ಇಎನ್ಎಲ್ ಅಣ್ಣಿಗೇರಿ: ಐತಿಹಾಸಿಕ ಪ್ರಸಿದ್ಧ ಪಟ್ಟಣದ ಆರಾಧ್ಯದೇವ ಅಮೃತೇಶ್ವರನ ದೇವಸ್ಥಾನದಲ್ಲಿ ಡಿ.17 ರಂದು ಕಲ್ಯಾಣೋತ್ಸವ, ಡಿ.18 ರಂದು ಮಹಾರಥೋತ್ಸವ ವಿಜೃಂಭಣೆಯಿಂದ ಜರುಗುವುದನ್ನು ಜಿಲ್ಲಾಡಳಿತ ನಿಷೇಧಗೊಳಿಸಿದೆ ಎಂದು ದೇವಸ್ಥಾನದ ಟ್ರಸ್ಟ್ ಕಮಿಟಿಯ ಧರ್ಮದರ್ಶಿ ಲಿಂಗರಾಜ ಅಂಗಡಿ ಹೇಳಿದರು.
ಪಟ್ಟಣದ ಪೋಲಿಸ್ ಠಾಣೆಯಲ್ಲಿ ಅಮೃತೇಶ್ವರ ರಥೋತ್ಸವ ನಿಮಿತ್ಯ ಹಮ್ಮಿಕೊಂಡ ಶಾಂತಿಸಭೆಯಲ್ಲಿ ಮಾತನಾಡಿದರು.
ಮಾಜಿ ಕ್ರೇಡಿಲ್ ಅಧ್ಯಕ್ಷ ಷಣ್ಮುಖ ಗುರಿಕಾರ ಮಾತನಾಡಿ, ಸರ್ಕಾರದ ಆದೇಶ ಪ್ರಕಾರ ಕೋವಿಡ್-19 3ನೇ ಅಲೆ ನಿಯಮಗಳನ್ನು ಪಾಲಿಸುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ರದ್ದುಗೊಳಿಸಿದೆ. ಸದ್ಭಕ್ತರು ಸಾಮಾಜಿಕ ಅಂತರ ಬಳಿಸಿ, ಮಾಸ್ಕ್ ಧರಿಸಿ, ಕೋವಿಡ್ ನಿಯಮಗಳನ್ನು ಪಾಲಿಸಿ, ಧಾರ್ಮಿಕ ಪೂಜಾಕೈಂಕರ್ಯದೊoದಿಗೆ ಶಾಂತ ರೀತಿಯಿoದ ಅಮೃತೇಶ್ವರನ ದರ್ಶನ ಪಡೆದು ಪುನೀತರಾಗಲು ಎಲ್ಲಾ ವ್ಯವಸ್ಥೆ ಕಲ್ಪಿಸಿ ಎಂದರು.
ಸಿ.ಪಿ.ಆಯ್.ಸಿ.ಜಿ.ಮಠಪತಿ ಮಾತನಾಡಿ, ಜಿಲ್ಲಾಡಳಿತ ಆದೇಶದನ್ವಯ, ಕೋವಿಡ್-19 ನಿಮಿತ್ಯ ರಥೋತ್ಸವ ರದ್ದುಗೊಳಿಸಿ, ಪಾರಂಪರಿಕ ಧಾರ್ಮಿಕ ವಿಧಿ-ವಿಧಾನಗಳನ್ನು ಪೂರೈಸಲು, ಅಮೃತೇಶ್ವರ ದೇವಸ್ಥಾನ ಆರಾಧ್ಯಮೂರ್ತಿ ಅಮೃತೇಶ್ವರನ ಪೂಜಾಕೈಂಕರ್ಯಕ್ಕೆ ಚಾಲನೆ ನೀಡಿದೆ ಎಂದರು. ಪಿಎಸ್ಐ ಎಲ್.ಕೆ.ಜ್ಯೂಲಿಕಟ್ಟಿ ಮಾತನಾಡಿ, ಕೋವಿಡ್-19 ನಿಯಂತ್ರಣಕ್ಕೆ ಡಿ-17-ಡಿ.18 ರಂದು ನಡೆಯುವ ಅಮೃತೇಶ್ವರ ಜಾತ್ರೆ ರಥೋತ್ಸವ ನಿಷೇಧಿಸಿದ್ದರಿಂದ ಕೋವಿಡ್ ಕಟ್ಟುನಿಟ್ಟಿನ ನಿಯಮಗಳನ್ನು ಅಳವಡಿಸಿಕೊಂಡು, ಜಾತ್ರಾ ಮಹೋತ್ಸವದಲ್ಲಿ ಸದ್ಭಕ್ತರು ಶಾಂತಿ- ಸುವ್ಯವಸ್ಥೆತೆ ಕಾಪಾಡಲು ವಿನಂತಿಸಿದರು. ತಹಶೀಲ್ದಾರ ಮಂಜುನಾಥ ಅಮಾಸಿ ಮಾತನಾಡಿ,ಕೋವಿಡ್-3ನೆ ಅಲೆ ದೇಶವನ್ನು ಪಸರಿಸುವ ಲಕ್ಷಣಗಳು ತಡೆಗಟ್ಟುವ ನಿಟ್ಟಿನಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಲು ಮುಂಜಾಗ್ರತ ಕ್ರಮವಾಗಿ ಸರ್ಕಾರ ಮದುವೆ, ಸಭೆ ಸಮಾರಂಭಗಳು ಧಾರ್ಮಿಕ ಜಾತ್ರಾ ಮಹೋತ್ಸವ, ಶಾಲೆ ಕಾಲೇಜುಗಳಲ್ಲಿ ಸಭೆ ಸಮಾರಂಭಗಳನ್ನು ಸದ್ಯ ಡಿ.31 ರವರೆಗೆ ನಿಷೇಧಗೊಳಿಸಲು ಆದೇಶ ಹೊರಡಿಸಿದೆ. ಈ ಹಿನ್ನಲೆಯಲ್ಲಿ ಜೀವದ ಜೊತೆ ಚೆಲ್ಲಾಟವಾಡುವುದನ್ನು ಬಿಟ್ಟು, ಈ ವರ್ಷದ ಅಮೃತೇಶ್ವರ ಜಾತ್ರಾ ಮಹೋತ್ಸವ ಶಾಂತಿಯುತವಾಗಿ ರಥೋತ್ಸವ ಜರುಗಿಸದೇ, ನೇರವೆರಿಸಲು ಟ್ರಸ್ಟ್ ಕಮಿಟಿಗೆ ಜಿಲ್ಲಾಡಳಿತ ಸೂಚಿಸಿದ್ದರಿಂದ ಪಟ್ಟಣದ ಸಾರ್ವಜನಿಕರು, ಸದ್ಭಕ್ತರು, ಶಾಂತಿರೀತಿಯಿoದ ಸಹಕರಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಕೆ.ಎಫ್.ಕಟಗಿ, ಸಿಪಿಐ ಸಿ.ಜಿ.ಮಠಪತಿ, ಆಯ್.ಜಿ, ಸಮುದ್ರಿ, ನಿಜಗುಣೆಪ್ಪ ಅಕ್ಕಿ, ಬಸನಗೌಡ ಕುರಹಟ್ಟಿ, ಸಿ.ಜಿ.ನ್ಯಾವಳ್ಳಿ, ಪಟ್ಟಣದ ಗುರು-ಹಿರಿಯರು, ಪೋಲಿಸ್ ಸಿಬ್ಬಂದಿ ವರ್ಗ, ಹಾಗೂ ಉಪಸ್ಥಿತರಿದ್ದರು.