21 C
Hubli
ನವೆಂಬರ್ 12, 2024
eNews Land
ದೇಶ

ಜಾಗತಿಕ ಯುದ್ಧ ವಿಧಾನಕ್ಕೆ ತಕ್ಕಂತೆ ಬದಲಾಗಬೇಕಿದೆ: ಪ್ರಧಾನಿ ಮೋದಿ

ಜಾಗತಿಕ ಯುದ್ಧ ವಿಧಾನಕ್ಕೆ ತಕ್ಕಂತೆ ಬದಲಾಗಬೇಕಿದೆ: ಪ್ರಧಾನಿ ಮೋದಿ

ಇಎನ್ಎಲ್ ಬ್ಯೂರೋ

ಶ್ರೀನಗರ:ಜಗತ್ತಿನಲ್ಲಿ ಬದಲಾವಣೆ ಆಗುತ್ತಿರುವ ಯುದ್ಧ ವಿಧಾನಕ್ಕೆ ತಕ್ಕಂತೆ ಭಾರತ ತನ್ನ ಮಿಲಿಟರಿ ವ್ಯವಸ್ಥೆಯನ್ನು ನವೀಕರಣ ಮಾಡಿಕೊಳ್ಳಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಮತ ವ್ಯಕ್ತಪಡಿಸಿದರು.

ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ಭಾಗ ನೌಶೇರ ಸೆಕ್ಟರ್‌ಗೆ ಗುರುವಾರ ಯೋಧರೊಂದಿಗೆ ದೀಪಾವಳಿ ಆಚರಿಸಲು ಆಗಮಿಸಿದ ಅವರು ಮಾತನಾಡಿದರು.

ನಾನು ಪ್ರತಿ ವರ್ಷ ದೀಪಾವಳಿಯನ್ನು ಕುಟುಂಬ ಸದಸ್ಯರೊಂದಿಗೆ ಕಳೆಯಲು ಬಯಸುತ್ತೇನೆ. ಹಾಗಾಗಿ ನಾನು ಈ ಹಬ್ಬದಲ್ಲಿ ನಿಮ್ಮ ಜೊತೆಗಿದ್ದೇನೆ.

ದೇಶದ ಗಡಿ ಪ್ರದೇಶಗಳಲ್ಲಿ ಆಧುನಿಕ ಗಡಿ ಮೂಲಸೌಕರ್ಯ ಒದಗಿಸಲು ಸಂಪರ್ಕ ಮತ್ತು ಸೇನಾ ನಿಯೋಜನೆ ಹೆಚ್ಚಳ ಮಾಡಲಾಯಿತು. ಲಡಾಖ್‌ನಿಂದ ಅರುಣಾಚಲ ಪ್ರದೇಶ, ಜೈಸಲ್ಮೇರ್‌ನಿಂದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಗಡಿ ಪ್ರದೇಶಗಳಲ್ಲಿ ಸಂಪರ್ಕವು ಸುಧಾರಿಸಿದೆ ಎಂದರು.

ಸಾಮಾನ್ಯ ಸಂಪರ್ಕದ ಕೊರತೆ ಎದುರಿಸುತ್ತಿದ್ದ ಗಡಿಗಳು ಮತ್ತು ಕರಾವಳಿ ಪ್ರದೇಶಗಳಲ್ಲಿ ಈಗ ರಸ್ತೆಗಳು ಸುಧಾರಿಸಿವೆ. ಆಪ್ಟಿಕಲ್ ಫೈಬರ್‌ ಅಳವಡಿಸಲಾಗಿದೆ. ಇದು ಸೇನಾ ಪಡೆಗಳ ನಿಯೋಜನೆಯ ಹಿನ್ನೆಲೆಯಲ್ಲಿ, ಮೂಲ ಸೌಲಭ್ಯಗಳನ್ನು ಸಾಮರ್ಥ್ಯಗಳನ್ನು ಮತ್ತು ಸೈನಿಕರಿಗೆ ಸೌಲಭ್ಯಗಳನ್ನು ಹೆಚ್ಚಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದರು.

ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದನ್ನು ಸ್ಮರಿಸಿದ ಅವರು, ಕಾರ್ಯಚರಣೆ ನಂತರ ಈ ಭಾಗದಲ್ಲಿ ಭಯೋತ್ಪಾಕ ಕೃತ್ಯಗಳನ್ನು ಹರಡಲು ಹಲವು ಪ್ರಯತ್ನಗಳನ್ನು ಮಾಡಲಾಯಿತು ಆದರೆ ಅವರಿಗೆ ಸೇನೆ ತಕ್ಕ ಉತ್ತರ ನೀಡಿದೆ ಎಂದು ಶ್ಲಾಘಿಸಿದರು.

ಈ ಹಿಂದೆ ದೇಶವು ರಕ್ಷಣಾ ವಲಯದಲ್ಲಿ ಆಮದಿನ ಮೇಲೆ ಹೆಚ್ಚಾಗಿ ಅವಲಂಬಿತವಾಗಿತ್ತು. ಆದರೆ ನಮ್ಮ ಸರ್ಕಾರದ ಹಲವು ಪ್ರಯತ್ನಗಳಿಂದ ದೇಶೀಯ ರಕ್ಷಣಾ ಸಾಮರ್ಥ್ಯಕ್ಕೆ ಉತ್ತೇಜನ ದೊರೆತಿದೆ ಎಂದು ಹೇಳಿದರು.

ಬಳಿಕ‌ ಪ್ರಧಾನಿ ನರೇಂದ್ರ ಮೋದಿಯವರು ಸೈನಿಕರಿಗೆ ಸಿಹಿ ತಿನ್ನಿಸಿ ದೀಪಾವಳಿ ಶುಭಾಶಯ ಕೋರಿದರು.

Related posts

100 ಕೋಟಿ ಲಸಿಕೆ ಸಂಭ್ರಮದಲ್ಲಿ ಭಾರತ !!

eNEWS LAND Team

ಇಂದು ಏ.28 ಅಣ್ಣಿಗೇರಿಗೆ ಬಿಜೆಪಿ ಚಾಣಕ್ಯ ಅಮಿತ್ ಶಾ ಆಗಮನಕ್ಕೆ ಕಾಯುತ್ತಿರುವ ಜನ!!!

eNEWS LAND Team

ಮುಂದಿನ ವರ್ಷದಿಂದ ಜಿಲ್ಲಾ ಕೇಂದ್ರಗಳಲ್ಲಿ ಸರ್.ಎಮ್.ವಿ ಜನ್ಮ ದಿನಾಚರಣೆ: ಸಿಎಂ ಬೊಮ್ಮಾಯಿ

eNEWS LAND Team