34 C
Hubli
ಮಾರ್ಚ್ 23, 2023
eNews Land
ಸುದ್ದಿ

ಪುರಸಭೆ ಚುನಾವಣೆ ೨೩ ವಾರ್ಡಗಳ ಅಖಾಡಕ್ಕೆ ಇಳಿದ ಅಭ್ಯರ್ಥಿಗಳು

Listen to this article
ಇಎನ್ಎಲ್ ಅಣ್ಣಿಗೇರಿ: ಪಟ್ಟಣದ ೨೩ ವಾರ್ಡಗಳ ಪುರಸಭೆ ಚುನಾವಣೆ ಡಿ.೨೭ ರಂದು ಜರುಗಲಿದೆ. ಡಿ..೧೫ ರಂದು ನಾಮಪತ್ರ ಸಲ್ಲಿಸಿದವರು ೧೧೩ ಅಭ್ಯರ್ಥಿಗಳು, ಡಿ.೧೬ ರಂದು ನಾಮಪತ್ರ ಪರಿಶೀಲನೆ ಸಂದರ್ಭದಲ್ಲಿ ೨೯ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡ ಪರಿಣಾಮ ೮೪ ಅಭ್ಯರ್ಥಿಗಳು ಚುನಾವಣೆ ಕಣದಲ್ಲಿ ಉಳಿದಿದ್ದರು.
ಡಿ.೧೮ ರಂದು ನಾಮಪತ್ರ ಹಿಂತೆಗೆದುಕೊoಡವರು ೧೦ ಒಟ್ಟು ೭೪ ಅಭ್ಯರ್ಥಿಗಳು  ಚುನಾವಣೆ ಅಖಾಡಕ್ಕೆ  ಸನ್ನದ್ದರಾದ ಹಿನ್ನಲೆಯಲ್ಲಿ ಕೈ-ಕಮಲ ನೇರ ಹಣಾಹಣಿ ಸ್ಪರ್ಧೆ ಎರ್ಪಟ್ಟಿದ್ದು, ತುರುಸಿನ ಪ್ರಚಾರ, ಅಭ್ಯರ್ಥಿ ಗೆಲುವಿಗೆ ರಾಜಕೀಯ ಷಡ್ಯಂತ್ರ ತಂತ್ರಗಾರಿಕೆಯಲ್ಲಿ ತೊಡಗಿರೋದು ಮೆಲ್ನೊಟಕ್ಕೆ ಕಂಡುಬರುತಿದೆ.
ಇತ್ತ ಪುರಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಡಿ.೧ ರಿಂದ ಡಿ.೧೫ ರ ತನಕ ಚುನಾವಣೆ ಕಣದಲ್ಲಿ ಸ್ಫರ್ಧಿಸಲು ೧೪೫ ಅಭ್ಯರ್ಥಿಗಳು ಪುರಸಭೆಯಲ್ಲಿ ಟ್ಯಾಕ್ಸ್ ತುಂಬಿ ಬೇಬಾಕಿ ಪ್ರಮಾಣ ಪತ್ರ ಪಡೆದರು. ಮೂಲ ಕಂದಾಯ ಟ್ಯಾಕ್ಸ್ ೭ ಲಕ್ಷ ೨೧ ಸಾವಿರ ರೂಗಳು, ನೀರಿನ ಕರ ೪ ಲಕ್ಷ ೮ ಸಾವಿರ ರೂಗಳು, ಲೈಸನ್ಸ್ ಟ್ಯಾಕ್ಸ ೧೪ ಸಾವಿರ ರೂಗಳು ಬಂದಿದೆ. ಒಟ್ಟು ೧೧ ಲಕ್ಷ ೪೩ ಸಾವಿರ ೬೮೫ ರೂಗಳು ಪುರಸಭೆಗೆ ಕಂದಾಯ ವಸೂಲಿ ಲಭಿಸಿದೆ.
ಪುರಸಭೆ ೨೩ ವಾರ್ಡಗಳಲ್ಲಿ ಕೈ-ಕಮಲ ಪಕ್ಷದ ತುರುಸಿನ  ಪ್ರಚಾರ, ಗೆಲವು-ಸೋಲಿಗೆ, ಕೊಕ್ಕೆ ಹಾಕಿ, ಚುನಾವಣೆ ಕಾವು ಹೆಚ್ಚುವ ಸಂಭವವಿದೆ. ಜೆಡಿಎಸ್,ಪಕ್ಷೇತರ ಅಭ್ಯರ್ಥಿಗಳು ಕಠಿಣ ಸ್ಪರ್ಧೆ ಕೊಡುವುದರಲ್ಲಿ ಸಂದೇಹವಿಲ್ಲ.
ಕಳೆದ ಬಾರಿ ಚುನಾವಣೆಯಲ್ಲಿ ಆಯ್ಕೆಯಾದ ೮ ಅಭ್ಯರ್ಥಿಗಳು ಚುನಾವಣೆ ಅಖಾಡಕ್ಕೆ ದುಮಿಕ್ಕಿದ್ದು, ಮತದಾರರ ಅಂತಿಮ ಒಲವಿನ ತಿರ್ಮಾನದ ಬಳಿಕ ಹಳಬರ ರಾಜಕೀಯ ಭವಿಷ್ಯಕ್ಕೆ ಹೊರಬಿಳುವ ಸಾಧ್ಯತೆಯಿದೆ.ಇನ್ನುಳಿದಂತೆ ೧೫ ಹೊಸಬರು ಪುರಸಭೆ ಚುನಾವಣೆ ಆಖಾಡಕ್ಕೆ ಸ್ಪರ್ಧಿಸಿ,ರಾಜಕೀಯ ಭವಿಷ್ಯ ರೂಪಿಸಿಕೊಳ್ಳುವರೋ ಇಲ್ಲವೋ ಎಂಬುದನ್ನು ಕಾಯ್ದ ನೋಡಬೇಕಿದೆ.
ಈಗಾಗಲೇ ಪುರಸಭೆ ಚುನಾವಣೆ ಅಖಾಡಕ್ಕೆ  ಕೈಪಕ್ಷ-೨೩, ಕಮಲಪಕ್ಷ -೨೩, ತೆನೆಪಕ್ಷ-೧೧, ಪಕ್ಷೇತರ ಅಭ್ಯರ್ಥಿಗಳು-೧೫,ಜನತಾ ಪಕ್ಷ-೧,ಅಮ್ ಆದ್ಮಿ ಪಕ್ಷ-೧,ಅಭ್ಯರ್ಥಿಗಳು  ಸ್ಪರ್ಧಿಸಿದ್ದರಿಂದ ತಮ್ಮ ವಾರ್ಡಿನಲ್ಲಿ ಕಾರ್ಯಲಯ ತೆರೆದು, ಗುರು-ಹಿರಿಯರು, ಪಕ್ಷದ ಕಾರ್ಯಕರ್ತರು, ಮಹಿಳೆಯರು, ಯವಕರು, ಪಕ್ಷದ ಮುಖಂಡರೊoದಿಗೆ  ತುರುಸಿನ ಪ್ರಚಾರ ಕೈಗೊಂಡಿರೋದು ಪುರಸಭೆ ೨೩ ವಾರ್ಡಗಳಲ್ಲಿ ಕಂಡುಬರುತಿದೆ.

Related posts

ಹೊಸ ನಾಯಕತ್ವದಲ್ಲಿ ಕಮಾಲ್ ಮಾಡುತ್ತಾ ಆರ್’ಸಿಬಿ??

eNewsLand Team

ಮದಗಜ: ಭರ್ಜರಿ ಟ್ರೇಲರ್,‌‌ ಶ್ರೀಮುರುಳಿ ಹೊಸ ಅವತಾರ, ಹಾಟ್ ಆಶಿಕಾ ಇಲ್ಲಿ ಹಳ್ಳಿ ಬೆಡಗಿ!

eNewsLand Team

ಜನಸಂಖ್ಯೆ ನಿಯಂತ್ರಣ ಎಲ್ಲರ ಹೊಣೆ: ತಹಸೀಲ್ದಾರ ಅಮಾಸಿ

eNewsLand Team