23.4 C
Hubli
ಮಾರ್ಚ್ 24, 2023
eNews Land
ಸುದ್ದಿ

ಒಂದು ವರ್ಷದೊಳಗೆ ಬೆಳಗಾವಿ ಬಸ್ ನಿಲ್ದಾಣ ಕಾಮಗಾರಿ ಪೂರ್ಣ: ಸಚಿವ ಗೋವಿಂದ ಕಾರಜೋಳ

Listen to this article

ಇಎನ್ಎಲ್ ಬೆಳಗಾವಿ ಸುವರ್ಣ ಸೌಧ:

ಮೂವತ್ತು ಕೋಟಿ ರೂ. ವೆಚ್ಚದಲ್ಲಿ ಬೆಳಗಾವಿ ಬಸ್ ನಿಲ್ದಾಣ ಕಾಮಗಾರಿಯನ್ನು ಪ್ರಾರಂಭಿಸಲಾಗಿದ್ದು, ಕೋವಿಡ್-19ರ ಲಾಕ್‍ಡೌನ್ ಕಾರಣದಿಂದಾಗಿ ಕಾಮಗಾರಿ ವಿಳಂಭವಾಗಿದೆ. ಎರಡನೇ ಅಲೆಯ ನಂತರ ಕಾಮಗಾರಿ ಚುರುಕುಗೊಂಡಿದೆ. ಶೇ. 20 ರಷ್ಟು ಕೆಲಸಗಳು ಪೂರ್ಣಗೊಂಡಿವೆ. ಇನ್ನೂ ಒಂದು ವರ್ಷದೊಳಗೆ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ವಿಧಾನ ಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಇಂದು ಶಾಸಕ ಅನೀಲ ಬೆನಕೆ ಅವರ ಪ್ರಶ್ನೆಗೆ ಸಾರಿಗೆ ಸಚಿವರ ಪರವಾಗಿ ಉತ್ತರಿಸಿ ಮಾತನಾಡಿದರು. ಮೂವತ್ತು ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ನಗರ ಭೂ ಸಾರಿಗೆ ನಿರ್ದೇಶನಾಲಯ (ಡಲ್ಟ್) ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಆಂತರಿಕ ಸಂಪನ್ಮೂಲದಿಂದ ತಲಾ ಶೇ.50 ರಷ್ಟು ಹಣಕಾಸು ಕ್ರೋಢಿಕರಣ ಮಾಡಲಾಗಿದೆ. ಮಳೆಗಾಲ ಹೊರತುಪಡಿಸಿ ಇಪ್ಪತ್ತನಾಲ್ಕು ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕರಾರು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಕಾಮಗಾರಿಯನ್ನು ಸಧ್ಯವಿರುವ ಬಸ್ ನಿಲ್ದಾಣದ ಜಾಗೆಯಲ್ಲಿಯೇ ಕೈಗೊಳ್ಳಲಾಗಿದೆ. ಹಂತ ಹಂತವಾಗಿ ಬಸ್‍ಗಳ ಕಾರ್ಯಾಚರಣೆ ಹಾಗೂ ಸಾರ್ವಜನಿಕ ಪ್ರಯಾಣಿಕರಿಗೆ ತೊಂದರೆಯಾಗದ ರೀತಿಯಲ್ಲಿ ಸುರಕ್ಷಿತ ಕ್ರಮಗಳನ್ನು ಅಳವಡಿಸಿಕೊಂಡು ಕಾಮಗಾರಿ ನಡೆಸುತ್ತಿರುವದರಿಂದ ವಿಳಂಭವಾಗುತ್ತಿದೆ. ಜೊತೆಗೆ ನಗರ ಸಾರಿಗೆ ಬಸ್ ನಿಲ್ದಾಣವನ್ನು ಸ್ಮಾರ್ಟ ಸಿಟಿ ಯೋಜನೆಯಡಿ ಹೊಸದಾಗಿ ನಿರ್ಮಿಸುತ್ತಿರುವದರಿಂದ ಅಲ್ಲಿನ ಬಸ್‍ಗಳನ್ನು ಕೂಡ ಕೇಂದ್ರ ಬಸ್ ನಿಲ್ದಾಣದಿಂದಲೇ ಕಾರ್ಯಾಚರಣೆ ಮಾಡಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಅಕಾಲಿಕ ಮಳೆ, ಕೋವಿಡ್-19 ರ ಕಾರಣದಿಂದ ಕಾಮಗಾರಿ ವಿಳಂಭವಾಗಿದೆ. ಗುತ್ತಿಗೆದಾರರಿಗೆ ಹಲವಾರು ಬಾರಿ ನೋಟಿಸ್ ನೀಡಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಒಂದು ವರ್ಷದ ಅವಧಿಯೊಳಗೆ ಪೂರ್ಣಗೊಳಿಸಲಾಗುವದು ಎಂದು ತಿಳಿಸಿದರು.

Related posts

ಮಾನವೀಯತೆ ಮರೆತು ಲಂಚ ಕೇಳಿದ್ದವರು ಎಸಿಬಿ ಕೆಡ್ಡಾಕ್ಕೆ ಬಿದ್ದರು! ಇಲ್ಲಿದೆ ಹುಬ್ಬಳ್ಳಿ ಭ್ರಷ್ಟಿಗಳ ಕಥೆ

eNewsLand Team

ದಿ.ಶಿವಳ್ಳಿ ಆದರ್ಶ ರಾಜಕಾರಣಿ, ಅಧಿಕಾರ ಇರಲಿ, ಇಲ್ಲದಿರಲಿ, ಜನರ ಕಷ್ಟಗಳಿಗೆ ಸ್ಪಂದಿಸುವ ಜನನಾಯಕ: ಮಾಜಿ ಸಿಎಂ ಸಿದ್ರಾಮಯ್ಯ

eNEWS LAND Team

ಇನ್ಸ್ಟಾಗ್ರಾಂ ಬಳಸಿ ಮದುವೆ ಮುರಿಯಲು ಮುಂದಾದ ನಾಲಾಯಕ್!

eNewsLand Team