22 C
Hubli
ಸೆಪ್ಟೆಂಬರ್ 27, 2023
eNews Land
ಸುದ್ದಿ

ಆಯುಷ್ ಪದ್ದತಿಯನ್ನು ಅಳವಡಿಸಿಕೊಳ್ಳಿ : ಸಂಸದ ಗದ್ದಿಗೌಡರ

ಆಯುಷ್ ಪದ್ದತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ : ಸಂಸದ ಗದ್ದಿಗೌಡರ

ಇಎನ್ಎಲ್ ಬಾಗಲಕೋಟೆ

ಪ್ರಾಚಿನ ಕಾಲದಿಂದಲೂ ಬಂದ ಆಯುಷ್ ಪದ್ದತಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ರೋಗ ಬರದಂತೆ ತಡೆಯಬಹುದಾಗಿದೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ತಿಳಿಸಿದರು.
ನವನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿಂದು ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ 6ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಯುರ್ವೇದ ಪದ್ಧತಿಗೆ ಪ್ರಾಮುಖ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸ್ವಚ್ಚ ಭಾರತ, ಜನೌಷದಿ,ü ಯೋಗ, ಕೋವಿಡ್-19 ಲಸಿಕಾ ಕಾರ್ಯಕ್ರಮಗಳಂತ ಹಲವಾರು ಕಾರ್ಯಕ್ರಮಮಗಳನ್ನು ಪ್ರಧಾನಮಂತ್ರಿಗಳು ಹಮ್ಮಿಕೊಂಡಿದ್ದಾರೆ. ಆಯುಷ್ ಪದ್ದತಿಯ ಬಗ್ಗೆ ಯುವ ಪಿಳಿಗೆಯಲ್ಲಿ ಅರಿವು ಮೂಡಿಸಬೇಕು. ಹಿರಿಯರು ಹೇಳಿದ ಆಯುರ್ವೇದದಲ್ಲಿಯ ಮನೆ ಮದ್ದುಗಳನ್ನು ಉಪಯೋಗಿಸಿಕೊಳ್ಳಬೇಕು ಎಂದರು.
ಪ್ರಧಾನ ಮಂತ್ರಿಗಳು ಆರೋಗ್ಯದ ಬಗ್ಗೆ ಹೆಚ್ಚು ಮಹತ್ವಕೊಟ್ಟಿದ್ದು, ಆಯುರ್ವೇದ ಪದ್ದತಿಯು ಮನುಕುಲಕ್ಕೆ ಒಳ್ಳೆ ಪದ್ದತಿಯಾಗಿದೆ. ಗರ್ಭಿಣಿ ಹಾಗೂ ಬಾಣಂತಿಯರಿಗೆ ಆಯುರ್ವೇದಲ್ಲಿರುವ ಪೋಷಕಾಂಶಯುಕ್ತ ಆಹಾರವನ್ನು ನೀಡಿ ಆರೋಗ್ಯವಂತ ಮಗುವನ್ನು ಪಡೆಯಲು ಆಯುರ್ವೇದ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಆಯುರ್ವೇದ ಪದ್ದತಿಯಲ್ಲಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯವಂತರಾಗಬೇಕೆಂದು ಗದ್ದಿಗೌಡರ ಹೇಳಿದರು.
ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮಾತನಾಡಿ ಅಪೌಷ್ಠಿಕತೆ ನಿವಾರಣೆಗಾಗಿ ನಮ್ಮಲ್ಲಿ ಬೆಳೆಯತಕ್ಕ ಧಾನ್ಯಗಳನ್ನು ಆಹಾರವಾಗಿ ಉಪಯೋಗಿಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಲ್ಲಿನ ಅಂಗನವಾಡಿ ಮಕ್ಕಳಿಗೆ ಆಯುಷ್ ಔಷಧಿಗಳನ್ನು ಕೊಟ್ಟು ಅಪೌಷ್ಠಿಕತೆಯನ್ನು ಹೊಗಲಾಡಿಸಬೇಕು. ಆರ್ಗಾನಿಕ್‍ಯುಕ್ತ ಸಿರಿಧಾನ್ಯಗಳನ್ನು ಹಾಗೂ ತರಕಾರಿ ಸೊಪ್ಪು, ಹಣ್ಣುಗಳನ್ನು ಆಹಾರದಲ್ಲಿ ಬಳಸಿಕೊಂಡಲ್ಲಿ ಆರೋಗ್ಯವಂತರಾಗಿರಲು ಸಾದ್ಯವೆಂದರು.
ಪ್ರಭಾರಿ ಜಿಲ್ಲಾ ಆಯುಷ ಅಧಿಕಾರಿ ಅಕ್ಕಮಹಾದೇವಿ ಗಾಣಿಗೇರ ಪ್ರಾಸ್ತಾವಿಕವಾಗಿ ಮಾತನಾಡಿ ದೇವತೆಗಳ ದೇವರಾದ ಭಗವಾನ ಧನ್ವಂತರಿಯು ಸಮುದ್ರ ಮಂಥನದ ಕಾಲದಲ್ಲಿ ಉದ್ಭವಿಸಿದರು ಎಂದು ಧೀರ್ಘಾಯುಷ್‍ದ ಬಗ್ಗೆ ಯಾವ ಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ. ಅದುವೇ ಆಯುರ್ವೇದ. ಆಯುರ್ವೇದದಲ್ಲಿ ಉಲ್ಲೇಖಿಸಿದ ದಿನ, ಋತು, ಚರ್ಯ, ಸ್ವಸ್ಥ, ವೃತ್ಥ ಇವುಗಳನ್ನು ಪಾಲಿಸಿರುವುದರಿಂದ ಹಾಗೂ ಶಾಸ್ತ್ರದಲ್ಲಿ ಹೇಳಿದ ಪೋಷಣಯುಕ್ತ ಆಹಾರ ಪದ್ದತಿಯನ್ನು ಅಳವಡಿಸಿಕೊಂಡಲ್ಲಿ ಧೀರ್ಘಾಯುಷ್‍ವಾಗಿ ಬಾಳಲು ಸಹಾಯಕವಾಗಲಿದೆ ಎಂದರು.

Related posts

ಮನೆ ಕಟ್ಟಲು ಸಾಲ ಮಾಡಿ ಮಸಣ ಸೇರಿದ! ಹಿಂಗ್ಯಾಕೆ ಮಾಡಿಕೊಂಡೆ ಸಿದ್ದಪ್ಪ!!

eNewsLand Team

ರಾಡಿಹಳ್ಳ ಹೋರಾಟ ಸಮಿತಿಯಿಂದ ಪ್ರವಾಹದ ಸಮಸ್ಯೆಗೆ ಆಗ್ರಹ

eNEWS LAND Team

ಶಿರಸಂಗಿ ದೇಸಾಯಿಯವರ ಸ್ಥಳ ಪ್ರೇಕ್ಷಣೆಯ ಸ್ಥಳವಾಗಬೇಕು:ಬಸವಲಿಂಗ ಶ್ರೀಗಳು

eNEWS LAND Team