27.6 C
Hubli
ಏಪ್ರಿಲ್ 25, 2024
eNews Land
ಸುದ್ದಿ

ಅಣ್ಣಿಗೇರಿ: ಶ್ರೀಮತಿ ನಿಂಗಮ್ಮ ಎಸ್ ಹೂಗಾರ ಫ್ರೌಢಶಾಲೆ ಎಸ್.ಎಸ್.ಎಲ್.ಸಿ.ಫಲಿತಾಂಶ ಶೇ.84.48%

ಇಎನ್ಎಲ್ ಅಣ್ಣಿಗೇರಿ : ಸ್ಥಳೀಯ ಶ್ರೀಮತಿ ನಿಂಗಮ್ಮ ಎಸ್. ಹೂಗಾರ ಆಂಗ್ಲಮಾಧ್ಯಮ ಪ್ರೌಢ ಶಾಲೆಯ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ. ಡಿಸ್ಟಿಂಕ್ಷನ್ 14, ಪ್ರಥಮ ದರ್ಜೆ 27, ದ್ವಿತೀಯ ದರ್ಜೆಯಲ್ಲಿ 08 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಪರೀಕ್ಷೆಗೆ ಕುಳಿತ 58 ವಿದ್ಯಾರ್ಥಿಗಳಲ್ಲಿ 49 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶಾಲೆಯ ಒಟ್ಟಾರೆ ಫಲಿತಾಂಶ ಪ್ರತಿಶತ 84.48% ರಷ್ಟಾಗಿದೆ.

603 ಅಂಕ ಪಡೆದ (96.48%) ಅರ್ಚನಾ ಓಸೇಕರ ಪ್ರಥಮ ಸ್ಥಾನ, 594 ಅಂಕ ಗಳಿಸಿದ (95.04%) ಪ್ರಿಯಾಂಕ ಪಪ್ಪಳೆ ದ್ವಿತೀಯ ಸ್ಥಾನ, 593 ಅಂಕ ಪಡೆದ (94.88%) ರಾಜೇಶ್ವರಿ ಹೆಬ್ಬಳ್ಳಿ ಹಾಗೂ ಮಂಜುನಾಥ ಬದಾಮಿ ತೃತೀಯ ಸ್ಥಾನ ಪಡೆದಿದ್ದಾರೆ.
ದ್ವಿತೀಯ ಭಾಷೆ ಕನ್ನಡ ವಿಷಯದಲ್ಲಿ 06 ವಿದ್ಯಾರ್ಥಿಗಳು, ತೃತೀಯ ಭಾಷೆ ಹಿಂದಿಯಲ್ಲಿ 4 ವಿದ್ಯಾರ್ಥಿಗಳು ಹಾಗೂ ಸಮಾಜ ವಿಜ್ಞಾನ ವಿಷಯದಲ್ಲಿ ಓರ್ವ ವಿದ್ಯಾರ್ಥಿ 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.
ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಪ್ರಧಾನ ಗುರುಮಾತೆಯರು,  ಶಿಕ್ಷಕ ವೃಂದ, ಸಿಬ್ಬoದಿವರ್ಗ, ಆಡಳಿತಮoಡಳಿ. ನಿರ್ದೇಶಕರು ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟಿ, ಪ್ರಾಚಾರ್ಯ ಎಸ್.ಎಸ್.ಹರ್ಲಾಪೂರ, ಅಭಿನಂದಿಸಿದ್ದಾರೆ.

Related posts

ಗುಡಗೇರಿಗೆ ಭೇಟಿ ನೀಡಿದ ಶಾಸಕಿ ಕುಸುಮಾವತಿ

eNEWS LAND Team

32 ಎಕರೆ ಕಬ್ಬು ಬೆಳೆ ಆಹುತಿ; ಎಷ್ಟು ರೈತರು ಕಣ್ಣೀರು ಹಾಕ್ತಿದ್ದಾರೆ ಗೊತ್ತಾ?

eNewsLand Team

SWR: CANCELLATION / PARTIAL CANCELLATION / DIVERSION / RESCHEDULING / REGULATION OF TRAINS

eNEWS LAND Team