26 C
Hubli
ಮೇ 25, 2024
eNews Land
ಸುದ್ದಿ

ಮಹಾವೀರ ಲಿಂಬ್ ಸೆಂಟರ್’ನಲ್ಲಿ ಕೃತಕ ಕೈ ಕಾಲುಗಳ ಜೋಡಣೆಯಲ್ಲಿ ಭಾಗಿ : ಮಹಾಪೌರ ಈರೇಶ ಅಂಚಟಗೇರಿ

ಇಎನ್ಎಲ್ ಹುಬ್ಬಳ್ಳಿ: ಕಳೆದ 25 ವರ್ಷಗಳಿಂದ, ಕರ್ನಾಟಕದಾದ್ಯಂತ ವಿಕಲಚೇತನರಿಗೆ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯಾದ ಮಹಾವೀರ ಲಿಂಬ್ ಸೆಂಟರ್ ಗೆ ಇಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಹಾಪೌರ ಈರೇಶ ಅಂಚಟಗೇರಿ ರವರು ಭೇಟಿ ನೀಡಿ, ಅನೇಕ ಕಾರಣಗಳಿಂದ ತಮ್ಮ ಕಾಲುಗಳನ್ನು ಕಳೆದುಕೊಂಡ ರೋಗಿಗಳಿಗೆ ಮಹಾವೀರ ಲಿಂಬ್ ಸೆಂಟರ್ ನವರು ರಾಜ್ಯದ ವಿವಿಧ ಜಿಲ್ಲೆಗಳಿಂದ  ಬಂದ ವಿಕಲಚೇತನರಿಗೆ ಆಯೋಜಿಸಿದ ಉಚಿತ ಕೃತಕ ಕಾಲುಗಳ ಜೋಡಣಾ ಶಿಬಿರದಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ಮಾತನಾಡಿದ ಮಹಾಪೌರರು ಬಡವರಿಗೆ, ಹಣಕಾಸಿನ ವ್ಯವಸ್ಥೆ ಇಲ್ಲದವರಿಗೆ ಈ ತರಹದ ಶಿಬಿರಗಳನ್ನು ಮಾಡಿ, ಉಚಿತವಾಗಿ ಕೃತಕ ಕೈ ಕಾಲುಗಳ ಜೋಡಣೆ ಮಾಡಿ, ಸಹಾಯ ಹಸ್ತ ನೀಡುತ್ತಿರುವ ಶ್ರೀ ಮಹೇಂದ್ರ ಶಿಂಘಿ ರವರಿಗೆ ಅಭಿನಂದನೆಗಳನ್ನು ತಿಳಿಸಿದರು. ಹಾಗೂ ಈ ಅಭೂತಪೂರ್ವ ಕಾರ್ಯದಲ್ಲಿ ಕಾರ್ಯನಿರ್ವಹಿಸಲು ವಿಕಲಚೇತನರನ್ನು ಸಹ ತಮ್ಮೊಂದಿಗೆ ಸೇರಿಸಿಕೊಂಡು ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಅವರ ಈ ಸೇವೆಯಿಂದ ಇನ್ನೂ ಹೆಚ್ಚಿನ ವಿಕಲಚೇತನರಿಗೆ ಸಹಾಯವಾಗಲಿ ಹಾಗೂ ಅವರ ಈ ಒಳ್ಳೆಯ ಕಾರ್ಯಕ್ಕೆ ಮಹಾಪೌರರು ಹಾಗೂ ಮಹಾನಗರ ಪಾಲಿಕೆಯು ಸದೈವ ತಮ್ಮೊಂದಿಗೆ ಇರುತ್ತದೆ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶ್ರೀ ಸುಭಾಷ್ ಡಾಂಕಾ ರವರು, ಶ್ರೀ ಗೌತಮ ಬರವೇಚಾ ರವರು, ಹಾಗೂ ಮಹಾವೀರ ಲಿಂಬ್ ನ ಪದಾಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Related posts

ಇಂದು ಬಿಎಫ್‌ಸಿ ನಾರ್ತ್ ಈಸ್ಟ್ ಯುನೈಟೆಡ್ ಹಣಾಹಣಿ

eNewsLand Team

ಸರ್ಕಾರಿ ನೌಕರರ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಶೀಘ್ರ ಚಾಲನೆ : ಮುಖ್ಯಮಂತ್ರಿ ಬೊಮ್ಮಾಯಿ

eNewsLand Team

ನುಂಗಣ್ಣ ಕ್ಷೇತ್ರದ ಶಾಸಕರಾದರೆ ಹಾನಗಲ್ಲ ಉಳಿತದಾ ? ಸಿದ್ರಾಮಯ್ಯ ಪ್ರಶ್ನೆ …?

eNEWS LAND Team