eNews Land
ಸುದ್ದಿ

ಅಣ್ಣಿಗೇರಿ: ಎಸ್.ಸಿ / ಎಸ್.ಟಿ ಮುಖಂಡರಿoದ ರಸ್ತೆ ತಡೆ ಪ್ರತಿಭಟನೆ

Listen to this article

ಇಎನ್ಎಲ್ ಅಣ್ಣಿಗೇರಿ: ತಾಲೂಕಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮುಖಂಡರು ಪರಿಶಿಷ್ಟ ಜಾತಿಗೆ 15% ರಿಂದ 17.5%ಗೆ ಮಿಸಲಾತಿ ಹೆಚ್ಚಿಸಬೇಕು,ಹಾಗೂ ಪರಿಶಿಷ್ಠ ಪಂಗಡ ಜಾತಿಗೆ 3% ರಿಂದ 7.5% ಮಿಸಲಾತಿ ಹೆಚ್ಚಿಸಬೇಕೆಂದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ, ಪ್ರತಿಭಟಿಸಿ, ತಹಶೀಲ್ದಾರ ಮಂಜುನಾಥ ಅಮಾಸಿ ಅವರಿಗೆ ಮನವಿ ನೀಡಿ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ನೀಡಿದರು. ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಶ್ರೀ ಕಳೆದ 100 ದಿನಗಳಿಂದ ಬೆಂಗಳೂರಿನ ಪ್ರೀಡಂ ಪಾರ್ಕನಲ್ಲಿ ಹಗಲಿರುಳು ಪ್ರತಿಭಟನೆ ಮಾಡಿದರೂ ಸರ್ಕಾರ ಗಮನಹರಿಸಿಲ್ಲ. ಶ್ರೀಗಳ ಪ್ರತಿಭಟನೆ ಬೆಂಬಲವಾಗಿ ರಾಜ್ಯಾದ್ಯಂತ ಎಸ್.ಸಿ./ಎಸ್.ಟಿ. ಜನಾಂಗದ ಮುಖಂಡರು ರಸ್ತೆ ತಡೆ ಹಾಗೂ ಪ್ರತಿಭಟನೆ ಹಮ್ಮಿಕೊಂಡ ಪ್ರಯುಕ್ತ ಸರ್ಕಾರ ತಕ್ಷಣವೇ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನದಾಸ್ ಏಕಸದಸ್ಯ ಆಯೋಗದ ವರದಿ ಜಾರಿಗಾಗಿ ಆಗ್ರಹಿಸುತ್ತಿದ್ದು, ಮೀಸಲಾತಿ ಪ್ರಕಟಿಸುವಲ್ಲಿ ಕ್ರಮಕೈಗೊಳ್ಳದಿದ್ದರೇ ಉಗ್ರಹೋರಾಟ ಮಾಡುವುದಾಗಿ ತಾಲೂಕಿನ ಎಸ್.ಸಿ./ಎಸ್.ಟಿ ಜನಾಂಗದ ಮುಖಂಡರು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರವೀಣ ಶಿರಹಟ್ಟಿ, ಯಲ್ಲಪ್ಪ ದುಂದೂರ, ಮಾರುತಿ ಮರಡ್ಡಿ, ರಾಮಣ್ಣ ದೊಡ್ಡಮನಿ, ಬಸವರಾಜ ಜಾಲಿಹಾಳ, ಭೀಮಪ್ಪ ಜಂತ್ಲಿ, ಮುತ್ತು ಬಿಸ್ಟಕ್ಕನವರ, ಯೋಗೇಶ ಚಲವಾದಿ, ಮಂಜುನಾಥ ಹೊನ್ನನವರ, ವೀರಣ್ಣ ಗುಬ್ಬಿ, ಶಾಂತರಾಜ ಬಿ.ಟಿ ಹಾಗೂ ಎಸ್.ಸಿ/ಎಸ್.ಟಿ ಪಂಗಡದ ಮುಖಂಡರು ಉಪಸ್ಥಿತರಿದ್ದರು.

Related posts

ಕನ್ನಡಿಗರು ನೆಲ, ಜಲ, ಭಾಷೆ, ಸಾಹಿತ್ಯ, ಕಲೆ, ಶಿಕ್ಷಣ, ಜಾನಪದ ಉಳಿಸಿ ಬೆಳೆಸಬೇಕಿದೆ: ಉಪನ್ಯಾಸಕ ಬಸನಗೌಡ

eNEWS LAND Team

ನಿಮ್ಮದು ಕಳಂಕ ರಹಿತ ಸೇವೆ: ಸಿ.ಎಮ್.ನಿಂಬಣ್ಣವರ

eNEWS LAND Team

ಹುಬ್ಬಳ್ಳ್ಯಾಗ ಸರಿಗಮಪ ಲಿಟಲ್ ಚಾಂಪ್ಸ್ ಆಡಿಷನ್ಸ್ ಐತಿ; ಮಕ್ಳ ಕರ್ಕೊಂಡು ಹೊಂಡ್ರಿ ಮತ್ತ..!

eNEWS LAND Team