ನವೆಂಬರ್ 28, 2022
eNews Land
ವಿದೇಶ

ಟಿಪಿಎಲ್‌ಎಫ್ ವಶಕ್ಕೆ ಎರಡು ನಗರ; ಇಥಿಯೋಪಿಯದಲ್ಲಿ ತುರ್ತು ಪರಿಸ್ಥಿತಿ

Listen to this article

ಟಿಪಿಎಲ್‌ಎಫ್ ವಶಕ್ಕೆ ಎರಡು ನಗರ; ಇಥಿಯೋಪಿಯದಲ್ಲಿ ತುರ್ತು ಪರಿಸ್ಥಿತಿ

ಇಎನ್ಎಲ್ ಬ್ಯೂರೋ

ಟೈಗ್ರೇ ಪೀಪಲ್ಸ್ ಲಿಬರೇಶನ್ ಫ್ರಂಟ್ (ಟಿಪಿಎಲ್‌ಎಫ್) ಹೇಳಿಕೊಂಡ ಬಳಿಕ ಇಥಿಯೋಪಿಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದು, ದೇಶವನ್ನು ರಕ್ಷಿಸಲು ತನ್ನ ನಾಗರಿಕರಲ್ಲಿ ಮೊರೆ ಇಟ್ಟಿದೆ.

ರಾಜಧಾನಿಯಿಂದ ಕೇವಲ 400 ಕಿಮೀ ದೂರದಲ್ಲಿರುವ ಅಮ್ಹಾರಾ ಪ್ರದೇಶದಲ್ಲಿ ಡೆಸ್ಸಿ ಮತ್ತು ಕೊಂಬೋಲ್ಚಾ ಪಟ್ಟಣಗಳನ್ನು ವಶಪಡಿಸಿಕೊಂಡಿರುವುದಾಗಿ ಟಿಪಿಎಲ್‌ಎಫ್ ಹೇಳಿತು. ಅದರ ಬೆನ್ನಲ್ಲೇ ಇಥಿಯೋಪಿಯಾ ಮಂಗಳವಾರ ಪರಿಸ್ಥಿತಿ ಘೋಷಿಸಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ.

ಟಿಪಿಎಲ್‌ಎಫ್ ಪಡೆಗಳು ಮುಂದುವರಿದು ದಕ್ಷಿಣಕ್ಕೆ ಅಡಿಸ್ ಅಬಾಬಾ ಕಡೆಗೆ ಮುನ್ನಡೆಯಬಹುದು ಎಂದು ವರದಿ‌ ಆಗಿದೆ.

ಸರ್ಕಾರ ಮತ್ತು ಟೈಗ್ರೇ ಪಡೆಗಳು ಕಳೆದ ಒಂದು ವರ್ಷದಿಂದ ಜಟಾಪಟಿ ನಡೆಸುತ್ತಿವೆ. ಕಳೆದ ಕೆಲ ದಿನಗಳಲ್ಲಿ ಇದು‌ ವಿಕೋಪಕ್ಕೆ ತಿರುಗಿದೆ. ಪರಿಣಾಮ ಉತ್ತರ ಇಥಿಯೋಪಿಯಾದಲ್ಲಿ ಸಂವಹನ ಸ್ಥಗಿತಗೊಂಡಿದೆ.

ಯುಎನ್ ಜನರಲ್-ಸೆಕ್ರೆಟರಿ ಆಂಟೋನಿಯೊ ಗುಟೆರೆಸ್ ಯುದ್ಧವನ್ನು ತಕ್ಷಣವೇ ನಿಲ್ಲಿಸುವಂತೆ ಕರೆ ನೀಡಿದ್ದಾರೆ. ಹಾರ್ನ್ ಆಫ್ ಆಫ್ರಿಕಾದ ಯುಎಸ್ ವಿಶೇಷ ರಾಯಭಾರಿ ಜೆಫ್ರಿ ಫೆಲ್ಟ್‌ಮ್ಯಾನ್ ಗುರುವಾರ ಮಾತುಕತೆಗಾಗಿ ಇಥಿಯೋಪಿಯಾಕ್ಕೆ ಪ್ರಯಾಣಿಸಲಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಈ ಮಧ್ಯೆ ಅಮೇರಿಕಾದ ಅಧ್ಯಕ್ಷ ಜೋ ಬೈಡೆನ್
ಟೈಗ್ರೇಯಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಯು ನಿರಂತರವಾಗಿ ನಡೆಯುತ್ತಲೇ ಇರುವ ಕಾರಣ ಇಥಿಯೋಪಿಯಕ್ಕೆ ಯುನೈಟೆಡ್ ಸ್ಟೇಟ್ಸ್‌ಗೆ ಸುಂಕ ಮುಕ್ತ ಪ್ರವೇಶವ ಅವಕಾಶ ತೆಗೆದುಹಾಕುವುದಾಗಿ ಹೇಳಿದ್ದರು.

Related posts

 ದ.ಆಫ್ರಿಕಾದ ಹೋರಾಟಗಾರ ಡೆಸ್ಮಂಡ್‌ ಟುಟು ನಿಧನ

eNewsLand Team

ಇಸ್ರೇಲ್ ಪ್ರಧಾನಿಯಿಂದ ದೀಪಾವಳಿ ಶುಭಾಶಯ

eNEWS LAND Team

ಬ್ರಿಟನ್‌: ಗಾಂಧಿ ಸ್ಮರಣಾರ್ಥ 5 ಪೌಂಡ್‌ಗಳ ಹೊಸ ನಾಣ್ಯ ಬಿಡುಗಡೆ

eNEWS LAND Team