28.5 C
Hubli
ಏಪ್ರಿಲ್ 30, 2024
eNews Land
ಸುದ್ದಿ

ಅಣ್ಣಿಗೇರಿ: ಕರ್ನಾಟಕ ಬಂದ್ ಬೆಂಬಲಿಸಿ ಪ್ರತಿಭಟನೆ

ಇಎನ್‌ಎಲ್ ಅಣ್ಣಿಗೇರಿ: ಅಣ್ಣಿಗೇರಿ ತಾಲೂಕ ಕಳಸಾಬಂಡೂರಿ ರೈತ ಹೋರಾಟ ಸಮಿತಿ ಹಾಗೂ ಪಕ್ಷಾತೀತ ರೈತ ಮುಖಂಡರು, ಅಣ್ಣಿಗೇರಿ ತಾಲೂಕ ಕರ್ನಾಟಕ ರಾಜ್ಯ ದಲಿತ ವಿಮೋಚನಾ ಸಮಿತಿ, ಕರ್ನಾಟಕ ಬಂದ್ ಬೆಂಬಲಿಸಿ ಕಾವೇರಿ ಜಲಾಶಯದಿಂದ ಹೊರರಾಜ್ಯಕ್ಕೆ ನಿತ್ಯ 5 ಸಾವಿರ ಕ್ಯೂಸಿಕ್ ನೀರು ಬಿಡುಗಡೆ ಮಾಡಿದ್ದನ್ನು ಖಂಡಿಸಿ, ಸರ್ಕಾರ ವಿರುದ್ಧ ಘೋಷಣೆಗಳನ್ನು ಕೂಗಿ, ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಪ್ರತಿಭಟಿಸಿ ಬಸ್ ನಿಲ್ದಾಣ ಹತ್ತಿರ ರಸ್ತೆ ಮೇಲೆ ಕುಳಿತು ಪ್ರತಿಭಟಿಸಿದರು. ನಂತರ ತಹಶೀಲ್ದಾರ ಶಿವಾನಂದ ಹೆಬ್ಬಳ್ಳಿ ಅವರಿಗೆ ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಷಣ್ಮುಖ ಗುರಿಕಾರ ಮನವಿ ಸಲ್ಲಿಸಿದರು.

ಮಾಜಿ ಕ್ರೇಡಿಲ್ ಅಧ್ಯಕ್ಷ ಷಣ್ಮುಖ ಗುರಿಕಾರ ಮಾತನಾಡಿ ರಾಜ್ಯ ಜನರ ಜೀವಜಲ ಕಾವೇರಿ ನೀರು ಹಂಚಿಕೆಯಲ್ಲಿ ಸುಪ್ರೀಕೊರ್ಟ ಅದೇಶದ ಪ್ರಕಾರ ಆದ ಅನ್ಯಾಯಕ್ಕಾಗಿ ಕರ್ನಾಟಕ ಬಂದ್ ಬೆಂಬಲಿಸುವ ಹಿನ್ನಲೆಯಲ್ಲಿ ಹಾಗೂ ಬರಪೀಡಿತ ಪ್ರದೇಶ ಅಣ್ಣಿಗೇರಿ ತಾಲೂಕ ಕೈಬಿಟ್ಟದ್ದನ್ನು ಖಂಡಿಸಿ, ಅಭಿವೃದ್ಧಿ ಕಾರ್ಯಗಳೇ ಕುಂಠಿತಗೊಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಬರಪೀಡಿತ ಪ್ರದೇಶ ಅಣ್ಣಿಗೇರಿ ತಾಲೂಕನ್ನು ಇನ್ನುಳಿದ ಪಟ್ಟಿಯಲ್ಲಿ ಸೇರ್ಪಡಿಸಿ ಘೋಷಣೆ ಮಾಡಬೇಕೆಂದು ಆಗ್ರಹಸಿದರು. ಕಳಸಾಬಂಡೂರಿ ಯೋಜನೆ ಕಾಮಗಾರಿ ತಕ್ಷಣವೇ ಆರಂಭಿಸಬೇಕೆ0ದು ಒತ್ತಾಯಿಸಿದರು. ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳದಿದ್ದರೇ ಹೋರಾಟ ಮಾರ್ಗ ಅನಿವಾರ್ಯವೆಂದು ಎಚ್ಚರಿಕೆ ಕೊಟ್ಟರು.
ಬಾಬಾಸಾಹೇಬ ಅಂಬೇಡ್ಕರ ಬರೆದಿರುವ ಸಂವಿಧಾನದಲ್ಲಿ ೨೬೨ ಪ್ರಕಾರ ಅಂತರ ರಾಜ್ಯ ನದಿ ಅಥವಾ ನದೀ ಕಣವಿಗಳ ಜಲಸಂಭದವಾದ ವಿವಾಧಗಳಲ್ಲಿ ನ್ಯಾಯ ನಿರ್ಣಯದಂತೆ ಯಾವುದೇ ವಿವಾಧ ಅಥವಾ ದೂರಿನ ಬಗ್ಗೆ ನ್ಯಾಯ ನಿರ್ಣಯ ಮಾಡುವುದಕ್ಕಾಗಿ ಸಂಸತ್ತುಕಾನೂನಿನ ಮೂಲಕ ಉಪಬಂಧಿಸಬಹುದು. ಯಾವುದೇ ಉಲ್ಲೇಖಿಸಿದ ಚರ ಯಾವುದೇ ನ್ಯಾಯಾಲಯವು ಅಧಿಕಾರವ್ಯಾಪ್ತಿಯನ್ನು ಚಲಾಯಿಸತಕ್ಕದಲ್ಲವೆಂದು ಸಂಸತ್ತು ಕಾನೂನು ಮೂಲಕ ಉಪಬಂದಿಸಬಹುದು. ಸುಪ್ರೀಂ ಕೊರ್ಟಗೆ ತೀರ್ಪು ನೀಡುವ ಅಧಿಕಾರ ಇಲ್ಲ. ಒಂದು ವೇಳೆ ತೀರ್ಪು ನೀಡಿದರ ಅದು ಅಂತಿಮವಲ್ಲ ಎಂದರು.
ಯಾವುದೇ ಅಹಿತಕರ ಘಟನೆ ಜರುಗದಂತೆ ಶಾಂತಿರೀತಿಯಲ್ಲಿ ಪ್ರತಿಭಟನೆಕಾರರು ಪ್ರತಿಭಟಿಸಿದರು. ಅಂಗಡಿ ಮುಗ್ಗಟ್ಟುಗಳು ತೆರೆದಿದ್ದವು. ಸಾರಿಗೆ ಇನ್ನೀತರ ಖಾಸಗಿ ವಾಹನಗಳು ಸಂಚರಿಸುತ್ತಿದ್ದವು. ಶಾಲಾ ಕಾಲೇಜುಗಳು ತೆರೆದಿದ್ದವು. ಸರ್ಕಾರದ ಎಲ್ಲಾ ಕಛೇರಿಗಳು, ಬ್ಯಾಂಕುಗಳು ತೆರೆದಿದ್ದವು. ವ್ಯಾಪಾರ ವಹಿವಾಟ ಎಂದಿನoತೆ ಸಾಗಿತ್ತು. ಸ್ಥಳೀಯ ಪೊಲೀಸ್ ಠಾಣಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದರು.
ಈ ವೇಳೆ ರೈತ ಹೋಟಾಟ ಸಮಿತಿ ಅಧ್ಯಕ್ಷ ಜಯರಾಜ ಹೂಗಾರ, ಭಗವಂತಪ್ಪ ಪುಟ್ಟಣ್ಣವರ, ಶಿವಾನಂದ ಹೊಸಳ್ಳಿ, ಬಂಡೆಪ್ಪ ಹಳ್ಳಿ, ಶೇಖಪ್ಪ ಸೊಟಕನಾಳ, ಮಲ್ಲಪ್ಪ ಬ್ಯಾಹಟ್ಟಿ, ಎಲ್ಲಪ್ಪ ಮೊರಬಸಿ, ಗುರುಸಿದ್ದಪ್ಪ ಕೊಪ್ಪದ, ಪುರಸಭೆ ಸದಸ್ಯ ಎ.ಪಿ.ಗುರಿಕಾರ ಶಿವಶಂಕರ ಕಲ್ಲೂರ, ಸಿ.ಜಿ.ನ್ಯಾವಳ್ಳಿ, ರಾಘವೇಂದ್ರ ರಾಮಗೀರಿ, ತಾಲೂಕಿನ ಸುತ್ತಮುತ್ತಲಿನ ರೈತಮುಖಂಡರು ಪಕ್ಷಾತೀತ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

Related posts

ಏ. 12, 13ರ ಮಹಾ ರಂಗಪ್ರಯೋಗಕ್ಕೆ ಸಜ್ಜಾಗ್ತಿದೆ ಧಾರವಾಡ ರಂಗಾಯಣ!! ಆ ಫೇಮಸ್ ನಾಟಕ ಯಾವುದು ಗೊತ್ತಾ?

eNewsLand Team

ಹುಬ್ಬಳ್ಳಿಲಿ ಪ್ರತ್ಯೇಕ ಅಪಘಾತ; ಇಬ್ಬರು ಸ್ಪಾಟ್ ಔಟ್

eNewsLand Team

APMC ವ್ಯಾಪಾರಸ್ಥರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಯಾರು? ನೋಡಿ

eNEWS LAND Team