26.4 C
Hubli
ಏಪ್ರಿಲ್ 18, 2024
eNews Land
ಸುದ್ದಿ

ತಾಲೂಕಾದರೂ ಬದಲಾಗದ ಅಣ್ಣಿಗೇರಿ ಹಣೆಬರಹ

ವಚನ ಹೂಗಾರ

ಇಎನ್ಎಲ್ ಅಣ್ಣಿಗೇರಿ: ಪಟ್ಟಣದಲ್ಲಿ ಮೂಲಸೌಲಭ್ಯ ಅಭಿವೃದ್ಧಿಗಳಿಲ್ಲದೆ ವಂಚಿತಗೊoಡ ಜನತೆಯ ಪಾಡು ದೇವರೆಬಲ್ಲ. ಪಟ್ಟಣದ 23 ವಾರ್ಡಗಳಲ್ಲಿ ಮೂಲಸೌಲಭ್ಯಗಳ ಜಲ್ವಂತ ಸಮಸ್ಯೆಗಳ ಕೊರತೆ ಉಲ್ಬಣಗೊಂಡು ಪರದಾಡುವ ಸ್ಥಿತಿ ತಾರಕಕ್ಕೇರಿದರೂ  ಕುರುಡು ಜಾಣ್ಮೆ ತೋರುತ್ತಾ ಜಿಲ್ಲಾಡಳಿತ, ತಾಲೂಕಾಡಳಿತ, ಶಾಸಕರು, ಪುರಸಭೆ ಜನಪ್ರತಿನಿಧಿಗಳು, ಅಧಿಕಾರಿಗಳವರ್ಗ, ಗಮನಹರಿಸಿಲ್ಲ. ಪುರಸಭೆಗೆ ಅಲೆದಾಡಿ ಹಲವಾರು ಬಾರಿ ಲಿಖಿತ ಮೌಖಿಕವಾಗಿ ಮನವಿ ಸಲ್ಲಿಸಿದ್ದು ಪ್ರಯೋಜನವಿಲ್ಲದಂತಾಗಿದೆ.

ಮೂಲ ಸೌಲಭ್ಯಗಳ ಕೊರತೆ ಸರಮಾಲೆ
ಅವೈಜ್ಞಾನಿಕ ರೀತಿಯಲ್ಲಿ ಪಟ್ಟಣದ ತುಂಬಲ್ಲಾ ರಸ್ತೆ, ಗಟಾರು, ಚರಂಡಿ, ಸಿಡಿ, ಶೌಚಾಲಯ, ವಾಣಿಜ್ಯಸಂಕೀರ್ಣ, ನಿರ್ಮಿಸಿದ್ದು ಕಳಪೆ ಕಾಮಗಾರಿಗಳಿಂದ ಅಸ್ತಿತ್ವ ಕಳೆದುಕೊಂಡು ಅಧೋಗತಿಯತ್ತ ಸಾಗಿವೆ. ತಿಂಗಳಿಗೊಮ್ಮೆ 23 ವಾರ್ಡಗಳಲ್ಲಿ ಗಟಾರು ಸ್ವಚ್ಛತೆ, ಅನೇಕ ವಾರ್ಡುಗಳಲ್ಲಿ ತಗ್ಗುದಿನ್ನೆಗಳಿಂದ ಹದೆಗೆಟ್ಟ ರಸ್ತೆಗಳು, ಮಳೆಯ ರಭಸದಿಂದ ಒಡೆದು ಹೋದ ಚರಂಡಿಗಳು, ಬೀದಿ ದೀಪವಿಲ್ಲದ ವಿದ್ಯುತ್ ಕಂಬಗಳು, 10 ದಿನಕ್ಕೊಮ್ಮೆ 23 ವಾರ್ಡುಗಳಿಗೆ 2 ತಾಸು ಕುಡಿಯುವ ನೀರು ಪೂರೈಕೆ. ದ್ವಿಪಥ ರಸ್ತೆಗಳು ಡಾಂಬರೀಕರಣ ಮಾಡಿದ್ದರೂ, ತಗ್ಗು ದಿನ್ನೆಗಳಿಂದ ಅವರಿಸಿ ಜನರು ಸಂಚರಿಸಲು ಸಾಧ್ಯವಾಗುತ್ತಿಲ್ಲ.

ದುರಸ್ತಿ, ಸೌಲಭ್ಯಗಳಿಲ್ಲದ ಸಾರ್ವಜನಿಕ ಶೌಚಾಲಯಗಳು, ಬಿರುಕುಬಿಟ್ಟ ಕಾಂಕ್ರೀಟ್ ರಸ್ತೆಗಳು, ಗಟಾರು, ಸಿಡಿ, ಬೀದಿ ದೀಪಗಳಿಲ್ಲದೇ, ಒಳಚರಂಡಿ ಯೋಜನೆ ಅನುಷ್ಠಾನವಿಲ್ಲದೇ, ತಗ್ಗು ಪ್ರದೇಶದಲ್ಲಿ ರಭಸದ ಮಳೆ ಬಂದಾಗ ಮಳೆ ನೀರು ನಿವಾಸಿಗಳ ಮನೆಗಳನ್ನು ಆವರಿಸಿ ಆಶ್ರಯವಿಲ್ಲದಂತಾಗಿದೆ. ರಸ್ತೆ ಅಕ್ಕಪಕ್ಕದ ಗಟಾರು ದಂಡೆ ಮೇಲೆ ಕಸದ ರಾಶಿಗಳು ತಿಪ್ಪೆಗಳಂತೆ ಪರಿವರ್ತನೆಗೊಂಡು ಹಂದಿ ನಾಯಿಗಳು ತಂಗುವ ತಾಣಗಳಾಗಿವೆ.

ಚರಂಡಿ ಗಬ್ಬು ನಾರುವ ಹೊಲಸು ವಾಸನೆಯಿಂದ ಅಕ್ಕಪಕ್ಕದ ನಿವಾಸಿಗಳು ಸೊಳ್ಳೆ ಕಾಟದಿಂದ ಅನಾರೋಗ್ಯಕ್ಕೆ ತುತ್ತಾಗಿ  ಬಳಲುವಂತಾಗಿದೆ. ವಾರಕ್ಕೆರಡು ಬಾರಿ ಹಸಿಕಸ, ಒಣಕಸ ಒಯ್ಯಲು ಪುರಸಭೆ ಕಸದ ವಾಹನಗಳು ಪ್ರತಿ ವಾರ್ಡುಗಳಲ್ಲಿ ಬರುತಿವೆ. ನಿತ್ಯ ಕಸದ ರಾಶಿ ಸಾರ್ವಜನಿಕರು ಗಟಾರು ಪಕ್ಕದಲ್ಲಿ ಹಾಕಿ ತಿಪ್ಪೆ ರಾಶಿ ಮಾಡಿದ್ದು ಎಲ್ಲೆಂದರಲ್ಲಿ ಕಾಣುತಿವೆ. ಅದೇ ಸ್ಥಳದಲ್ಲಿ ಸಾರ್ವಜನಿಕರು ಮಲಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯವಾಗಿದೆ.

ಕಳೆದ 3-4 ವರ್ಷಗಳಿಂದ ಅಭಿವೃದ್ಧಿ ಕುಂಠಿತಗೊoಡಿದ್ದು, ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳು, ನೂತನ ಚುನಾಯಿತ ಸದಸ್ಯರು, ಪುರಸಭೆ ಆಡಳಿತ ಚುಕ್ಕಾಣಿ ನೆಪದಲ್ಲಿ ವ್ಯರ್ಥಕಾಲಹರಣಕ್ಕೆ ಅವಕಾಶಕೊಡದೇ, ಜನರ ಸಮಸ್ಯೆಗಳನ್ನರಿತು ಕಾರ್ಯೋನ್ಮುಖರಾಗಿ ಸೇವೆ ಸಲ್ಲಿಸುವಲ್ಲಿ ಮುಂದಾಗುತ್ತಾರೋ ಎಂಬುದನ್ನು ಕಾಯ್ದನೋಡಬೇಕಿದೆ.

 

ಸರಕಾರದ ಯೋಜನೆಗಳ ಅನುದಾನ ಸದ್ಭಳಿಸಿಕೊಂಡು ಕ್ರಿಯಾ ಯೋಜನೆ ಪ್ರಕಾರ ಪಟ್ಟಣದ ಪ್ರತಿ ವಾರ್ಡುಗಳಲ್ಲಿ ಮೂಲಸೌಲಭ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಜನಪ್ರತಿನಿಧಿಗಳು, ಜಿಲ್ಲಾಡಳಿತ, ಶಾಸಕರು,ಪುರಸಭೆ ಆಡಳಿತ ಮಂಡಳಿ ಹಿತಾಶಕ್ತಿಕೊರತೆ,ವೈಪಲ್ಯವೇ ಅಭಿವೃದ್ಧಿ ಕುಂಠಿತಕ್ಕೆ ಕಾರಣವಾಗಿದೆ ಎಂದ ರೈತರತ್ನ ಪುರಸ್ಕೃತ ಮಹೇಶ ಸೂಡಿ

ಪಟ್ಟಣದ ಜನತೆ ಮೂಲ ಸೌಲಭ್ಯ ಅಭಿವೃದ್ಧಿಯಿಂದ ವಂಚಿತಗೊoಡಿದ್ದು, ಕಳಪೆ ಕಾಮಗಾರಿಗಳಿಂದ ಸಾರ್ವಜನಿಕರ ಹಿಡಿ ಶಾಪಕ್ಕೆ ತುತ್ತಾಗಿವೆ. ಜಿಲ್ಲಾಡಳಿತ, ಜನಪ್ರತಿನಿಧಿಗಳು, ಅಧಿಕಾರಿಗಳು, ಸೌಲಭ್ಯ ಕಲ್ಪಿಸುವ ಭರವಸೆ ಬಿಟ್ಟು ಅಭಿವೃದ್ಧಿ ಕಡೆಗೆ ಚಾಲನೆ ಕೊಡೊದು ಸೂಕ್ತ. ಪಟ್ಟಣದ ಅಭಿವೃದ್ಧಿ ಮೂಲಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದ ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂಗಡಿ.

Related posts

ಹಣಬಲದಿಂದ ಚುನಾವಣೆ ಗೆಲ್ಲಲು ಕಾಂಗ್ರೆಸ್ ಹುನ್ನಾರ: ಮುಖ್ಯಮಂತ್ರಿ ಬೊಮ್ಮಾಯಿ

eNewsLand Team

ಅಮೃತ ಯೋಜನೆ ಅಡಿಯ ಕಾಮಗಾರಿ ಶೀಘ್ರ ಇತ್ಯರ್ಥಗೊಳಿಸುವಂತೆ ಹುಡಾ ಅಧ್ಯಕ್ಷ ನಾಗೇಶ ಕಲ್ಬುರ್ಗಿ ಸೂಚನೆ

eNEWS LAND Team

ಧಾರವಾಡ ಜಿಲ್ಲಾ ಪಂಚಾಯತ ನೂತನ ಸಿಇಓ ಆಗಿ ಡಾ.ಸುರೇಶ ಇಟ್ನಾಳ ಅಧಿಕಾರ ಸ್ವೀಕಾರ

eNewsLand Team