34 C
Hubli
ಮಾರ್ಚ್ 23, 2023
eNews Land
ಸಿನೆಮಾ ಸುದ್ದಿ

ಹುಬ್ಬಳ್ಳಿಯಲ್ಲಿ ಬಡವ ರಾಸ್ಕಲ್ ಹವಾ!!

Listen to this article

ಇಎನ್ಎಲ್ ಧಾರವಾಡ:

ಚಲನಚಿತ್ರ ನಟ ಡಾಲಿ ಖ್ಯಾತಿ ಧನಂಜಯ ಅವರು ಸೋಮವಾರ ನಗರದ ಸುಧಾ ಚಿತ್ರಮಂದಿರಕ್ಕೆ ಭೇಟಿ ನೀಡಿ ತಮ್ಮ ಬಡವ ರಾಸ್ಕಲ್ ಸಿನಿಮಾವನ್ನು ಅಭಿಮಾನಿಗಳೊಂದಿಗೆ ವೀಕ್ಷಿಸಿದರು.

ಡಾಲಿ ಧನಂಜಯ ಅವರು ಬರುವ ವಿಷಯ ತಿಳಿದ ನೂರಾರು ಅಭಿಮಾನಿಗಳು ಚಿತ್ರಮಂದಿರ ಎದುರಿಗೆ ಸೇರಿದ್ದರು. ಬಂದ ನಂತರ ವಾದ್ಯಮೇಳದ ಮತ್ತು ಉತ್ತರ ಕರ್ನಾಟಕದ ಜನಪದ ಕಲಾವಿದರಿಂದ ಅವರನ್ನು ಭರ್ಜರಿಯಾಗಿ ಸ್ವಾಗತಿಸಲಾಯಿತು. ಅಭಿಮಾನಿಗಳು ಶಾಲು ಮತ್ತು ರೂಮಾಲ ಹಾಕಿ ಸನ್ಮಾನಿಸಿದರು.


ನಂತರ ಚಿತ್ರಮಂದಿರ ಪ್ರವೇಶ ಮಾಡಿದ ಅವರು ಕೆಲ ಹೊತ್ತು ಸಿನಿಮಾ ನೋಡಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯಾದ್ಯಂತ ಬಡವ ರಾಸ್ಕಲ್ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ಬರುತ್ತಿವೆ. ಅಭಿಮಾನಿಗಳು ನಿಜವಾಗಲೂ ದೇವರ ಸಮಾನ ಅವರಿಂದ ನಾವು ಇರೋದ ನಿಜವಾಗೂ ಸಾಕಷ್ಟು ಸಂಖ್ಯೆಯಲ್ಲಿ ಜನ ಚಿತ್ರಮಂದಿರಕ್ಕೆ ಬಂದು ನೋಡುತ್ತಿರುವುದು ಖುಷಿಯ ವಿಚಾರ. ಬಡವ ರಾಸ್ಕಲ್ ಎಲ್ಲರಿಗೂ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಎಂದು ಸೇರಿದ್ದ ಅಭಿಮಾನಿಗಳ ಧನ್ಯವಾದ ತಿಳಿಸುವ ಮೂಲಕ ಹರ್ಷ ವ್ಯಕ್ತಪಡಿಸಿದರು. ಅಭಿಮಾನಿಗಳು ಅವರೊಂದಿಗೆ ಸೆಲಿ ತೆಗೆಸಿಕೊಳ್ಳು ಮುಗಿಬಿದ್ದರು.
ಈ ಸಂದರ್ಭದಲ್ಲಿ ಶಿವಾನಂದ ಮುತ್ತಣ್ಣವರ, ಅಯ್ಯಪ್ಪ ಶಿರಕೋಳ, ಚಿತ್ರಮಂದಿರದ ಮ್ಯಾನೇಜರ ಮಂಜುನಾಥ ನೂಲ್ವಿ ಇದ್ದರು.

Related posts

ಹುಬ್ಬಳ್ಳಿ ರೈಲುಗಳು ಸೇವೆಯ ರದ್ಧತಿ

eNewsLand Team

ಅಣ್ಣಿಗೇರಿ: ಶ್ರೀಮತಿ ನಿಂಗಮ್ಮ ಎಸ್ ಹೂಗಾರ ಫ್ರೌಢಶಾಲೆ ಎಸ್.ಎಸ್.ಎಲ್.ಸಿ.ಫಲಿತಾಂಶ ಶೇ.84.48%

eNEWS LAND Team

ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡ ರುಪಾಯಿ!!

eNewsLand Team