29 C
Hubli
ಸೆಪ್ಟೆಂಬರ್ 26, 2023
eNews Land
ದೇಶ

ಜಲಾಂತರ್ಗಾಮಿ ಐಎನ್‌ಎಸ್‌ ವೇಲಾ ನೌಕಾಪಡೆಗೆ ಸೇರ್ಪಡೆ

ಇಎನ್ಎಲ್ ಡೆಸ್ಕ್

ಭಾರತೀಯ ನೌಕಾಪಡೆಯು ಗುರುವಾರ ಮುಂಬೈನ ನೌಕಾನೆಲೆಯಲ್ಲಿ ಜಲಾಂತರ್ಗಾಮಿ ‘ಐಎನ್‌ಎಸ್ ವೇಲಾ’ವನ್ನು ಸೇವೆಗೆ ಸೇರ್ಪಡೆ ಮಾಡಿಕೊಂಡಿದೆ.

‘ವೇಲಾ’ ಆಗಮನದೊಂದಿಗೆ ದೇಶದ ನೌಕಾ ಶಕ್ತಿಗೆ ಮತ್ತಷ್ಟು ಬಲ ಬಂದಿದೆ.

‘ಕಲ್ವರಿ-ಕ್ಲಾಸ್’ ಜಲಾಂತರ್ಗಾಮಿ ಯೋಜನೆ-75ರ ಅಡಿಯಲ್ಲಿ ಭಾರತೀಯ ನೌಕಾಪಡೆಯು ಸೇರ್ಪಡೆ ಮಾಡಿಕೊಳ್ಳಲಿರುವ ಆರು ಜಲಾಂತರ್ಗಾಮಿ ನೌಕೆಗಳ ಪೈಕಿ ಇದು ನಾಲ್ಕನೆಯದ್ದು.

ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಅವರ ಸಮ್ಮುಖದಲ್ಲಿ ಜಲಾಂತರ್ಗಾಮಿ ನೌಕೆಗೆ ಚಾಲನೆ ನೀಡಲಾಯಿತು. ಒಂದೇ ವಾರದ ಅಂತರದಲ್ಲಿ ಭಾರತೀಯ ನೌಕಾಪಡೆಗೆ ಆಗುತ್ತಿರುವ ಎರಡನೇ ಪ್ರಮುಖ ಸೇರ್ಪಡೆ ಇದಾಗಿದೆ.

ನವೆಂಬರ್ 21 ರಂದು ನೌಕಾಪಡೆಯು ಯುದ್ಧನೌಕೆ ‘ಐಎನ್‌ಎಸ್‌ ವಿಶಾಖಪಟ್ಟಣ’ವನ್ನು ಸೇವೆಗೆ ಸೇರ್ಪಡೆ ಮಾಡಿಕೊಂಡಿತ್ತು.

Related posts

ಮೂರು ಕೃಷಿ ಕಾಯಿದೆ ವಾಪಸ್: ಪ್ರಧಾನಿ ಮೋದಿ ಘೋಷಣೆ

eNewsLand Team

ದ ಕಾಶ್ಮೀರ ಫೈಲ್ಸ್: ಕಲಾವಿದೆಗೆ ಗುಂಡಿಕ್ಕಿದ ನರರಾಕ್ಷಸರು!!

eNewsLand Team

ದೇಶದ 21 ನಗರಗಳಲ್ಲಿ ವಾಯು ಗುಣಮಟ್ಟ ಉತ್ತಮ

eNewsLand Team