ಇಎನ್ಎಲ್ ಅಣ್ಣಿಗೇರಿ: ಈ ಬಾರಿಯ ಅಣ್ಣಿಗೇರಿ ಪುರಸಭೆ ಚುನಾವಣೆಯಲ್ಲಿ ಆನ್ ಆದ್ಮಿ ಎಲ್ಲಾ ಕ್ಷೇತ್ರದಲ್ಲಿ ಸ್ಪರ್ಧಿಸಲಿದೆ ಎಂದು ಪಕ್ಷದ ಜಿಲ್ಲಾ ಅಧ್ಯಕ್ಷ ಸಂತೋಷ ನರಗುಂದ ಹೇಳಿದರು.
ಸ್ಥಳೀಯ ಕಾರ್ಯನಿರತ ಪತ್ರಿಕಾ ಕಾರ್ಯಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಇನ್ನೀತರ ಪಕ್ಷಗಳು ತಮ್ಮ ಸ್ವಹಿತಾಶಕ್ತಿ, ಕುಟುಂಬ ರಾಜಕಾರಣಕ್ಕೆ ಒತ್ತು ನೀಡಿವೆ. ಅಭಿವೃದ್ಧಿ ಮರೆತಿವೆ. ಕೊಲೆ, ಸುಲಿಗೆ, ಮೋಸ, ಅಪವಾದ , ಕೋಮುವಾದ, ಜಾತಿವಾದ, ವಂಚನೆ, ಅತ್ಯಾಚಾರ, ಭ್ರಷ್ಟಾಚಾರ,ಅನೀತಿ, ಅಧರ್ಮದ ಹಾದಿಯಲ್ಲಿ ರಾಷ್ಟ್ರ ರಾಜಕಾರಣದಿಂದ ಜನಪರ ಆಡಳಿತವಿಲ್ಲದೇ, ಅಭಿವೃದ್ಧಿ ಕಾಣದೇ, ದೇಶದ ಪ್ರಗತಿ, ಕುಂಠಿತಗೊಂಡಿದ್ದು ಶೋಚನೀಯ ಎಂದರು.
ಪಕ್ಷದ ರಾಷ್ಟ್ರೀಯ ಸದಸ್ಯ ಬಸವರಾಜ ಮುದಿಗೌಡರ ಮಾತನಾಡಿ, ಜನಪರ ಆಡಳಿತ, ಪಾರದರ್ಶಕ, ಭ್ರಷ್ಟಾಚಾರ ರಹಿತ, ಉತ್ತಮ ಜೀವನ ರೂಪಿಸುವಲ್ಲಿ ದೆಹಲಿ ಮಾದರಿ ಆಡಳಿತವನ್ನು ಎಲ್ಲೆಡೆ ತರಬೇಕಿದೆ. ರಾಷ್ಟ್ರ, ರಾಜ್ಯ, ಜಿಲ್ಲೆ, ತಾಲೂಕು, ತಾಪಂ, ಜಿಪಂ ನಗರ ಪಟ್ಟಣ ಪ್ರದೇಶಗಳಲ್ಲಿ ಪಕ್ಷವನ್ನು ತಳಮಟ್ಟದಿಂದ ಗಟ್ಟಿಗೊಳಿಸುವ ಹಿನ್ನೆಲೆಯಲ್ಲಿ ಸಂಘಟನೆ ಮಾಡಲಾಗುತ್ತಿದೆ.
ಸ್ಥಳೀಯ ಚುನಾವಣೆಗಳಲ್ಲಿ ಅಭ್ಯರ್ಥಿಗಳನ್ನು ಅಣ್ಣಿಗೇರಿ ಪುರಸಭೆಯ 23 ವಾರ್ಡ್ ಗಳಿಗೆ ಚುನಾವಣಾ ಕಣಕ್ಕೆ ಇಳಿಸಿ ಗೆಲವು ಸಾಧಿಸುವಲ್ಲಿ ಅಮ್ ಆದ್ಮಿ ಪಕ್ಷ ಸನ್ನದ್ಧವಾಗಿದೆ ಎಂದರು.
ನವಲಗುಂದ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಅಧ್ಯಕ್ಷ ಅಡಿವೆಪ್ಪ ಸೈದಾಪೂರ, ಪಟ್ಟಣದ ಸಮಗ್ರ ಅಭಿವೃದ್ಧಿಗೆ ಆಮ್ ಆದ್ಮಿ ಪಕ್ಷದ ಸಿದ್ದಾಂತದಬೊ್ರಕಾರ ಪ್ರಣಾಳಿಕೆ ನೀಡಿ ಪ್ರತಿ ವಾರ್ಡಿನ ಪ್ರಗತಿ ಜನಪರ ಆಡಳಿತಕ್ಕೆ ಮುಂದಾಗುತ್ತೇವೆ ಎಂದರು.
ಅನಂತಕುಮಾರ ಬುಗಡಿ, ಮಲ್ಲಪ್ಪ ತಡಸದ, ಮಲ್ಲಿಕಾರ್ಜುನಯ್ಯ ಹಿರೇಮಠ, ಹಾಗೂ ಪಕ್ಷದ ಮುಖಂಡರು ಇದ್ದರು.