27 C
Hubli
ಮೇ 25, 2024
eNews Land
ಸುದ್ದಿ

ಭಿಕ್ಷಕರಲ್ಲೂ ಸಂಘಟನೆ ಶಕ್ತಿ ಇದೆ, ಸಂಘಟನೆ ಅನಿವಾರ್ಯ: ಬಸವರಾಜ ಹೊರಟ್ಟಿ

ಇಎನ್ಎಲ್ ಹುಬ್ಬಳ್ಳಿ: ನಾನು ಈ ಮಟ್ಟಕ್ಕೆ ತಲುಪಲು ಸಂಘಟನಾ ಶಕ್ತಿಯೇ ಕಾರಣ ಎಂದು ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ ಹೇಳಿದರು.                 

ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲ್‌ನಲ್ಲಿ ಜರುಗಿದ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿoದ ಪ್ರತಿಭೋತ್ಸವ, ಸಾಧಕರಿಗೆ ಸನ್ಮಾನ ಹಾಗೂ ಫಲಾನುಭವಿಗಳಿಗೆ ಸಹಾಯಧನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನಾನು ಈ ಮಟ್ಟಕ್ಕೆ ಬೆಳೆಯಲು ಸಂಘಟನಾ ಶಕ್ತಿಯೇ ಕಾರಣ, ಭಿಕ್ಷಕರಲ್ಲೂ ಸಂಘಟನೆ ಶಕ್ತಿ ಇದೆ, ಅದರಲ್ಲಿ ಏನು ತಪ್ಪಿಲ್ಲ, ಬ್ರಾಹ್ಮಣರಲ್ಲಿಯೂ ಅತೀ ಕಡು ಬಡವರಿದ್ದಾರೆ, ಅಂತವರನ್ನು ಗುರುತಿಸಿ ಕೆಳಗಿದ್ದವರನ್ನು ಮೇಲೆತ್ತಿದಾಗಲೇ ಸಂಘಟನೆಗೆ ಶಕ್ತಿ ಬರುತ್ತದೆ, ತಾವು ನನ್ನನ್ನ ಇಲ್ಲಿ ಕರೆಸಿದ್ದು ಮನಸ್ಸಿಗೆ ಸಂತೋಷ ಹಾಗೂ ನೆಮ್ಮದಿ ಸಿಕ್ಕಿದೆ, ಭವಿಷ್ಯದಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ ಎಂದರು. ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಚ್.ಎನ್. ಸಚ್ಚಿದಾನಂದ ಮೂರ್ತಿ ಮಾತನಾಡಿ ಸರ್ಕಾರದ ಸವಲತ್ತುಗಳು ಎಲ್ಲರಿಗೂ ಸಿಗಬೇಕು, ನಿಗಮದಿಂದ ಅನೇಕ ಯೋಜನೆಗಳು ಇವೆ, ನಾವೆಲ್ಲರೂ ಕೇವಲ ಹುಟ್ಟಿದ ಜಾತಿಗೆ ಸೀಮಿತವಾಗಿರದೇ ಸಮಾಜದ ಒಂದು ಭಾಗವಾಗಿ ಬೆಳೆದು ಸಧೃಡ ದೇಶವನ್ನು ಕಟ್ಟೋಣ ಎಂದರು. ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ ನಾವು ಕೇವಲ ಮನೆಯ ಮಕ್ಕಳಾಗದೇ ಭಾರತ ಮಾತೆಯ ಉತ್ತಮ ಪ್ರಜೆಗಳಾಗಬೇಕು ಎಂದರು.

   ಪ್ರಾಸ್ತಾವಿಕವಾಗಿ ಮಾತನಾಡಿದ ವಸಂತ ನಾಡಜೋಶಿ  ನಮ್ಮ ನಿಗಮದಿಂದ ಕೃಷಿ, ಶಿಕ್ಷಣ, ಸಂಗೀತ, ಹಾಗೂ ಇನ್ನೂ ಅನೇಕ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸುತ್ತಿದ್ದೇವೆ, ಈ ನಿಗಮದ ಅಭಿವೃದ್ಧಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಹಾಗೂ ವಿಧಾನ ಪರಿಷತ ಸದಸ್ಯ ಬಸವರಾಜ ಹೊರಟ್ಟಿಯವರ ಸತತ ಸಹಕಾರದಿಂದ ಈ ಕಾರ್ಯಕ್ರಮ ನಡೆಯುತ್ತಿದೆ ಎಂದರು. ಶಾಸಕ ಅರವಿಂದ ಬೆಲ್ಲದ ಮಾತನಾಡಿ ಅಚ್ಚುಕಟ್ಟಾಗಿ ಜೀವನ ನಡೆಸುವ ಕಲೆ ಬ್ರಾಹ್ಮಣರಲ್ಲಿ ಇದೆ ಎಂದರು. 
ಈ ಸಂದರ್ಭದಲ್ಲಿ ಗೋವಿಂದ ಜೋಶಿ, ಎಚ್.ಎನ್. ನಂದಕುಮಾರ, ರಾಜಾ ದೇಸಾಯಿ, ಜಯತೀರ್ಥ ಆಚಾರ್ಯ ಹುಂಡೇಕರ, ಜಿ.ಆರ.ಭಟ್, ವಸಂತ ಗುರುನಾಥ ನಾಡಜೋಶಿ, ವತ್ಸಲ ನಾಗೇಶ, ಎಲ್,ಎ,ಓಕ್, ಎನ್.ಎಚ್.ನಿಡಗುಂದಿ, ಕೇಶವ ಬಾದನಟ್ಟಿ, ಶಂಕರ ಪಾಟೀಲ, ಮನೋಜ ದೇಸಾಯಿ, ಡಾ.ಬಿ.ವಿ. ಪಾಟೀಲ, ನರಸಿಂಹ ಕೊತ್ವಾಲ್, ಸ್ವಾಗತ ಸಮಿತಿಯ ನಾರಾಯಣ ಪಾಂಡುರoಗ, ಡಿ.ಪಿ.ಪಾಟೀಲ, ಸತೀಶ ಮುರೂರ ಹಾಗೂ ಸಾವಿರಕ್ಕೂ ಹೆಚ್ಚು ವಿಪ್ರರು ಆಗಮಿಸಿದ್ದರು.

Related posts

ಹಿರಿಯರ ಸಮಸ್ಯೆ ಪರಿಹಾರಕ್ಕೆ “ಅನ್ವಯಾ” ಚಾಯ್ ಪೇ ಚರ್ಚಾ

eNEWS LAND Team

ಅಣ್ಣಿಗೇರಿಯಲ್ಲಿ ಸಂಭ್ರಮದ ಪೌರಕಾರ್ಮಿಕರ ದಿನಾಚರಣೆ

eNEWS LAND Team

ಗುಡಗೇರಿಗೆ ಭೇಟಿ ನೀಡಿದ ಶಾಸಕಿ ಕುಸುಮಾವತಿ

eNEWS LAND Team