ಇಎನ್ಎಲ್ ಫಿಲ್ಮ್ ಕ್ಲಬ್
ಅನು ಇಮ್ಯಾನುಯೆಲ್ ಸ್ಟನ್ನಿಂಗ್ ಕ್ಲಿಕ್ಸ್ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ. ಸ್ಕರ್ಟ್ ನಿಂದ ಹಿಡಿದು ಸಾರಿವರೆಗೂ ಅನು ತಮ್ಮದೇ ಲುಕ್ ನಿಂದ ಆಕರ್ಷಿಸುತ್ತಿದ್ದಾರೆ.
ಯಾರಿದು ಅನು?
ಅನು ಮೂಲತಃ ಅಮೆರಿಕಾದವರು. ತೆಲುಗು, ತಮಿಳು ಮತ್ತು ಮಲಯಾಳಂ ಸಿನಿರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
ಡಾಲಿ ಧನಂಜಯ್ (Dolly Dhananjay) ಜೊತೆ ರತ್ನನ್ ಪ್ರಪಂಚ ಸಿನಿಮಾದಲ್ಲಿಯೂ ನಟಿಸಿರುವ ರೆಬಾ ಮೋನಿಕಾ ಜಾನ್ (Reba Monica John) ಮತ್ತು ಅನು ಸಹೋದರಿಯರು.
2016ರಲ್ಲಿ ಆ್ಯಕ್ಷನ್ ಹೀರೋ ಬಿಜು ಸಿನಿಮಾದಿಂದ ಬಣ್ಣದ ಲೋಕದ ಜರ್ನಿ ಶುರು ಮಾಡಿದ ಅನು ‘ಮಂಜು,’ ‘Kittu Unnadu Jagratha,’ ‘Agnyaathavaasi,’ ‘ನಾ ಪೇರು ಸೂರ್ಯ,’ ‘ಶೈಲಜಾ ರೆಡ್ಡಿ ಅಲ್ಲುಡು’ and ‘ಮಹಾ ಸಮುದ್ರಂ ಸೇರಿದಂತೆ ಈವರೆಗೂ 12 ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕಳೆದ ವರ್ಷ ಅನು & ಅಲ್ಲು ಸಿರೀಶ್ ಜೋಡಿ ಗಾಸಿಪ್ ಹಬ್ಬಿಸಿತ್ತು. ಇಬ್ಬರೂ ಮದುವೆಯಾಗುವ ಆಲೋಚನೆ ಕೂಡ ಹಾಕಿಕೊಂಡಿದೆ ಎನ್ನಲಾಗಿದೆ.
ಕ್ರಿಸ್‌ಮಸ್‌ಗೆ ಸಿರೀಶ್ ಅವರು ಅನುಗೆ ಕೇಕ್ ಕಳಿಸಿದ್ದು, ಅದನ್ನು ಅನು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿಕೊಂಡಿದ್ದರು.
ಇದನ್ನು ನೋಡಿದರೆ ಅವರಿಬ್ಬರು ತಮ್ಮ ಸಂಬಂಧದ ಬಗ್ಗೆ ಗಂಭೀರವಾಗಿದ್ದಾರೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ.