34 C
Hubli
ಮಾರ್ಚ್ 23, 2023
eNews Land
ದೇಶ ರಾಜಕೀಯ

ಕೇಂದ್ರ ಪಂಚಾಯತ್ ರಾಜ್ ಸಚಿವರಿಂದ ಮುಖ್ಯಮಂತ್ರಿಗಳ ಭೇಟಿ

Listen to this article

ಇಎನ್ಎಲ್ ಬೆಂಗಳೂರು: 

ಪಂಚಾಯಿತಿಗಳ ಕಾರ್ಯವೈಖರಿಗೆ ಮೆಚ್ಚುಗೆ

ಕೇಂದ್ರ ಪಂಚಾಯತ್ ರಾಜ್ ಸಚಿವ ಕಪಿಲ್ ಮೊರೇಶ್ವರ ಪಾಟೀಲ್ ಅವರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ದೊಡ್ಡಜಾಲ ಮತ್ತು ರಾಜಾನುಕುಂಟೆ ಪಂಚಾಯತಿಗಳಿಗೆ ತಾವು ಇಂದು ಭೇಟಿ ನೀಡಿದ್ದು, ಗ್ರಾಮೀಣ ಭಾಗದಲ್ಲಿ ಆಸ್ತಿ ಸೃಜನೆಗೆ ಹಾಗೂ ಗ್ರಾಮೀಣ ಆರ್ಥಿಕತೆಗೆ ಮಹತ್ವ ನೀಡಿರುವ ಬಗ್ಗೆ ಮಹತ್ವ ನೀಡಲಾಗಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಡಿಜಿಟಲ್ ಗ್ರಂಥಾಲಯಗಳಿಗೂ ಭೇಟಿ ನೀಡಿದ್ದಾಗಿ ತಿಳಿಸಿದ ಸಚಿವರು, ಭಾರತ್ ನೆಟ್ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಅಂತರ್ಜಾಲ ವ್ಯವಸ್ಥೆ ಉತ್ತಮಗೊಳಿಸುವಂತೆ ಸಲಹೆ ನೀಡಿದರು.

ಇದಕ್ಕೆ ಈಗಾಗಲೇ ರಾಜ್ಯದ 5960 ಗ್ರಾಮ ಪಂಚಾಯಿತಿಗಳಿಗೂ ಅಂತರ್ಜಾಲ ವ್ಯವಸ್ಥೆ ಕಲ್ಪಿಸಲಾಗಿದ್ದು, ಕಟ್ಟ ಕಡೆಯ ವ್ಯಕ್ತಿಯೂ ಅಂತರ್ಜಾಲ ಸೌಲಭ್ಯ ಕಲ್ಪಿಸುವ ಪ್ರಯತ್ನ ಜಾರಿಯಲ್ಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಅಮೃತ ಯೋಜನೆಯಡಿ 7500 ಸ್ತ್ರೀ ಶಕ್ತಿ ಗುಂಪುಗಳಿಗೆ ಸ್ವಯಂ ಉದ್ಯೋಗಕ್ಕಾಗಿ 1 ಲಕ್ಷ ರೂ.ಗಳ ಅನುದಾನ ನೀಡುವ ಯೋಜನೆಯನ್ನು ಘೋಷಿಸಲಾಗಿದೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಸದೃಢವಾಗಿದ್ದು, ಅದನ್ನು ಇನ್ನಷ್ಟು ಬಲಪಡಿಸಲು ಆರ್ಥಿಕ ನೆರವು ಅಗತ್ಯವೆಂದ ಮುಖ್ಯಮಂತ್ರಿಗಳು, ಪಂಚಾಯತಿಗಳಲ್ಲಿ ಆರ್ಥಿಕತೆಯ ವಿಕೇಂದ್ರೀಕರಣವೂ ಆಗಬೇಕು.

ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಶಾಲಾ ಕಟ್ಟಡಗಳಿಗೆ ಅನುದಾನ ದೊರೆತರೆ ಆಸ್ತಿ ಸೃಜನೆಗೆ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಗಳು ಹೇಳಿದರು.

ಸಭೆಯಲ್ಲಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಬಿ.ಡಿ.ಎ.ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಉಪಸ್ಥಿತರಿದ್ದರು.

Related posts

ಯಾವ ವಾರ್ಡು? ಯಾರು? ನೋಡಿ. ಅಣ್ಣಿಗೇರಿ ಪುರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ

eNEWS LAND Team

ಕುವೈತ್’ನಲ್ಲಿ ಡಾಕ್ಟರ್ ವೃತ್ತಿಗಾಗಿ 468 ಹುದ್ದೆಗಳಿಗೆ ನೇರ ಸಂದರ್ಶನ

eNEWS LAND Team

ವಿಪ ಕದನ; ಸಂತೆ, ಜಾತ್ರೆ, ಉತ್ಸವ ನಿಷೇಧಿಸಿದ ಜಿಲ್ಲಾಧಿಕಾರಿ ಹೆಗಡೆ

eNewsLand Team