27 C
Hubli
ಡಿಸೆಂಬರ್ 7, 2023
eNews Land
ಸುದ್ದಿ

ಅಂಬಿರ ಚೌಡಯ್ಯ ಪೀಠಕ್ಕೆ ರೂ.80ಸಾವಿರ ಸಾಮಾಗ್ರಿಗಳ ಕೊಡುಗೆ

ಇಎನ್ಎಲ್ ನವಲಗುಂದ : ಸುಕ್ಷೇತ್ರ ನರಸೀಪುರದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ನಿರಂತರ ದಾಸೋಹಕ್ಕಾಗಿ ಅವಶ್ಯವಿರುವಂತಹ ರೂ.80 ಸಾವಿರ ಅಡುಗೆ ಸಾಮಾಗ್ರಿಗಳನ್ನು ತಾ.ಪಂ ಮಾಜಿ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದ ಜಿಲ್ಲಾ ಗೌರವಾಧ್ಯಕ್ಷ ನಿಂಗಪ್ಪ ಬಾರಕೇರ ತಮ್ಮ ಭಕ್ತಿ ಸೇವೆ ಸಲ್ಲಿಸಿದ್ದಾರೆ.

ಜಿಲ್ಲಾ ಗೌರವಾಧ್ಯಕ್ಷ ನಿಂಗಪ್ಪ ಬಾರಕೇರ ಮಾತನಾಡಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠಕ್ಕೆ ಬರುವಂತಹ ಭಕ್ತರಿಗೆ ಅನುಕೂಲವಾಗಲು ನನ್ನ ಭಕ್ತಿಯಿಂದ ಸೇವೆ ಸಲ್ಲಿಸಿದ್ದೇನೆ. ನಮ್ಮ ಸಮೂದಾಯದ ಹಿತ ಅಭಿವೃದ್ದಿ ಹಾಗೂ ಸಾಮಾಜಿಕ ರಂಗದಲ್ಲಿ ಶ್ರಮಿಸಲು ತಮ್ಮ ಆಶೀರ್ವಾದ ಸದಾ ನನ್ನ ಮೇಲೆ ಇರಲಿ ಎಂದು ಹೇಳಿದರು.
ತಾಲೂಕಾ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಹಾಗೂ ಗಂಗಾಮತಸ್ಥರ ಸಮಾಜದ ಪ್ರಮುಖರ ಜೊತೆ ಗುರುಪೀಠಕ್ಕೆ ತೆರಳಿ ಅಡುಗೆ ಬಾಂಡೆ ಸಾಮಗ್ರಿಗಳನ್ನು ನೀಡಿ ತಾಲೂಕಾ ಸಮಾಜದ ಅಭಿವೃದ್ದಿ ಕೈಗೊಳ್ಳಲು ಗುರುಪೀಠದ ಮಹಾಸ್ವಾಮೀಜಿಗಳು ಸಲಹೆ ಸೂಚನೆ ನೀಡಬೇಕೆಂದು ಕೇಳಿಕೊಂಡರು.

ಈ ಸಂದರ್ಭದಲ್ಲಿ ಗಂಗಾಮತಸ್ಥರ ಸಂಘದ ಜಿಲ್ಲಾ ಅಧ್ಯಕ್ಷ ಗಣೇಶ ಆರ್. ಬಾರಕೇರ, ಸಮಾಜದ ಮುಖಂಡರಾದ ಅಪ್ಪಣ್ಣ ಹಿರಗಣ್ಣವರ, ಮಲ್ಲೇಶ ವಾಲಿಕಾರ, ಬಸಲಿಂಗಪ್ಪ ತೊರಗಲ್ಲ, ಸೋಮಣ್ಣ ಬರದೂರ, ಫಕ್ಕೀರಪ್ಪ ಗಂಗಣ್ಣವರ, ನಿಂಗಪ್ಪ ಬಾರಕೇರ(ಯಮನೂರ), ಫಕ್ಕೀರಪ್ಪ ನೀಲಣ್ಣವರ, ಮುತ್ತಪ್ಪ ಬಾರಕೇರ ಸಮಾಜದವರು ಉಪಸ್ಥಿತರಿದ್ದರು.

Related posts

ಧಾರವಾಡ ವಿಪ: ಯಾವ ಸುತ್ತಲ್ಲಿ ಯಾರಿಗೆ ಎಷ್ಟು ಮತ? ನೋಡಿ

eNEWS LAND Team

ಸಾಕ್ಷರತಾ ಕಾರ್ಯಕ್ರಮಗಳ ಅನುಷ್ಠಾನ: ಸಾಮೂಹಿಕ ಜವಾಬ್ದಾರಿ

eNEWS LAND Team

ಮದುವೆಯಾಗಲ್ಲ ಎಂದ ಯುವಕಗೆ ಆ್ಯಸಿಡ್ ಎರಚಿದ ಆಂಟಿ!

eNewsLand Team