27 C
Hubli
ಫೆಬ್ರವರಿ 27, 2024
eNews Land
ಸಣ್ಣ ಸುದ್ದಿ ಸುದ್ದಿ

ಆತ್ಮಾಭಿಮಾನದಿಂದ ನನಗೆ ಮತ ನೀಡಿ: ಬಸವರಾಜ ಹೊರಟ್ಟಿ

ಇಎನ್ಎಲ್ ಕಲಘಟಗಿ: ಸುಧೀರ್ಘವಾದ 42 ವರ್ಷಗಳಿಂದ ನನ್ನ ಬೆಂಬಲಿಸುತ್ತಾ ಬಂದಿದ್ದೀರಿ. ನನ್ನ ಪಾರದರ್ಶಕವಾದ ಸೇವೆಯನ್ನು ಸ್ಮರಿಸಿ, ಬರುವ ಜೂ.13 ರಂದು ನಡೆಯುವ ಚುನಾವಣೆಗೆ ಆತ್ಮಾಭಿಮಾನದಿಂದ ನನಗೆ ಮತ ನೀಡಿರಿ ಎಂದು ಮಾಜಿ ಸಭಾಪತಿಗಳಾದ ಬಸವರಾಜ ಹೊರಟ್ಟಿ ಹೇಳಿದರು.

ಇದನ್ನು ಓದಿ:ಹುಬ್ಬಳ್ಳಿ ಮಹಿಳೆ ಮಹಾರಾಷ್ಟ್ರದಲ್ಲಿ ಕಿಡ್ನಾಪ್: ಹೆಂಡ್ತಿ ಸುರಕ್ಷತೆಗೆ ಓದಲೇಬೇಕಾದ ಸುದ್ದಿ

ಸ್ಥಳೀಯ ಜನತಾ ಹೆಣ್ಣುಮಕ್ಕಳ ಶಾಲೆಯ ಆವರಣದಲ್ಲಿ ಶಿಕ್ಷಕರೊಂದಿಗೆ ಸಮಾಲೋಚನೆ ಸಭೆ ಕುರಿತು ಮಾತನಾಡಿ ಕರ್ನಾಟಕ ಪಶ್ಚಿಮ ಶಿಕ್ಷಕರ ವಿಧಾನ ಪರಿಷತ್ ಕ್ಷೇತ್ರಕ್ಕೆ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಎಲ್ಲಿಯವರೆಗೆ ಶಿಕ್ಷಕರ ಧ್ವನಿಯಾಗಿರುತ್ತೇನೋ ಅಲ್ಲಿವರೆಗೂ ಒಂದು ರೂ. ನಾನು ಪಡೆಯುವುದಿಲ್ಲ. “ನನ್ನ ಹತ್ತಿರ ಸಹಾಯ ಕೇಳಲು ಬಂದವರಿಗೆ ನಾನು ಇಂದೇ ಸಹಾಯ ಮಾಡುವೆ. ಏಕೆಂದರೆ ನಾಳೆ ನನಗೆ ಸಹಾಯ ಮಾಡುವ ಅವಕಾಶ ಸಿಗಲಿಕ್ಕಿಲ್ಲ. ಎಂಬ ತತ್ವವನ್ನು ನನ್ನ ಜೀವನದ ಆದರ್ಶವನ್ನಾಗಿ ಮಾಡಿಕೊಂಡು ಸುಧೀರ್ಘವಾಗಿ ಜಾತಿ, ಮತ, ಪಕ್ಷ, ಬೇಧ ಮರೆತು ಸೇವೆ ಸಲ್ಲಿಸಿದ್ದೇನೆ. ನನ್ನ ಅಧಿಕಾರದ ಅವಧಿಯಲ್ಲಿ ಲಾಟರಿ ಬಂದ್ ಮಾಡಿಸಿದ್ದೇನೆ, ಇದರಿಂದ ಎಷ್ಟೋ ಕುಟುಂಬಗಳು ಈ ಸಂಕೋಲೆಯಿoದ ಬಿಡುಗಡೆ ಹೊಂದಿ ಅಭಿವೃದ್ಧಿಯಾದವು. ಪ್ರಾಮಾಣಿಕ ಸೇವೆಯೇ ನನಗೆ ಶಿಕ್ಷಕರಿಂದ ದೊರೆತ ಶ್ರೀರಕ್ಷೆ ಎಂದರು.

ಇದನ್ನು ಓದಿ:ವಿವಿಧ ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ

ಪ್ರಾಸ್ಥಾವಿಕವಾಗಿ ಮಾತನಾಡಿದ ಶ್ರೀಧರ ಪಾಟೀಲ ಕುಲಕರ್ಣಿ ಹೊರಟ್ಟಿಯವರಂತಹ ದಿಟ್ಟ ವ್ಯಕ್ತಿತ್ವವುಳ್ಳ ವ್ಯಕ್ತಿ ಸದನದಲ್ಲಿ ಶಿಕ್ಷಕರಿಗೆ ಬೇಕೆಬೇಕು, ಇವರೊಬ್ಬ ಅಚ್ಚಳಿಯದ ನಾಯಕ, ನಾವೆಲ್ಲರೂ ಇವರನ್ನು ಬೆಂಬಲಿಸಿ ಹೆಚ್ಚಿನ ಮತಗಳಿಂದ ಆಯ್ಕೆ ಮಾಡೋಣ ಎಂದರು. ಆಯ್.ಸಿ.ಗೋಕುಲ ಮಾತನಾಡಿ ಹೊರಟ್ಟಿ ಅವರು ಇದ್ದರೆ ಆನೆಬಲ ಇದ್ದಂತೆ, ಅವರ ಆಯ್ಕೆ ಖಚಿತವಾಗಿದ್ದು ವಿಜಯೋತ್ಸವಕ್ಕೂ ನಾವು ಸಿದ್ದವಾಗಿದ್ದೇವೆ ಎಂದರು. ಬಸವರಾಜ ಕುಂದಗೋಳಮಠ ಮಾತನಾಡಿ ನಾವೆಲ್ಲರೂ ಹೊರಟ್ಟಿ ಅವರನ್ನು ಬೆಂಬಲಿಸಿ ವಿಶ್ವ ದಾಖಲೆ ನಿರ್ಮಿಸೋಣ ಎಂದರು.
ಈ ಸಂದರ್ಭದಲ್ಲಿ ವಿ.ಎಸ್. ಪಾಟೀಲ, ಪ್ರತಾಪ ರೆಡ್ಡಿ, ಮಾತನಾಡಿದರು. ರಾಜಣ್ಣ ಕೊರವಿ, ಸದಾನಂದ ಚಿಂತಾಮಣಿ, ಬಸವರಾಜ ಕರಡಿಕೊಪ್ಪ, ಬಸವರಾಜ ಶೆರೇವಾಡ, ಪ್ರಕಾಶ ಕುಂಬಾರ ಮುಂತಾದವರು ಇದ್ದರು.

Related posts

ಅಣ್ಣಿಗೇರಿ ತಾಲೂಕಿನ  ಸ್ವೀಪ್ ಸಮಿತಿ ಸಭೆ

eNewsLand Team

ಅಣ್ಣಿಗೇರಿ ಪುರಸಭೆ; ಬಿರುಸಿನ ಮತದಾನ

eNewsLand Team

ತೊಗರಿ ಬೆಳೆಯಲ್ಲಿ ಉತ್ತಮ ಇಳುವರಿಗೆ ಏನು ಮಾಡಬೇಕು?

eNEWS LAND Team