23.8 C
Hubli
ಮಾರ್ಚ್ 28, 2023
eNews Land
ಸುದ್ದಿ

ಅಣ್ಣಿಗೇರಿ ಪುರಸಭೆ 23 ವಾರ್ಡಗಳ  ಚುನಾವಣೆ. ಟಿಕೇಟ್‌ಗಾಗಿ ಕೈ-ಕಮಲ ಪಕ್ಷಗಳಲ್ಲಿ ಪೈಪೋಟಿ ಅಭ್ಯರ್ಥಿಗಳ ಇರುಸು- ಮುರುಸಿನ ತಿಕ್ಕಾಟ!!

Listen to this article
ವಚನ ಹೂಗಾರ
ಇಎನ್ಎಲ್ ಅಣ್ಣಿಗೇರಿ:  ಕೈಪಕ್ಷದಲ್ಲಿ ಟಿಕೇಟಗಾಗಿ 50 ಅಭ್ಯರ್ಥಿಗಳಿಗಿಂತ ಹೆಚ್ಚು  ಅರ್ಜಿ, ಕಮಲ ಪಕ್ಷದಲ್ಲಿ ಟಿಕೇಟಗಾಗಿ 110ಕ್ಕೂ ಹೆಚ್ಚು ಅರ್ಜಿ, ಜೆಡಿಎಸ್ ಪಕ್ಷದಲ್ಲಿ ಟಿಕೇಟಿಗಾಗಿ 36 ಅಭ್ಯರ್ಥಿಗಳಿಗಿಂತ ಹೆಚ್ಚು ಅರ್ಜಿ, ಅಮ್ ಆದ್ಮಿ ಪಕ್ಷದಲ್ಲಿ ಟಿಕೇಟಿಗಾಗಿ 10 ಅಭ್ಯರ್ಥಿಗಳಿಗಿಂತ ಹೆಚ್ಚು ಅರ್ಜಿ ಆಕಾಂಕ್ಷಿಗಳಿoದ ಬಂದಿವೆ. ಅಣ್ಣಿಗೇರಿ ಪುರಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಇದ್ದು ಬಿದ್ದವರೆಲ್ಲ ಎದ್ದು ನಿಂತ ಪರಿಣಾಮ ಚುನಾವಣೆ ಗರಿಗೆದರಿದ್ದು ಕೈ-ಕಮಲ ಪಕ್ಷಗಳ ಆಕಾಂಕ್ಷಿಗಳ ಪೈಪೋಟಿ ಎರ್ಪಟ್ಟಿದ್ದು, ಕೈ-ಕಮಲ ಪಕ್ಷದವರಿಗೆ ತಲೆನೋವಾಗಿ ಪರಿಣಮಿಸಿದೆ.
ಕಳೆದ ಮೂರು ವರ್ಷಗಳಿಂದ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಕನಸು ಕಾಣುತ್ತಿದ್ದವರೆಲ್ಲರೂ ಕೈ-ಕಮಲ ಪಕ್ಷಗಳ ಟಿಕೇಟಿಗಾಗಿ ತೀವ್ರ ಸೆಣಸಾಟ ನಡೆಸಿದ್ದು, ಒಂದು ಭಾಗವಾದರೇ, ಮತ್ತೊಂದೆಡೆ ವಾರ್ಡ್ಗಳಿಂದ ಬಿಜೆಪಿ. ಕಾಂಗ್ರೆಸ್ ಪಕ್ಷಗಳ ಟಿಕೇಟಗಾಗಿ ಕನಿಷ್ಠ ಐದು ಆರು, ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು ಯಾರಿಗೆ ಟಿಕೇಟ್ ಎಂಬ ಪ್ರಶ್ನೆಗೆ ಕೈ-ಕಮಲ ನಾಯಕರು ಉತ್ತರ ಹುಡುಕುತ್ತಿರೋದು ಸುಳ್ಳೇನಿಲ್ಲ.
ಪುರಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ವಾರ್ಡವಾರು ಆಕಾಂಕ್ಷಿಗಳಿoದ ಅರ್ಜಿ ಪಡೆದುಕೊಳ್ಳಲು ಕೈ-ಕಮಲ ಒಂದುವಾರ ಸಮಯ ನಿಗದಿಗೊಳಿಸಿ ಅರ್ಜಿ ಸ್ವೀಕರಿಸಲು ಆರಂಭಿಸಿತ್ತು. ಪಕ್ಷಗಳು ನಿಗದಿಪಡಿಸಿದ ಸ್ಥಳ, ದಿನಾಂಕ, ಸೇರಿದಂತೆ ಎಲ್ಲ ದಾಖಲೆಗಳೊಂದಿಗೆ ಆಕಾಂಕ್ಷಿಗಳು  ಕೈ-ಕಮಲ ಪಕ್ಷಗಳ ಕಾರ್ಯಲಯಕ್ಕೆ ತೆರಳಿ ಅರ್ಜಿ ಸಲ್ಲಿಸಿದ್ದಾರೆ.
ಬಿಜೆಪಿ ಪಕ್ಷದ ನಿಷ್ಠಾವಂತರಿಗೆ,ಕಾರ್ಯಕರ್ತರಿಗೆ, ಪಟ್ಟಣದ ಅಭಿವೃದ್ದಿ ಹಿತಚಿಂತಕರಿಗೆ, ಪಕ್ಷದ ಶ್ರೇಯೋಭಿವೃದ್ಧಿ,ಪಕ್ಷದ ಜನಪರ ಹಿತಚಿಂತನೆಯನ್ನು ಈಡೇರಿಸುವಂತಹ ಅಭ್ಯರ್ಥಿಗೆ, ಪಟ್ಟಣದ ಕಟ್ಟ ಕಡೆಯ ವ್ಯಕ್ತಿ ಮನೆಬಾಗಿಲಿಗೆ ಪುರಸಭೆ ಆಡಳಿತ, ಎಂಬ ಚಿಂತನೆ ಹೊಂದಿರುವ ಅಭ್ಯರ್ಥಿಗೆ ಟಿಕೇಟ್ ಕೊಡುವ ಆಧ್ಯತೆ ನಿಟ್ಟಿನಲ್ಲಿ ಆಕಾಂಕ್ಷಿಗಳ ಪ್ರತಿ ಅಭ್ಯರ್ಥಿಯನ್ನು ಪ್ರತ್ಯೇಕವಾಗಿ ಸಂದರ್ಶನ ನಡೆಸಿದ್ದು, ಧಾ.ಜಿ. ಗ್ರಾ. ಬಿಜೆಪಿ ಪಕ್ಷದ ಅಧ್ಯಕ್ಷ ಬಸವರಾಜ ಕುಂದಗೋಳಮಠ,ಮಾಜಿ ಕ್ರೇಡಿಲ್ ಅಧ್ಯಕ್ಷ ಷಣ್ಮುಖ ಗುರಿಕಾರ, ಚುನಾವಣೆ ಉಸ್ತವಾರಿ ಈರಣ್ಣ ಜಡಿ,ಅಣ್ಣಿಗೇರಿ ತಾಲೂಕ ಬಿಜೆಪಿ ಘಟಕದ ಅಧ್ಯಕ್ಷ   ಶಿವಾನಂದ ಹೊಸಳ್ಳಿ, ಬಸವರಾಜ ಯಳವತ್ತಿ,ಪಕ್ಷದ ಮುಖಂಡರು ಚರ್ಚೆ ನಡೆಸುತ್ತಿದ್ದಾರೆ.
ಕೈ ಪಕ್ಷದಲ್ಲಿ ನಿಷ್ಠಾವಂತ ಚಾರಿತ್ರ್ಯವಂತರಿಗೆ ಪಕ್ಷದ ಸಿದ್ದಾಂತ ಬಧ್ಧತೆಯಳ್ಳವರಿಗೆ ಪುರಸಭೆ ಘನತೆ ಗೌರವ ಉಳಿಸಿಕೊಂಡು ಜನಪರ ಸೇವೆಯಲ್ಲಿ ಶ್ರೇಷ್ಠತೆ ಹೊಂದಿದವರಿಗೆ, ಜ್ಯಾತಾತೀತವಾಗಿ ಶ್ರೀಮಂತ-ಬಡವರೆನ್ನದೇ, ಪಕ್ಷದ ಎಲ್ಲಾ ಅಭ್ಯರ್ಥಿಗಳಿಗೆ ಮಾನ್ಯತೆ ಕೊಡುವ ನಿಟ್ಟಿನಲ್ಲಿ ಚರ್ಚೆ ಮಾಡಿ ಗೆಲವು ಸಾಧಿಸುವ ಅಭ್ಯರ್ಥಿಗಳಿಗೆ ಟಿಕೇಟ್ ಕೊಡುವಲ್ಲಿ ಅಣ್ಣಿಗೇರಿ ತಾಲೂಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಂಜುನಾಥ ಮಾಯಣ್ಣವರ, ಕೋರಕಮಿಟಿ ಪ್ರಮುಖರು, ತಾಲೂಕ ಮತ್ತು ,ಜಿಲ್ಲಾ.ಕಾಂಗ್ರೆಸ್.ಕಮಿಟಿ ಮುಖಂಡರು, ಚರ್ಚೆ ನಡೆಸುತ್ತಿದ್ದಾರೆ.
ನಾಮಪತ್ರ ಸಲ್ಲಿಸಲು ಡಿ.15 ಕೊನೆಯ ದಿನವಾಗಿದ್ದರಿಂದ ಕೈ-ಕಮಲ ನಾಯಕರು ತಮ್ಮ ಅಭ್ಯರ್ಥಿಗಳ ಆಯ್ಕೆ ಘೋಷಣೆ ಮಾಡಬೇಕಾದ ಅನಿವಾರ್ಯತೆ ಇದೆ. ಬೇಗನೆ ಘೋಷಣೆ ಮಾಡಿದರೆ ಟಿಕೇಟ್ ಸಿಗದ ಆಕಾಂಕ್ಷಿಗಳು ಪಕ್ಷಾಂತರ, ಬಂಡುಕೋರ,ಅಭ್ಯರ್ಥಿಗಳಾಗಿ ಮುನಿಸಿಕೊಂಡರೆ ಕಷ್ಟ ಎಂಬ ಚಿಂತನೆಯಿoದ ಎರಡು ಪಕ್ಷಗಳು ನಾಮಪತ್ರ ಸಲ್ಲಿಕೆಯ ಕೊನೆಯ ದಿನದ ಮುನ್ನಾದಿನ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಬಗ್ಗೆ ಚರ್ಚೆಯಾಗುತಿವೆ.
ಪಕ್ಷದ ಅಭ್ಯರ್ಥಿಗಳನ್ನು ಘೋಷಣೆ ಮಾಡುವಾಗ ಬಹಳಷ್ಟು ಜವಾಬ್ದಾರಿ,ಹೊಣೆಗಾರಿಕೆ,ಟೆನ್ಷನ್ ಕೈ-ಕಮಲ ನಾಯಕರಿಗೆ ಎದುರಾಗಿದ್ದು,ಪುರಸಭೆ ಚುನಾವಣೆ ಆಡಳಿತ ಚುಕ್ಕಾಣಿ ಹಿಡಿದುಕೊಳ್ಳಲು ಕೈ-ಕಮಲ ಪಕ್ಷಗಳು ಗೆಲ್ಲುವ ಕುದುರೆಗಳಿಗೆ ಮಣಿ ಹಾಕುವ ಸಂಭವ ಹೆಚ್ಚಿದೆ. ಕೈ- ಪಕ್ಷದಲ್ಲಿ 5 ಪ್ರಮುಖರನ್ನೊಳಗೊಂಡು ಹಾಗೂ ಕಮಲ ಪಕ್ಷದಲ್ಲಿ 9 ಪ್ರಮುಖರನ್ನೊಳಗೊಂಡು  ಕೋರ ಕಮಿಟಿ ರಚನೆ ಮಾಡಿದ್ದು, ಕೋರ ಕಮಿಟಿ ಆಯ್ಕೆ ಮಾಡುವ ಅಭ್ಯರ್ಥಿಗಳನ್ನು ಅಳೆದು ತೂಗಿ ಅಂತಿಮ ನಿರ್ಧಾರ ತೆಗೆದುಕೊಂಡು ಆಯ್ಕೆ ಮಾಡಿದ ಅಭ್ಯರ್ಥಿಗಳೇ ಅಂತಿಮವೆoದು ಪಕ್ಷಗಳಲ್ಲಿ ಕೇಳಿಬರುತಿವೆ.
ಕೈ-ಕಮಲದಲ್ಲಿ ಹೆಚ್ಚಿನ ಆಕಾಂಕ್ಷಿಗಳು ಟಕೇಟಿಗೆ ಅರ್ಜಿಸಲ್ಲಿಸಿದ ಪರಿಣಾಮ ಚುನಾವಣೆ ತುರುಸುಗೊಂಡಿದೆ. ತಮ್ಮ ತಮ್ಮ ನಾಯಕರಿಂದ ಒತ್ತಡ ತರುವಲ್ಲಿ ಪ್ರಯತ್ನಪಡುತ್ತಿದ್ದರಿಂದ ಯಾರಿಗೆ ಟಿಕೇಟ್ ನೀಡಬೇಕೆಂದು ಕೈ ಕಮಲ ನಾಯಕರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಜೆಡಿಎಸ್. ಅಮ್ ಆದ್ಮಿಪಕ್ಷದಲ್ಲಿ ಟಿಕೇಟ್ ಅಕಾಂಕ್ಷಿಗಳ ಪ್ರಮಾಣ ಕಡಿಮೆಯಿದ್ದರೂ ಕಳೆದ ಬಾರಿ 10 ಸ್ಥಾನಗೆದ್ದ ಜೆಡಿಎಸ್ ಪುರಸಭೆ ಆಡಳಿತ ಚುಕ್ಕಾಣಿ ಹಿಡಿದಿತ್ತು. ಕಳೆದ ಚುನಾವಣೆಗಿಂತಲೂ ಈ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ತವಕದಲ್ಲಿ ಸೂಕ್ತ ಅಭ್ಯರ್ಥಿಗಳಿಗೆ ಮಣಿ ಹಾಕುವಲ್ಲಿ ರಾಜಕೀಯ ತಂತ್ರಗಾರಿಕೆ ಬಳಿಸಿ,ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ, ಅಣ್ಣಿಗೇರಿ ತಾಲೂಕ ಜೆಡಿಎಸ್ ಅಧ್ಯಕ್ಷ ಪ್ರದೀಪ ಲೆಂಕಿನಗೌಡ್ರ, ಪಕ್ಷಗಳ ಮುಖಂಡರೊoದಿಗೆ  ಪಕ್ಷಗಳ ಗೆಲವು ಸಾಧಿಸುವಲ್ಲಿ ಚರ್ಚೆ ನಡೆಸುತ್ತಿದ್ದಾರೆ.
ಅಮ್ ಆದ್ಮಿ ಪಕ್ಷ ಪುರಸಭೆಯಲ್ಲಿ ಭ್ರಷ್ಠಾಚಾರ ರಹಿತ ದೆಹಲಿ ಆಡಳಿತ ತರುವ ನಿಟ್ಟಿನಲ್ಲಿ ಖಾತೆ ತೆರೆಯಲು ಕನಿಷ್ಟ 4-5 ಸ್ಥಾನಗಳ ಗೆಲುವಿಗೆ  ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿ ಆಮ್ ಆದ್ಮಿ ಪಕ್ಷದ ಧಾ. ಜಿಲ್ಲಾ. ಅಧ್ಯಕ್ಷ ಸಂತೋಷ ನರಗುಂದ,ಚುನಾವಣೆ ಕೋರಿ ಕಮಿಟಿ  ಮುಖಂಡರು, ತಾಲೂಕ ಅಮ್ ಆದ್ಮಿ ಪಕ್ಷದ ಅಧ್ಯಕ್ಷ ಅಡಿವೆಪ್ಪ ಸೈದಾಪೂರ ಚರ್ಚೆ ನಡೆಸಿದ್ದಾರೆ.

Related posts

ಹುಬ್ಬಳ್ಳಿಯಲ್ಲಿ ಅಕ್ರಮ ಮದ್ಯದ ಅಮಲು!

eNewsLand Team

ನೀತಿ ನಿಯಮಗಳ ಆಡಳಿತ ಬೇಕು: ಶಾಸಕ ನಿಂಬಣ್ಣವರ

eNEWS LAND Team

ಮಾನವೀಯತೆ ಮರೆತು ಲಂಚ ಕೇಳಿದ್ದವರು ಎಸಿಬಿ ಕೆಡ್ಡಾಕ್ಕೆ ಬಿದ್ದರು! ಇಲ್ಲಿದೆ ಹುಬ್ಬಳ್ಳಿ ಭ್ರಷ್ಟಿಗಳ ಕಥೆ

eNewsLand Team