ಇಎನ್ಎಲ್ ಇನ್ಫಾರ್ಮೇಶನ್ ಸೆಂಟರ್
ಮಹಾರತ್ನ ಕಂಪನಿ ಎಂಬ ಸ್ಥಾನಮಾನವನ್ನು 2009 ರಲ್ಲಿ ಪ್ರಾರಂಭಿಸಲಾಗಿದೆ. ಬೃಹತ್ ಗಾತ್ರದ ನವರತ್ನ ಉದ್ಯಮಗಳ ಮಂಡಳಿಗಳಿಗೆ ಹೆಚ್ಚಿನ ಸ್ವಾಯತ್ತತೆಯನ್ನು ನೀಡುವುದು ಇದರ ಉದ್ದೇಶವಾಗಿದೆ. ಇದರಿಂದಾಗಿ ಉದ್ಯಮಗಳು ದೇಶೀಯ ಮಾರುಕಟ್ಟೆಯಲ್ಲಿ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತವೆ.
ಮಹಾರತ್ನ ಮಾನದಂಡಗಳೇನು?
ಕಂಪನಿಯು ಷೇರು ವಿನಿಮಯ ಕೇಂದ್ರದಲ್ಲಿ ಪಟ್ಟಿ ಮಾಡಬೇಕು. ಕಳೆದ ಮೂರು ವರ್ಷಗಳಲ್ಲಿ ಕಂಪನಿಯ ಸರಾಸರಿ ವಹಿವಾಟ 20ಸಾವಿರ ಕೋಟಿ. ಈ ಸಮಯದಲ್ಲಿ ಕಂಪನಿಯು. ಸರಾಸರಿ ₹2,500 ಕೋಟಿ ರು. ನಿವ್ವಳ ಲಾಭ ಗಳಿಸಿರಬೇಕು.
ಮೂರು ವರ್ಷಗಳಲ್ಲಿ ಕಂಪನಿಯ ಸರಾಸರಿ ನಿವ್ವಳ ಮೌಲ್ಯ ರೂ. 15,000 ಕೋಟಿ ಆಗಿರಬೇಕು. ಕಂಪನಿಗೆ ನವರತ್ನ ಸ್ಥಾನಮಾನ ಇರಬೇಕು. ಕಂಪನಿಯು ವಿದೇಶದಲ್ಲಿ ವ್ಯವಹಾರವನ್ನು ಹೊಂದಿರಬೇಕು.
ಪ್ರಸ್ತುತ ಮಹಾರತ್ನ ಕಂಪನಿಗಳ ಸಂಖ್ಯೆ 11 ಆಗಿದೆ. ಕಳೆದ ಅಕ್ಟೋಬರ್ 12 ರಂದು, ಕೇಂದ್ರ ಸರ್ಕಾರವು ಪವರ್ ಫೈನಾನ್ಸ್ ಕಾರ್ಪೊರೇಶನ್‌ಗೆ ಮಹಾರತ್ನ ಸ್ಥಾನಮಾನವನ್ನು ನೀಡಿತು. ಇದರಿಂದಾಗಿ ಅದು 11ನೇ ಮಹಾರತ್ನ ಕಂಪನಿಯಾಯಿತು.
ಈ ಹಿಂದೆ ಅಕ್ಟೋಬರ್ 23, 2019 ರಂದು ಎರಡು ನವರತ್ನ ಕಂಪನಿಗಳಾದ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಮತ್ತು ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (PGCL) ಗೆ ಮಹಾರತ್ನ ಸ್ಥಾನಮಾನವನ್ನು ನೀಡಲಾಯಿತು. ನವರತ್ನ ಕಂಪನಿಗಳ ಸಂಖ್ಯೆ 14 ಕ್ಕೆ ಇಳಿದಿದೆ. ನವರತ್ನ ಮತ್ತು ಮಿನಿರತ್ನ ಯೋಜನೆಯನ್ನು ಕೇಂದ್ರ ಸರ್ಕಾರ 1997 ರಲ್ಲಿ ಮತ್ತು ಮಹಾರತ್ನ ಯೋಜನೆಯನ್ನು 2009 ರಲ್ಲಿ ಪ್ರಾರಂಭಿಸಿತು.
🏗 ಭಾರತದ ಮಹಾರತ್ನ ಕಂಪನಿಗಳು –
1. ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL)
2. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL)
3. ಕೋಲ್ ಇಂಡಿಯಾ ಲಿಮಿಟೆಡ್ (CIL)
4. ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (GAIL)
5. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL)
6. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL)
7. ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ (NTPC)
8. ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC)
9. ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (PGCIL)
10. ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL)
11. ಪವರ್ ಫೈನಾನ್ಸ್ ಕಾರ್ಪೊರೇಷನ್ (PFC)