25.5 C
Hubli
ಏಪ್ರಿಲ್ 27, 2024
eNews Land
ಸುದ್ದಿ

ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಪೂರ್ವ ಕ್ಷೇತ್ರದ ಪ್ರಣಾಳಿಕೆಯ ಬಿಡುಗಡೆ: ಡಾ.ಕ್ರಾಂತಿಕಿರಣ

ಇದನ್ನು ಓದಿ: ಮತದಾನ ಸಿದ್ಧತೆ ಪೂರ್ಣ ; ಒಟ್ಟು 15,23,080 ಮತದಾರರು; 1,642 ಮತಗಟ್ಟೆಗಳು, ಮತಗಟ್ಟೆಗಳಿಗೆ 8,319 ಸಿಬ್ಬಂದಿಗಳ ನಿಯೋಜನೆ; ಶಾಂತಿಯುತ ಮತದಾನಕ್ಕೆ ಅಗತ್ಯ ಕ್ರಮ ವಹಿಸಲಾಗಿದೆ: ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ
ಇಎನ್ಎಲ್ ಹುಬ್ಬಳ್ಳಿ: ಪೂರ್ವ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕ್ರಾಂತಿಕಿರಣರವರು ಹುಬ್ಬಳ್ಳಿಯ ಗ್ಯಾಲಕ್ಸಿ ಮಾಲ್ ಜೆಸಿ ನಗರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಪೂರ್ವ ವಿಧಾನಸಭೆ ಕ್ಷೇತ್ರದ ಪ್ರಣಾಳಿಕೆಯ ಬಿಡುಗಡೆಗೊಳಿಸಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಇದನ್ನು ಓದಿ:ಭಜರಂಗದಳ ಮತ್ತು ಪಿಎಫ್ಆಯ್ ಒಂದೇ ತಕ್ಕಡಿಯಲ್ಲಿ ತೂಗಿದ ಕಾಂಗ್ರೆಸ್ ಮುಖಂಡ ಯಾರು?
ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದಲ್ಲಿ ಬಹಳಷ್ಟು ಸಮಸ್ಯೆಗಳಿವೆ ಅದಕ್ಕಾಗಿ ನಾವು ಪರಿಹಾರ ಕಂಡುಕೊಳ್ಳಬೇಕಿದೆ. ಅದಕ್ಕಾಗಿ ನಾವು ಪ್ರಣಾಳಿಕೆಯಲ್ಲಿ ಆ ಸಮಸ್ಯೆಗಳಿಗೆ ಒತ್ತು ನೀಡಿದ್ದೆವೆ. ನೀರಿನ ಸಮಸ್ಯೆಗೆ ದಿನದ ಇಪ್ಪತ್ತನಾಲ್ಕು ತಾಸು ನೀರಿನ ವ್ಯವಸ್ಥೆ, ಒಳ ಚರಂಡಿ ನಾಲೆಗಳ ವ್ಯವಸ್ಥೆ, ಎರಡು ಬೂತಗಳ ನಡುವೆ ಒಂದು ಸುಲಭ ಶೌಚಾಲಯ, ಸಿಟಿ ಬಸ್ ಗಳ ವ್ಯವಸ್ಥೆ, ಬಡವರಿಗಾಗಿ ಒಂದು ಸಾವಿರ ಮನೆಗಳ ನಿರ್ಮಾಣ, ಈ ಕ್ಷೇತ್ರದ ಮಹಿಳಾ ಮತದಾರರ ಸಂಖ್ಯೆ ಹೆಚಾಗಿದ್ದು, ಅವರ ಸುರಕ್ಷತೆಗಾಗಿ ಒಂದು ಪೋಲಿಸ್ ಠಾಣೆ ಸ್ಥಾಪನೆ ಮಾಡುವುದು ಹಾಗೂ ಸಿ.ಸಿ ಟಿವಿಗಳ ಅಳವಡಿಕೆ, ಕಸ ಮುಕ್ತ ಪ್ರದೇಶ ಮಾಡಲು ಕಸ ವಿಲೇವಾರಿ ವಾಹನಗಳ ಸಂಖ್ಯೆ ಹೆಚ್ಚಿಸುವುದು, ಗಾರ್ಡನ್ ಹಾಗೂ ಮಕ್ಕಳಿಗಾಗಿ ಆಟದ ಮೈದಾನ ನಿರ್ಮಿಸುವುದು, ಉತ್ತಮ ಆರೋಗ್ಯಕ್ಕಾಗಿ ಆರೋಗ್ಯ ಕೇಂದ್ರ, ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ, ಟ್ರೊಮಾ ಕೇಂದ್ರ, ಎರಡು ಪ್ರಸೂತಿ ಕೇಂದ್ರಗಳ ಸ್ಥಾಪನೆ, ಇನ್ ಫರ್ಟಿಲಿಟಿ ಕೇಂದ್ರ, ಈಗಿರುವ ಆಸ್ಪತ್ರೆಗಳನ್ನು ಅಭಿವೃಧ್ದಿ ಪಡಿಸಿ ನಂತರ ಆಧುನಿಕರಣಗೊಳಿಸುವುದು, ಮೋಬೈಲ್ ಕ್ಲಿನಿಕಿನ ಸಿಬ್ಬಂದಿಗಳನ್ನು ಹೆಚ್ಚಿಸುವುದು, ಮಾನಸಿಕ ಆರೋಗ್ಯ ಸುಧಾರಣೆಗೆ ಜನಾಭಿವೃದ್ಧಿ ಕೇಂದ್ರಗಳ ಸ್ಥಾಪನೆ.
ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮಾಡುವುದು, ಪಿ.ಯು.ಸಿ ಸರ್ಕಾರಿ ಕಾಲೇಜಿನ ಸ್ಥಾಪನೆ, ಐ.ಟಿ.ಐ ತರಬೇತಿ ಕೇಂದ್ರ ಸ್ಥಾಪನೆ, ಡಿಗ್ರಿ ಮಾಹಾವಿದ್ಯಾಲಯದ ಸ್ಥಾಪನೆ, ಈಗಿರುವ ಸರ್ಕಾರಿ ಶಾಲೆಗಳನ್ನು ಸುಧಾರಿಸುವುದು, ಬಡ ವಿದ್ಯಾರ್ಥಿಗಳಿಗಾಗಿ ಸಿ.ಇ.ಟಿ, ನೀಟ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಕಡಿಮೆ ದರದಲ್ಲಿ ಕೋಚಿಂಗ ಕೇಂದ್ರ ಸ್ಥಾಪನೆ ಮಾಡುವುದು, ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆ ಮಾಡುವುದು.
ಔದ್ಯೋಗಿಕವಾಗಿ ಮುನ್ನುಗ್ಗಲು ಹಲವಾರು ಯೋಜನೆಗಳನ್ನು ತೆಗೆದುಕೋಳ್ಳುವುದು. ಅದಕ್ಕಾಗಿ ಕಬ್ಬು ಬೆಳೆಗಾರರಿಗಾಗಿ ಸಕ್ಕರೆ ಕಾರ್ಖಾನೆ, ಹೂವು ಬೆಳೆಗಳನ್ನು ಹೆಚ್ಚಿಸುವುದು ಹಾಗೂ ರಫ್ತಿಗೆ ಅನುವು ಮಾಡಿಕೋಡುವುದು, ಸಾವಯವ ಕೃಷಿಗೆ ಒತ್ತು ನೀಡುವುದು ಹಾಗೂ ಸಿರಿಧಾನ್ಯ ಬೆಳೆಯಲು ಉತ್ತೇಜಿಸುವುದು. ಸೋಲಾರ ಪಾರ್ಕ, ಜವಳಿ ಪಾರ್ಕ ನಿರ್ಮಿಸಿ ಯುವಕರಿಗೆ ಉದ್ಯೋಗ ಅವಕಾಶ ಹೆಚ್ಚಿಸುವುದು. ಹೋಂ ಫುಡ್ ಇಂಡಸ್ಟ್ರಿಗೆ, ಆಟೋ ಮೋಬೈಲ್ ಇಂಡಸ್ಟ್ರಿ ಅಭಿವೃಧಿ ಮಾಡುವುದು. ಇದರಿಂದಾಗಿ ಜನರ ಆದಾಯ ಹೆಚ್ಚಿಸಿ ಅದರಿಂದ ಜೀವನ ಗುಣಮಟ್ಟ ಸುಧಾರಿಸುವುದು. ಇದು ನಮ್ಮ ಪ್ರಣಾಳಿಕೆಗಳಿವೆ ಎಂದು ತಿಳಿಸಿದರು.

ಇದನ್ನು ಓದಿ:Reels (ವಿಡಿಯೋ) ಮಾಡಲು ಸ್ಪರ್ಧೆ!! ಇಲ್ಲಿದೆ ನೋಡಿ
ಈ ಸಂದರ್ಭದಲ್ಲಿ ಪ್ರಭು ನವಲಗುಂದಮಠ, ರಂಗಾ ಬದ್ದಿ, ಅಶೋಕ ಕಾಟವೆ, ಶಿವು ಮೆಣಸಿಕಾಯಿ, ಯಮನೂರಪ್ಪ ಜಾದವ, ಬಸವರಾಜ ಅಮ್ಮಿನಬಾವಿ, ಸತೀಶ ಶೇರವಾಡಕರ, ಲಕ್ಷ್ಮೀಕಾಂತ ಘೋಡಕೆ, ಗುರು ಪಾಟಿಲ, ಮಂಜುನಾಥ ನಾಗನಗೌಡ್ರ, ಭಾರತಿ ರವೀಂದ್ರ ಏಳ್ಕಾನ ರವರು ಉಪಸ್ಥಿತರಿದ್ದರು.
ಇದನ್ನು ಓದಿ:ಭಜರಂಗದಳ ಮತ್ತು ಪಿಎಫ್ಆಯ್ ಒಂದೇ ತಕ್ಕಡಿಯಲ್ಲಿ ತೂಗಿದ ಕಾಂಗ್ರೆಸ್ ಮುಖಂಡ ಯಾರು?

Related posts

ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಆಡಳಿತಕ್ಕೆ ತರಲು ಕರೆ: ಸಚಿವ ಮುನೇನಕೊಪ್ಪ

eNEWS LAND Team

ಅಣ್ಣಿಗೇರಿಲಿ ಅನ್ನದಾತನ ಆತ್ಮಹತ್ಯೆ; ಸಾಯುವಂಥದ್ದು ಏನಾಗಿತ್ತು?

eNewsLand Team

ಎ.ಟಿ.ಎಮ್ ಹಣ ನಿರಾಕರಿಸಿದ ಹೆಚ್.ಡಿ.ಎಫ್.ಸಿ.ಬ್ಯಾಂಕಿಗೆ ರೂ.2 ಲಕ್ಷದ 24 ಸಾವಿರ ರೂ.ಗಳ ಭಾರಿದಂಡ

eNEWS LAND Team