27 C
Hubli
ಮೇ 25, 2024
eNews Land
ಜಿಲ್ಲೆ ಸುದ್ದಿ

ಮಿನಿ ಉದ್ಯೋಗ ಮೇಳ: ನವನಗರ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ

ಇಎನ್ಎಲ್ ಹುಬ್ಬಳ್ಳಿ: ನವನಗರ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ, ದಿನಾಂಕ: 23.06.2023 ರಂದು ಮಿನಿ ಉದ್ಯೋಗ ಮೇಳವನ್ನು ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 02:00 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದ್ದು. ಇದರಲ್ಲಿ 7 ರಿಂದ 9 ಖಾಸಗಿ ವಲಯದಲ್ಲಿ ಉದ್ಯೋಗದಾತರುಗಳು ಭಾಗವಹಿಸಿ ಸದರಿ ಸಂಸ್ಥೆಯಲ್ಲಿ ವಿವಿಧ ಖಾಲಿ ಹುದ್ದೆಗಳಿಗೆ ಅಭ್ಯರ್ಥಿಗಳ ಸಂದರ್ಶನ ನಡೆಸಲಿದ್ದಾರೆ. ಮಿನಿ ಉದ್ಯೋಗ ಮೇಳಕ್ಕೆ ಭಾಗವಹಿಸುವ ಅಭ್ಯರ್ಥಿಗಳು ಈ ಕೆಳಕಂಡ  ವಿದ್ಯಾರ್ಹತೆ ಹೊಂದಿರಬೇಕು ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಡಿಪ್ಲೋಮಾ (ಎಲೇಕ್ಟ್ರಾನಿಕ್ಸ್ & ಕಮ್ಯೂನಿಕೇಶನ್), (ಎಲೇಕ್ಟ್ರಾನಿಕ್ಸ್ & ಎಲೆಕ್ಟ್ರೀಕಲ್), ಹಾಗೂ ಯಾವುದೇ ಪದವೀಧರ ಮತ್ತು ಎಂ.ಕಾಂ ಹಾಗೂ ಎಂ.ಬಿ.ಎ ಸ್ನಾತಕೋತ್ತರ ಪದವಿ ಹೊಂದಿದ ಅಭ್ಯರ್ಥಿಗಳು 18 ರಿಂದ 35 ವಯೋಮಿತಿ ಹೊಂದಿದವರು  ಸಂದರ್ಶನಕ್ಕೆ ಹಾಜರಾಗಬಹುದು. ಆದ್ದರಿಂದ ಸದರಿ ಮೇಳದಲ್ಲಿ ಭಾಗವಹಿಸಲು ಅರ್ಹ ಅಭ್ಯರ್ಥಿಗಳು ತಮ್ಮ ಆಧಾರಕಾರ್ಡ, ಬಯೋಡಾಟಾ (ರೆಸ್ಯೂಮ) ಗಳ ಹೆಚ್ಚಿನ ಪ್ರತಿಗಳೊಂದಿಗೆ (ಕನಿಷ್ಟ 5 ಪ್ರತಿಗಳು) ತಮ್ಮ ಸ್ವಂತ ಖರ್ಚಿನಲ್ಲಿ ದಿನಾಂಕ: 23.06.2023 ರ ಮುಂಜಾನೆ 10-00 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕೆಂದ್ರ, ಕುವೆಂಪು ರಸ್ತೆ ನವನಗರ ಹುಬ್ಬಳ್ಳಿಯಲ್ಲಿ ಹಾಜರಾಗಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0836-2225288. 9480869880, 8453208555, 8197440155 ನ್ನು ಬೆಳಿಗ್ಗೆ 10 ರಿಂದ ಸಾಯಂಕಾಲ 05.30 ರ ವರೆಗೆ ಸಂಪರ್ಕಿಸಲು ತಿಳಿಸಲಾಗಿದೆ.

ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಈ ಕೆಳಗೆ ನಮೂದಿಸಿರುವ ವೆಬ್ ಸೈಟ್ ಲಿಂಕ್ ನೊಂದಿಗೆ https://surveyheart.com/form/643ce5a6bc01c4083b072455  ಮುಖಾಂತರ ನೋಂದಣಿ ಮಾಡಿಕೊಂಡು ಹಾಜರಾಗತಕ್ಕದ್ದು. ಎಂದು ಹುಬ್ಬಳ್ಳಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಸಹಾಯಕ ನಿರ್ದೇಶಕರು(ಪ್ರ) ಪ್ರಕಟನೆ ತಿಳಿಸಿದ್ದಾರೆ.

ENL Hubli: A Mini Job Fair was organized at Navnagar District Employment Exchange Office on 23.06.2023 from 10:00 AM to 02:00 PM.  In this, 7 to 9 private sector employers will participate and interview candidates for various vacancies in the said organization.  Candidates participating in the mini job fair should have the following qualifications SSLC, PUC, ITI, Diploma (Electronics & Communication), (Electronics & Electrical), and any Graduate and M.Com and  Candidates with MBA post graduation in the age group of 18 to 35 can appear for the interview.  Therefore, eligible candidates to participate in the said fair are informed to appear at District Employment Exchange Centre, Kuvempu Road Navnagar Hubli at their own expense on Date: 23.06.2023 at 10-00 AM along with their Aadhaar Card, Biodata (Resume) copies (minimum 5 copies).  For more information contact number 0836-2225288.  9480869880, 8453208555, 8197440155 are advised to contact from 10 AM to 05.30 PM.

Candidates participating in the mini job fair should register and attend through the below mentioned website link https://surveyheart.com/form/643ce5a6bc01c4083b072455.  Hubli District Employment Center Assistant Director announced.

Related posts

ಬ್ಲೈಂಡ್ ಲವ್; ಮಾತುಕತೆಗೆ ಕರೆದು ಯುವಕನ ಮರ್ಡರ್ ಮಾಡಿದ್ರು.‌!! ಘೋರ ವಿಧಿಬರಹ

eNewsLand Team

ಬ್ಯಾಡ್ ಬ್ಯಾಂಕ್ ಏನು? ಎತ್ತ? ಇಲ್ಲಿದೆ ಮಾಹಿತಿ

eNEWS LAND Team

ಹುಬ್ಬಳ್ಳಿಯ ಐತಿಹಾಸಿಕ ಚಂದ್ರಮೌಳೇಶ್ವರ‌ ದೇವಸ್ಥಾನ ಇನ್ನಾದ್ರೂ ಅಭಿವೃದ್ಧಿ ಆಗತ್ತಾ?

eNewsLand Team