ಇಎನ್ಎಲ್ ಡೆಸ್ಕ್ :
ಆರೋಗ್ಯವನ್ನು ಕಾಪಾಡುವ ಬಾಳೆಹಣ್ಣು ಹೆಚ್ಚು ಪ್ರಯೋಜನ ಹೊಂದಿದೆ. ಊಟದ ಕೊನೆಯಲ್ಲಿ ಒಂದು ಬಾಳೆಹಣ್ಣು ತಿಂದರೆ ತೃಪ್ತಿಯಾಗುತ್ತೆ. ದೇಹ ಹಗರುವಾಗುವ ಜೊತೆಗೆ ಜೀರ್ಣ ಕ್ರಿಯೆ ಚೆನ್ನಾಗಿ ಆಗುತ್ತದೆ. ಬಾಳೆಹಣ್ಣು ಖನಿಜಾಂಶ, ವಿಟಮಿನ್, ಫೈಬರ್ ಅಂಶಗಳನ್ನು ಹೊಂದಿದೆ. ವಿಶ್ವದಾದ್ಯಂತ ವಿವಿಧ ತರಹದ ಬಾಳೆಹಣ್ಣುಗಳು ಇವೆ. ಈ ಪೈಕಿ ಕೆಂಪು ಬಾಳೆಹಣ್ಣು ಕೂಡಾ ಒಂದು. ಕೆಂಪು ಬಾಳೆಹಣ್ಣು ಹೆಚ್ಚು ಪ್ರಸಿದ್ಧಿ ಹೊಂದಿಲ್ಲ. ಆದರೆ ಇತರೆ ಬಾಳೆಹಣ್ಣಿಗಿಂತ ಕೆಂಪು ಬಾಳೆಹಣ್ಣು ಹೆಚ್ಚು ಸಿಹಿಯಾಗಿರುತ್ತದೆ. ಜೊತೆಗೆ ಇದನ್ನು ಸೇವಿಸುವುದರಿಂದ ಕೆಲ ಪ್ರಯೋಜನಗಳನ್ನ ಪಡೆದುಕೊಳ್ಳಬಹುದು.
ತೂಕ
ಕೆಂಪು ಬಾಳೆಹಣ್ಣು ಸೇವಿಸುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ. ಇದರಲ್ಲಿ ಇರುವ ನಾರಿನಂಶ ಪದೇ ಪದೇ ಹಸಿವಾಗದಂತೆ ನೋಡಿಕೊಳ್ಳುತ್ತದೆ. ತೂಕ ಇಳಿಸುವವರು ಅನ್ನದ ಬದಲು ಒಂದು ಕೆಂಪು ಬಾಳೆಹಣ್ಣನ್ನು ತಿನ್ನಬಹುದು.
ರೋಗ ನಿರೋಧಕ ಶಕ್ತಿ
ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೆಂಪು ಬಾಳೆಹಣ್ಣು ಸೇವಿಸುವುದು ಅನಿವಾರ್ಯ. ಕೊರೊನಾ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಎಲ್ಲಾ ರೀತಿಯ ವಿಧಾನಗಳನ್ನು ಅನುಸರಿಸುತ್ತಾರೆ. ಈ ವಿಧಾನಕ್ಕೆ ಕೆಂಪು ಬಾಳೆಹಣ್ಣು ಸೇವಿಸುವುದನ್ನು ಸೇರಿಸಿ.
ಮುಖದ ಕಾಂತಿ
ಕೆಂಪು ಬಾಳೆಹಣ್ಣಿನಿಂದ ಮುಖದ ಕಾಂತಿಯನ್ನೂ ಹೆಚ್ಚಿಸಬಹುದು. ಬಾಳೆಹಣ್ಣನ್ನು ಕಿವುಚಿ ಅದಕ್ಕೆ ಮೂರ್ನಾಲ್ಕು ಜೇನುತುಪ್ಪ ಹನಿಗಳನ್ನು ಹಾಕಿ ಮಿಶ್ರಣ ಮಾಡಿ. ನಂತರ ಮುಖಕ್ಕೆ ಹಚ್ಚಿ. ಒಣಗಿದ ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ. ಈ ಮೂಲಕ ಮುಖದ ಕಾಂತಿ ಹೆಚ್ಚಾಗುತ್ತದೆ.
ಕೂದಲು ಉದುರುವಿಕೆ
ಕೂದಲು ಮುಖದ ಕಾಂತಿಯನ್ನು ಹೆಚ್ಚಿಸುವ ಜೊತೆಗೆ ಕೂದಲು ಉದುರುವಿಕೆಯನ್ನು ತಡೆಗಟ್ಟಬಹುದು. ತೆಂಗಿನ ಎಣ್ಣೆ ಅಥವಾ ಸಾಸಿವೆ ಎಣ್ಣೆಗೆ ಕಿವುಚಿದ ಕೆಂಪು ಬಾಳೆಹಣ್ಣು ಮಿಶ್ರಣ ಮಾಡಿ. ನಂತರ ತಲೆ ಬುಡಕ್ಕೆ ಹಚ್ಚಿ. ಹೀಗೆ ಮಾಡುವುದರಿಂದ ಕೂದಲು ಉದುರುವುದು ನಿವಾರಣೆಯಾಗುತ್ತದೆ.
ಕೃಪೆ: ಸಾಮಾಜಿಕ ಜಾಲತಾಣ