23 C
Hubli
ಸೆಪ್ಟೆಂಬರ್ 25, 2023
eNews Land
ದೇಶ

ಡಿಜಿಪಿ, ಐಜಿಪಿಗಳ ಸಭೆಗೆ ಪ್ರಧಾನಿ ಮೋದಿ

ಇಎನ್ಎಲ್ ಬ್ಯೂರೋ

ಲಖನೌದಲ್ಲಿರುವ ಪೊಲೀಸ್‌ ಪ್ರಧಾನ ಕಚೇರಿಯಲ್ಲಿ ಶನಿವಾರ ನಡೆಯಲಿರುವ ಪೊಲೀಸ್‌ ಮಹಾನಿರ್ದೇಶಕರು (ಡಿಜಿಪಿ) ಮತ್ತು ಪೊಲೀಸ್‌ ಮಹಾ ನಿರೀಕ್ಷಕರ (ಐಜಿಪಿ) 56ನೇ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.

ನ.‌ 20 ರಿಂದ ಆರಂಭವಾಗುವ ಎರಡು ದಿನಗಳ ಸಮ್ಮೇಳನದಲ್ಲಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಡಿಜಿಪಿಗಳು, ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಗಳು, ಕೇಂದ್ರ ಪೊಲೀಸ್‌ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸುತ್ತಾರೆ.

ಸೈಬರ್‌ ಅಪರಾಧ, ದತ್ತಾಂಶ ನಿರ್ವಹಣೆ, ಭಯೋತ್ಪಾದನೆ ನಿಗ್ರಹದ ಸವಾಲುಗಳು, ಎಡಪಂಥೀಯ ಭಯೋತ್ಪಾದಕತೆ, ಮಾದಕವಸ್ತು ಕಳ್ಳಸಾಗಣೆ ತಡೆ, ಜೈಲು ಸುಧಾರಣೆಗಳು ಸೇರಿ ಇತರ ಅಂಶಗಳನ್ನು ಸಮ್ಮೇಳನದಲ್ಲಿ ಚರ್ಚಿಸಲಾಗುವುದು ಎಂದು ಮೂಲಗಳು ಹೇಳಿವೆ.

2014 ರಿಂದೀಚೆಗೆ ಪ್ರಧಾನಿ ಮೋದಿ ಅವರು ಡಿಜಿ‍ಪಿಗಳ ಸಮ್ಮೇಳನದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದಾರೆ. ರಾಷ್ಟ್ರೀಯ ಭದ್ರತೆಗೆ ಸವಾಲೆಸೆಯುವ ವಿಷಯಗಳ ಮುಕ್ತ ಚರ್ಚೆಗೆ ಇವು ಅವಕಾಶ ಒದಗಿಸುತ್ತವೆ. 2014ರಿಂದ ಪ್ರತಿವರ್ಷ ನಡೆಯುತ್ತಿರುವ ಈ ಸಮ್ಮೇಳನವು 2020ರಲ್ಲಿ ಕೋವಿಡ್‌ ಹಿನ್ನೆಲೆ ವರ್ಚುವಲ್‌ ಮಾದರಿಯಲ್ಲಿ ನಡೆದಿತ್ತು.

Related posts

ರಾಷ್ಟ್ರಪತಿಗಳಿಂದ ಸೆ.26 ರಂದು ಧಾರವಾಡ ಐಐಐಟಿಯ ನೂತನ ಕ್ಯಾಂಪಸ್ ಉದ್ಘಾಟನೆ

eNEWS LAND Team

ಎಲ್ಲಾ ರಾಜ್ಯಗಳ ಮುಖ್ಯಮಂತ್ರಿ ಗಳೊಂದಿಗೆ ಸಂವಾದ ನಡೆಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ

eNEWS LAND Team

ಪದ್ಮಶ್ರೀ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆ: ಕೃಷಿ ವಿಜ್ಞಾನಿ ಎ.ಆಯ್.ನಡಕಟ್ಟಿನ

eNEWS LAND Team