೀಪದ ಮೇಲ್ಸೇತುವೆ ಕಾಮಗಾರಿ ಬಹುಬೇಗನೆ ಮುಗಿಸಿ ಎಂದ : ಕರವೇ

Listen to this article

ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆಯ ಶಿರೂರ ಸಮೀಪದ ಮೇಲ್ಸೇತುವೆ ಕಾಮಗಾರಿ ಬಹುಬೇಗನೆ ಮುಗಿಸಿ ಎಂದ : ಕರವೇ

ಕುಂದಗೋಳ : ತಾಲೂಕಿನ ಶಿರೂರ ಗ್ರಾಮದ ಹತ್ತಿರ ಕಳೆದ ನಾಲ್ಕು ತಿಂಗಳ ಹಿಂದೆ ರೈಲ್ವೆ ಸೇತುವೆ ಕುಸಿದು ಬಿದ್ದು ಸಾರಿಗೆ ಸಂಪರ್ಕ ಸ್ಥಗಿತಗೊಂಡಿದೆ . ಈ ಮಾರ್ಗದಲ್ಲಿರುವ ಲಕ್ಷ್ಮೇಶ್ವರ ಶಿರೂರ,ಸಂಶಿ , ಹೊಸಳ್ಳಿ , ಪಶುಪತಿಹಾಳ , ರಾಮಗೇರಿ , ಹಾಗೂ  , ಚಾಕಲಬ್ಬಿ , ಯರಿಬೂದಿಹಾಳ , ಹಿರೇಗುಂಜಳ , ಬಾರದ್ವಾಡ , ಚಿಕ್ಕಗುಂಜಳ ಈ ಎಲ್ಲ ಗ್ರಾಮಗಳ ಗ್ರಾಮಸ್ಥರು ಸಾರಿಗೆ ಸೌಕರ್ಯದಿಂದ ಸಂಪೂರ್ಣ ವಂಚಿತರಾಗಿದ್ದಾರೆ.ಜೊತೆಗೆ ಸದ್ಯದ ಸಮಯದಲ್ಲಿ ಶಾಲಾ ಕಾಲೇಜುಗಳು ಆರಂಭಗೊಂಡಿರುವದರಿಂದ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಲು ಬಹಳಷ್ಟು ತೊಂದರೆ ಪಡುತ್ತಿದ್ದಾರೆ. ಸದ್ಯ ಆರಂಭವಾಗಿರುವ ಸೇತುವೆ ಕಾಮಗಾರಿಯನ್ನು ಬಹುಬೇಗನೆ ಮುಕ್ತಾಯ ಮಾಡಬೇಕೆಂದು ಮನವಿ ಸಲ್ಲಿಸಿದರು. ಹಾಗೂ ಇದರ ಜೊತೆಗೆ ಇನ್ನುಳಿದ ಬೇಡಿಕೆಗಳನ್ನು ತಹಶೀಲ್ದಾರಗೆ ತಿಳಿಸಿದರು. ತಹಶೀಲ್ದಾರ ಕಚೇರಿಯಲ್ಲಿ ರೆಕಾರ್ಡ ಅಭಿಲೇಖಾಲಯದಲ್ಲಿ ಮತ್ತು , ಸಂಧ್ಯಾ ಸುರಕ್ಷೆ , ಇಂದಿರಾ ವೃದ್ದಾಪ್ಯ ವೇತನ , ಅಂಗವಿಕಲ ವೇತನ , ಮತ್ತಿತರ ಕೆಲಸಗಳು ಹಣ ಕೊಟ್ಟರೆ ಮಾತ್ರ ಕೆಲಸ ಆಗುತ್ತಿವೆ.ಕೂಡಲೇ ಇದನ್ನು ಸರಿಪಡಿಸುವದು, ಕಳೆದ ಜೂನ ಜುಲೈ ತಿಂಗಳಲ್ಲಿ ಅಕಾಲಿಕ ಮಳೆಯಿಂದ ಹಾನಿಗೀಡಾದ ಮನೆಗಳಿಗೆ ಹಾಗೂ ರೈತರ ಬೆಳೆಗಳು ಹಾನಿಯಾಗಿರುವದಕ್ಕೆ ಸೂಕ್ತ ಪರಿಹಾರ ಒಗಿಸುವದು, ಅಕಾಲಿಕ ಮಳೆಯಿಂದ ಕುಂದಗೋಳ ತಾಲೂಕಿನ ಅನೇಕ ರಸ್ತೆಗಳು ಸಂಪೂರ್ಣ ಹಾಳಾಗಿ ಹೋಗಿವೆ. ಅವುಗಳ ದುರಸ್ತಿ ಕಾರ್ಯ ಮಾಡಿಸುವದು, ತಹಶೀಲ್ದಾರ ಕಚೇರಿಯಲ್ಲಿರುವ ಭೂಮಾಪನ ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಹಣ ಕೊಡದೇ ಯಾವ ಕೆಲಸಗಳನ್ನು ಅಲ್ಲಿನ ಸಿಬ್ಬಂದಿಗಳು ಮಾಡುವದಿಲ್ಲ. ಇದಕ್ಕೆ ಕಡಿವಾಣ ಹಾಕುವದು, ಕರವೇ ಸಂಘಟನೆಯ ಎಲ್ಲ ಬೇಡಿಕೆಗಳನ್ನು 15 ದಿನದೊಳಗಾಗಿ ಈಡೇರಿಸಲು ಅಗತ್ಯ ಕ್ರಮ ಕೈಗೊಳ್ಳದಿದ್ದರೆ ನವೆಂಬರ್ 8 ರಂದು ಮುಂಜಾನೆ 11 ರಿಂದ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹವನ್ನು ಮಾಡುವದಾಗಿ ತಹಶಿಲ್ದಾರ್ ಅಶೋಕ ಶಿಗ್ಗಾವಿ ಅವರಿಗೆ ಮನವಿ ಸಲ್ಲಿಸಿದರು. ಜೊತೆಗೆ ಈ ಮೂಲಕ ಧಾರವಾಡ ಜಿಲ್ಲಾಧಿಕಾರಿಗೆ ಮನವಿ ರವಾನಿಸಿದರು. ಈ ವೇಳೆ ರವಿ ಶಿರಸಂಗಿ, ಅಡಿವೆಪ್ಪ  ಹೆಬಸೂರ, ಮಂಜುನಾಥ ಹಾದಿಮನಿ, ಲಿಂಗರಾಜ ಕುಬಿಹಾಳ, ಶೇಕಣ್ಣ ಸಾದರ, ರಾಜು ಕಟಗಿ, ಅಡಿವೆಪ್ಪ ತಳವಾರ, ಅರವಿಂದ ಕುಡವಕ್ಕಲ,  ರಮೇಶ ಮಾನಪ್ಪನವರ, ಶ್ರೀಶೈಲ ಮೆಣಸಿನಕಾಯಿ, ರಮೇಶ ಅತ್ತಿಗೆರಿ, ಶಿವಾನಂದ ಪೂಜಾರ, ಶಂಕರಗೌಡ ದೊಡ್ಡಮನಿ, ಫಕ್ಕೀರಪ್ಪ ಪೂಜಾರ, ಶಂಕ್ರಪ್ಪ ಸುತಾರ, ಚೈತ್ರಾ ಅಂಗಡಿ, ಚನ್ನವೀರಪ್ಪ ಅಂಗಡಿ, ನಾಗರಾಜ ತಾಂಬ್ರಗುಂಡಿ, ಶಾರದಾ ಬಡಿಗೇರ ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು ಎಂದು ಕರವೇ ತಾಲೂಕಾಧ್ಯಕ್ಷ ಕಲ್ಲಪ್ಪ ಹರಕುಣಿ ಪ್ರಕಟನೆಗೆ ತಿಳಿಸಿದರು  .

 

Related posts

ರೈಲುಗಳ ಸೇವೆಯಲ್ಲಿ ಕೆಲವು ಬದಲಾವಣೆ

eNEWS LAND Team

ಕೃಷಿ ವಿವಿ ವಿದೇಶಿ ವಿದ್ಯಾರ್ಥಿಗಳೊಂದಿಗೆ ರಾಜ್ಯಪಾಲರ ಸಂವಾದ

eNEWS LAND Team

ಹುಬ್ಬಳ್ಳಿಗೆ ಮಂಕಿ ಕ್ಯಾಪ್ ಹಾಕೊಂಡು ರಾಬರಿಗೆ ಬಂದವ್ ಅಂದರ್!!! ಪಿನ್ ಟು ಪಿನ್ ಡಿಟೈಲ್ ಇಲ್ಲಿದೆ

eNewsLand Team