30 C
Hubli
ಮಾರ್ಚ್ 21, 2023
eNews Land
ದೇಶ

ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್‌ಗೆ ‘ವೀರಚಕ್ರ’ ಪ್ರದಾನ

Listen to this article

ಇಎನ್ಎಲ್ ಬ್ಯೂರೋ

ದೆಹಲಿ:ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್, ಬಾಲಾಕೋಟ್ ವೈಮಾನಿಕ ದಾಳಿಯ ಹೀರೋ ಅಭಿನಂದನ್ ವರ್ಧಮಾನ್‌ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ‘ವೀರಚಕ್ರ’ ಪ್ರದಾನ ಮಾಡಿದರು.

ವಿಂಗ್ ಕಮಾಂಡರ್ ಆಗಿದ್ದ ಅಭಿನಂದನ್ ಅವರು 2019ರ ಫೆಬ್ರುವರಿ 27ರಂದು ಭಾರತದ ವಾಯುಗಡಿ ದಾಟಿ ಬಂದಿದ್ದ ಪಾಕಿಸ್ತಾನದ ಎಫ್‌–16 ಯುದ್ಧ ವಿಮಾನಗಳನ್ನು ಮಿಗ್‌–21 ಯುದ್ಧ ವಿಮಾನದ ಮೂಲಕ ಬೆನ್ನಟ್ಟಿ ಹೋಗಿ ಹೊಡೆದುರುಳಿಸಿದ್ದರು.

ಬಳಿಕ ಮಿಗ್‌–21 ಯುದ್ಧ ವಿಮಾನ ಪತನಗೊಂಡಿದ್ದರಿಂದ ಪಾಕಿಸ್ತಾನಕ್ಕೆ ಸೆರೆ ಸಿಕ್ಕಿದ್ದರು. ಭಾರತ ಸರ್ಕಾರ ಮತ್ತು ಅಂತಾರಾಷ್ಟ್ರೀಯ ಸಮುದಾಯದ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಅವರನ್ನು ಮಾರ್ಚ್‌ 1ರ ರಾತ್ರಿ ಪಾಕಿಸ್ತಾನ ಬಿಡುಗಡೆ ಮಾಡಿತ್ತು. ಬಾಲಾಕೋಟ್ ದಾಳಿಯ ಸಂದರ್ಭದಲ್ಲಿ ಪ್ರದರ್ಶಿಸಿದ ಸಾಹಸಕ್ಕಾಗಿ ಅಭಿನಂದನ್ ಅವರಿಗೆ ಈ ಹಿಂದೆಯೇ ಶೌರ್ಯಚಕ್ರ ನೀಡಿ ಗೌರವಿಸಲಾಗಿದೆ.

ಇತ್ತೀಚೆಗಷ್ಟೇ ಅವರಿಗೆ ಗ್ರೂಪ್ ಕ್ಯಾಪ್ಟನ್ ಆಗಿ ಬಡ್ತಿ ನೀಡಲಾಗಿತ್ತು.
ಇದು ಭಾರತೀಯ ಭೂ ಸೇನಾಪಡೆ ಕರ್ನಲ್‌ ಶ್ರೇಣಿಗೆ ಸಮನಾದ ಹುದ್ದೆಯಾಗಿದೆ.

Related posts

ಭಾರತ ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ಆತ್ಮನಿರ್ಭರ್ ಆಗಬೇಕೆಂಬ ಹಂಬಲ ಬಿಪಿನ್ ರಾವತ್ ಅವರಿಗಿತ್ತು: ಸಿಎಂ

eNEWS LAND Team

ಪ್ರಧಾನಿ ನರೇಂದ್ರ ಮೋದಿಗೆ ಈ ದೇಶದ ಅತ್ಯುನ್ನತ ನಾಗರಿಕ ಗೌರವ

eNEWS LAND Team

ರಾಷ್ಟ್ರಪತಿಗಳಿಂದ ಸೆ.26 ರಂದು ಧಾರವಾಡ ಐಐಐಟಿಯ ನೂತನ ಕ್ಯಾಂಪಸ್ ಉದ್ಘಾಟನೆ

eNEWS LAND Team