27 C
Hubli
ಜುಲೈ 1, 2022
eNews Land
ಆರೋಗ್ಯ

ರಾಜ್ಯಕ್ಕೆ ಹೆಲ್ತ್ ವಿಷನ್ ದಾಖಲೆ ರೂಪಿಸಲಾಗುವುದು : ಸಿಎಂ

Listen to this article

ಇಎನ್ಎಲ್ ಬೆಂಗಳೂರು

ರಾಜ್ಯಕ್ಕೆ ಶಾಶ್ವತವಾದ ಹಾಗೂ ದೂರದೃಷ್ಟಿಯ ಹೆಲ್ತ್ ವಿಷನ್ ದಾಖಲೆ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶ್ರೀ ಜಯದೇವ ಹೃದ್ರೋಗ ಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ವತಿಯಿಂದ ನಿರ‍್ಮಾಣಗೊಂಡಿರುವ ೩೫೦ ಹಾಸಿಗೆ ಸಾರ‍್ಥ್ಯದ ನೂತನ ಹೃದ್ರೋಗ ಆಸ್ಪತ್ರೆಯನ್ನು ಉದ್ಘಾಟಿಸಿ ಅವರು ಇಂದು ಮಾತನಾಡಿದರು.

ಕರ್ನಾಟಕ ಪ್ರಗತಿಪರವಾದ ರಾಜ್ಯ. ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ವೃದ್ಧಿಸಲಾಗುವುದು. ಈ ವರ್ಷ ೨೫೦ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಮುಂದಿನ ವರ್ಷ ಕೇಂದ್ರ ಸರ್ಕಾರದ ಸಹಾಯದಿಂದ ೨೫೦ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯ ಕೈಗೊಳ್ಳಲಾಗುವುದು.

ಇದಲ್ಲದೆ ಸ್ಪೆಷಲಿಸ್ಟ್ ಆಸ್ಪತ್ರೆ ಹಾಗೂ ಪ್ರಾದೇಶಿಕ ಕೇಂದ್ರಗಳಲ್ಲಿ ಹೃದ್ರೋಗ, ಕ್ಯಾನ್ಸೆರ್ ಆಸ್ಪತ್ರೆಗಳ ನಿರ್ಮಾಣಕ್ಕೆ ಸರ್ಕಾರ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

Related posts

ಎಸ್ಡಿಎಂ: ಕೋವಿಡ್ 204 ಕ್ಕೆ ಏರಿಕೆ, ಮತ್ತೂ ಹೆಚ್ಚಾಗೋ ಸಾಧ್ಯತೆ

eNewsLand Team

ಎಸ್ ಡಿ ಎಂ: ಹೊಸ 77 ಕೋವಿಡ್ ಪ್ರಕರಣ ದೃಢ, ಒಟ್ಟಾರೆ 281 ಸೋಂಕಿತರು!

eNewsLand Team

ಕ್ಯಾರೆಟ್ ದೇಹಕ್ಕೆ ಏಕೆ ಮುಖ್ಯ?

eNewsLand Team