19 C
Hubli
ಜನವರಿ 19, 2022
eNews Land
ವಿದೇಶ

ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಲಾಕ್ ಹೀಡ್ ಮಾರ್ಟಿನ್ ಸಂಸ್ಥೆ ಉಪಾಧ್ಯಕ್ಷ

Listen to this article

ಇಎನ್ಎಲ್ ಬೆಂಗಳೂರು, ನ.12:
ಬೆಂಗಳೂರಿನಲ್ಲಿ ಏರೋಸ್ಪೇಸ್ ತಂತ್ರಜ್ಞಾನಕ್ಕೆ ವಿಪುಲ ಅವಕಾಶಗಳಿದ್ದು, ಲಾಕ್ ಹೀಡ್ ಮಾರ್ಟಿನ್ ಸಂಸ್ಥೆ ತನ್ನ ಅಸ್ತಿತ್ವವನ್ನು ಹೊಂದಲು ಅಗತ್ಯ ಸಹಕಾರ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಲಾಕ್ ಹೀಡ್ ಮಾರ್ಟಿನ್ ಸಂಸ್ಥೆಯ ಅಂತರರಾಷ್ಟ್ರೀಯ ಸರಬರಾಜು ಸರಪಳಿ ಮತ್ತು ಕೈಗಾರಿಕಾ ಅಭಿವೃದ್ಧಿ ಉಪಾಧ್ಯಕ್ಷ ವಿನ್ಸೆಂಟ್ ಪ್ಯಾನ್ಜೆರಾ ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.

ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದ್ದು, ವಿಶ್ವದಲ್ಲಿಯೇ 6 ನೇ ಸ್ಥಾನವನ್ನು ಹೊಂದಿದೆ. ಕರ್ನಾಟಕ ಮತ್ತು ಬೆಂಗಳೂರು ಭವಿಷ್ಯದ ತಂತ್ರಜ್ಞಾನದ ಶಕ್ತಿಕೇಂದ್ರಗಳು ಎಂದರು.

ಲಾಕ್ ಹೀಡ್ ಮಾರ್ಟಿನ್ ಕಂಪನಿ ಜಗತ್ತಿನ ಪ್ರಮುಖ ರಕ್ಷಣಾ ತಂತ್ರಜ್ಞಾನ ಸಂಸ್ಥೆಯಾಗಿದೆ. ಏರೋಸ್ಪೇಸ್ ಅವಕಾಶಗಳು ಬೆಂಗಳೂರಿನಲ್ಲಿ ಹೆಚ್ಚಿವೆ ಎಂದರು.
ರಾಜ್ಯ ಸರ್ಕಾರದ ಹೂಡಿಕೆದಾರ ಸ್ನೇಹಿ ನೀತಿ ಹಾಗೂ ಪ್ರೋತ್ಸಾಹಕಗಳಿಂದಾಗಿ ಕೈಗಾರಿಕೆಗಳ ಸ್ಥಾಪನೆಗೆ ಪೂರಕ ವಾತಾವರಣವನ್ನು ಹೊಂದಿರುವುದಾಗಿ ತಿಳಿಸಿದರು.

ಐ.ಟಿ.ಬಿ.ಟಿ.ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ: ಇ.ವಿ.ರಮಣರೆಡ್ಡಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related posts

ಟಿಪಿಎಲ್‌ಎಫ್ ವಶಕ್ಕೆ ಎರಡು ನಗರ; ಇಥಿಯೋಪಿಯದಲ್ಲಿ ತುರ್ತು ಪರಿಸ್ಥಿತಿ

eNewsLand Team

ಅಮೇರಿಕಾ ಹಿಂದಿಕ್ಕಿ ವಿಶ್ವದ ಶ್ರೀಮಂತ ರಾಷ್ಟ್ರವಾಯ್ತು ಈ ರಾಷ್ಟ್ರ

eNewsLand Team

ಟಿಬೆಟಿಯನ್ ಭಾಷಾ ಕಲಿಕೆ ಬ್ಯಾನ್ ಮಾಡಿದ ಡ್ರ್ಯಾಗನ್ !

eNewsLand Team