21 C
Hubli
ನವೆಂಬರ್ 12, 2024
eNews Land
ಆರೋಗ್ಯ

ಉಚಿತ ನೇತ್ರ ತಪಾಸಣೆ ಶಿಬಿರ

ಇಎನ್ಎಲ್ ಹುಬ್ಬಳ್ಳಿ;

ಪಿಯಾಗಿಯೋ ಅನಮೋಲ್ ದೃಷ್ಟಿ ಸೇವಾಭಾರತಿ ಟ್ರಸ್ಟ್ ಹಾಗೂ ಚಂದ್ರಶೇಖರ ಗೋಕಾಕ ಸಂಚಾಲಿತ ಜ್ಞಾನಗಂಗಾ ಸಂಸ್ಥೆ ವತಿಯಿಂದ, ಹುಬ್ಬಳ್ಳಿ ನಗರದ ವ್ಯಾಪ್ತಿಯಲ್ಲಿ ಬರುವ ಆಟೋ ಚಾಲಕರಿಗೆ ಉಚಿತ ನೇತ್ರ ತಪಾಸಣೆ ಹಾಗೂ ಕನ್ನಡಕ ವಿತರಣಾ ಶಿಬಿರ ಇಂದು ನಡೆಯಿತು.ಒಟ್ಟು 200 ಆಟೋ ಚಾಲಕರು ಈ ಶಿಬಿರದ ಸದುಪಯೋಗ ಪಡೆದುಕೊಂಡರು. ಕಾರ್ಯಕ್ರಮದ ಸಾನಿಧ್ಯವನ್ನು ರುದ್ರಾಕ್ಷಿಮಠದ ಬಸವಲಿಂಗಾನಂದ ಶ್ರೀ ಕಾರ್ಯಕ್ರಮದ ನೇತೃತ್ವವನ್ನು ಜ್ಞಾನಗಂಗಾದ ಮುಖ್ಯಸ್ಥ ಚಂದ್ರಶೇಖರ ಗೋಕಾಕ ಅವರು ವಹಿಸಿದ್ದರು.ಸೇವಾಭಾರತಿ ಟ್ರಸ್ಟ್ ನ ಕಾರ್ಯದರ್ಶಿ ಗೋವರ್ಧನರಾವ್, ಸಂಜೀವ ಕುಲಕರ್ಣಿ, ಡಾ.ತೃಪ್ತಿ, ಡಾ.ರವೀಂದ್ರ ಏಲಕಾನ ಹಾಗೂ ಎಮ್ ಎಮ್ ಜೋಶಿ ಆಸ್ಪತ್ರೆಯ ಸಿಬ್ಬಂದಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ಬಾದಾಮ್.. ಬಾದಾಮ್.. ಕಚ್ಚಾ ಬಾದಾಮ್…

eNEWS LAND Team

ಧಾರವಾಡ: ಎಸ್ಡಿಎಂ ಕಾಲೇಜಿನ 66 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್!

eNewsLand Team

ಮಾನಸಿಕ ಖಾಯಿಲೆಗಳಿಗೆ ಕಾರಣ ಏನು ಗೊತ್ತಾ? -ಡಾ. ಪಾಂಡುರಂಗಿ ಹೇಳಿದ ವಿಶೇಷ!!

eNewsLand Team